ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಕ್ತಿ ವಿಶೇಷ ೪೮೭ ೧೫೩. ಸುಮಾಲಿ

  • ಈತನು ಲಂಕೆಯಲ್ಲಿ ವಾಸವಿದ್ದ ಒಬ್ಬ ರಾಕ್ಷಸ; ರಾವಣನ ಸೋದರಮಾವ.

ಈತನ ಪತ್ನಿಯ ಹೆಸರು ಕೇತುಮತಿ ಮತ್ತು ಮಗಳು ಕೈಕಸಿ ಅಥವಾ ಕೇಶಿನಿ. ಇವಳಲ್ಲದೆ ರಾಕಾ, ಪುಷೋತ್ಕಟಾ, ಬಲಾಕಾ ಎಂಬ ಕನ್ಯಯರ ವಿವಾಹವೂ ವಿಶ್ರವನ ಜೊತೆ ನಡೆದಿತ್ತು. ಈತನು ಸುಕೇಶನ ಎರಡನೆಯ ಮಗನಿದ್ದನು. ಇವನಿಗೆ ಪ್ರಹಸ್ಯ ಅಕಂಪನಾದಿ ಎಂಬ ಹನ್ನೊಂದು ಗಂಡುಮಕ್ಕಳು ಮತ್ತು ಮೂರು ಕನೈಯರಾದರು. ವೈಶ್ರವಣ ಕುಬೇರನನ್ನು ಕಂಡು, ಆತನಂತೆ ತನಗೆ ಘನವಂತಿಕೆ ದೊರೆಯಬೇಕೆಂದು, ತನ್ನ ಕನ್ಯಯು ವಿಶ್ರವನನ್ನು ಮದುವೆಯಾಗ ಬೇಕೆಂದು ತಾನಾಗಿ ಈ ಕಸ್ಯೆಯನ್ನು ವಿಸ್ತವನ ಬಳಿ ಕಳುಹಿದನು. ಈ ವಿವಾಹದಿಂದ ಅವಳಿಗೂ ವೈಶ್ರವಣನಂತಹ ಗಂಡುಮಕ್ಕಳು ಹುಟ್ಟುವರೆಂದೆನಿಸುತ್ತಿತ್ತು. ರಾವಣ ಮುಂತಾದವರಿಗೆ ವರಗಳು ದೊರೆತಿವೆ ಎಂಬುದನ್ನು ಕೇಳಿ ಇವನು ರಸಾತಳದಿಂದ ಮೇಲಕ್ಕೆ ಬಂದನು. ರಾವಣನನ್ನು ಕಂಡು 'ಇನ್ನು ರಾಕ್ಷಸರಿಗೆ ವಿಷ್ಣುವಿನಿಂದ ಭಯವಿಲ್ಲದಂತಾಯಿತು. ಲಂಕಾ ನಗರವು ರಾಕ್ಷಸರ ಗಂಡುಮೆಟ್ಟಾಯಿತು. ನೀನು ಬೇಕಾದ ಉಪಾಯವನ್ನು ಮಾಡಿ ಲಂಕೆಯನ್ನು ವೈಶ್ರವಣ ಕುಬೇರನಿಂದ ಪಡೆದುಕೊ! ನೀನು ಲಂಕಾಧಿಪತಿಯಾಗು' ಎಂದು ನುಡಿದನು. ಹನುಮಾನನು ಸುಮಾಲಿಯ ಮನೆಗೆ ಬೆಂಕಿ ಹಚ್ಚಿದ್ದನು. ದೇವತೆಗಳ ಸೈನ್ಯದೊಡನೆ ಯುದ್ದ ಮಾಡುತ್ತಿದ್ದಾಗ ಸಾವಿತ್ರವಸು ಎಂಬಾತನು ಈತನನ್ನು ಈತನ ಗದೆಯಿಂದಲೇ ನುಚ್ಚುನುರಿ ಮಾಡಿದನು. ೧೫೪, ಸುರಸಾ ಇವಳು ಕಶ್ಯಪ ಮತ್ತು ಕ್ರೋಧವಶ ಈ ದಂಪತಿಗಳ ಮಗಳು. ಹನುಮಾನನ ಬಲವನ್ನು ಪರೀಕ್ಷಿಸುವ ಉದ್ದೇಶದಿಂದ ದೇವತೆಗಳು ಸುರಸೆಗೆ ರಾಕ್ಷಸಿಯಾಗಲು ಬಿಸಿದರು. ಮುಗಿಲಿನೆತ್ತರ ಬಾಯಿಯನ್ನು ವಿಸ್ತರಿಸಿ ಲಂಕೆಯತ್ತ ಹೊರಟ ಹನುಮಾನನಿಗೆ ವಿಘ್ನವನ್ನುಂಟುಮಾಡಲು ಸುರಸೆಗೆ ಹೇಳಿದರು. ದೇವತೆಗಳ ಹೇಳಿಕೆಯಂತೆ ಸುರಸೆ ತನ್ನ ಬಾಯಿಯನ್ನು ಅಗಲವಾಗಿ ತೆರೆದಳು. ಲಂಕೆಯತ್ತ ಆಕಾಶಮಾರ್ಗವಾಗಿ ಹೋಗುತ್ತಿದ್ದ ಹನುಮಾನನಿಗೆ ತನ್ನ ಬಾಯಿಯಲ್ಲಿ ಪ್ರವೇಶಿಸಲು ಹೇಳಿದಳು. ಆಗ ಹನುಮಾನನು ತನ್ನ ದೇಹವನ್ನು ಅವಳ ಬಾಯಿಗಿಂತ ದೊಡ್ಡದಾಗಿ ಮಾಡಿದನು. ಆಗ ಸುರಸೆಯು ತನ್ನ ಬಾಯಿಯನ್ನು ಇನ್ನಷ್ಟು ವಿಸ್ತರಿಸಿದಳು. ತಕ್ಷಣ ಹನುಮಾನನು ತನ್ನ ಆಕಾರವನ್ನು ಹೆಬ್ಬೆರಳಿನಷ್ಟು ಚಿಕ್ಕದನ್ನಾಗಿ