ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಥಳವಿಶೇಷ ೪೯೭ ೧. ಋಕ್ಷಗುಹೆ ಈ ಗುಹೆಯು ಪ್ರಯಾಗದಿಂದ ಸುಮಾರು ಒಂದು ನೂರ ಐವತ್ತು ಮೈಲಿನಷ್ಟು ದೂರದಲ್ಲಿದೆ. ಮಧ್ಯಪ್ರದೇಶದ ರಾಮಘಡವೆಂಬ ಪರ್ವತದ ಹತ್ತಿರ ವಿಂಧ್ಯಪರ್ವತದಲ್ಲಿದೆ. ಈ ಗುಹೆಗೆ 'ಸೀತಾಬೆಂಗ್ರಾ, “ಹಾಥೀಥೋಡ' ಎಂತಲೂ ಕರೆಯುತ್ತಾರೆ. ಈ ಗುಹೆಯಲ್ಲಿ ರಾಮ, ಲಕ್ಷ್ಮಣ, ಸೀತೆಯರ ಸ್ವತಂತ್ರವಾದ, ನೈಸರ್ಗಿಕವಾದ ಗುಹೆಗಳಿವೆ. ಮಯ ರಾಕ್ಷಸನು ಈ ಮಯ ರಾಕ್ಷಸನು ಈ ಗುಹೆಯಲ್ಲಿ ಒಂದು ಸುವರ್ಣವನವನ್ನು ಮತ್ತು ಒಂದು ಕಾಂಚನಗೃಹವನ್ನು ನಿರ್ಮಿಸಿದ್ದನು. ಈ ಸ್ಥಾನದ ಸೌಂದರ್ಯವನ್ನೂ ವೈಭವವನ್ನೂ ಕಂಡು ಹನುಮಾನ ಮೊದಲಾದ ವಾನರರು ಅಚ್ಚರಿಗೊಂಡರು. ಈ ಸ್ಥಾನವನ್ನು ರಕ್ಷಿಸುತ್ತಿದ್ದ ತಪಸ್ವಿನಿಯಾದ ಸ್ವಯಂಪ್ರಭೆಯಿಂದ ಈ ಸ್ಥಾನದ ಬಗ್ಗೆ ಎಲ್ಲ ಮಾಹಿತಿಯನ್ನು ಪಡೆದುಕೊಂಡರು. ಈ ಗುಹೆಯಿಂದ ಸುಖರೂಪವಾಗಿ ಹೊರಬೀಳಲು ನೆರವಾಗ ಬೇಕೆಂದು ವಿನಂತಿಸಿದರು. ಈ ಗುಹೆಯಲ್ಲಿ ಪ್ರವೇಶಿಸಿದ ಯಾವ ಪ್ರಾಣಿಯೂ ಜೀವದಿಂದುಳಿದು ಹೊರಬೀಳುವದು ಸಾಧ್ಯವಿಲ್ಲವೆಂದು ಸ್ವಯಂಪ್ರಭೆ ನುಡಿದಳು. ಆದರೂ ಸ್ವಸಾಮರ್ಥ್ಯದಿಂದ ಇವರೆಲ್ಲರನ್ನೂ ಗುಹೆಯ ಹೊರಗೆ ತಂದು ಇರಿಸಿದಳು. ಹೊರಗೆ ವಿಂಧ್ಯಗಿರಿಯ ಹತ್ತಿರ ಒಂದು ಜಲಾಶಯವನ್ನು ವಾನರರು ಕಂಡರು. ಅಲ್ಲಿಂದ ಮುಂದೆ ಸಾಗುವ ಮಾರ್ಗವನ್ನು ಸ್ವಯಂಪ್ರಭೆಯು ತಿಳಿಸಿ ಹೇಳಿದ್ದಳು. ೨. ಋಕ್ಷವಾನ ಈ ಪರ್ವತದ ಭಾಗವು ವಿಂಧ್ಯಪರ್ವತದ ಪೂರ್ವ ಹಾಗೂ ಮಧ್ಯಭಾಗ ದಲ್ಲಿರಬಹುದು. ಸಾತಪುಡಾ ಪರ್ವತದ ಕೆಲವು ಭಾಗ ಇದರಲ್ಲಿ ಸೇರಿಕೊಂಡಿರ ಬಹುದು. ಗೊಂಡವನ ಪರ್ವತದ ಸಾಲು ಎಂದರೆ ಋಕ್ತವಾನ ಪರ್ವತವೆಂದೆನ್ನ ಬಹುದು. ಮಾರ್ಕಂಡೇಯ ಪುರಾಣದಂತೆ ಆರು ಕುಲಪರ್ವತಗಳಲ್ಲಿ ಇದೊಂದಾಗಿದೆ. ಇದರ ವಿಸ್ತೀರ್ಣ ನರ್ಮದಾ ನದಿಯ ಉಗಮದಿಂದ ಹಿಡಿದು ಬಂಗಾಲಕೊಲ್ಲಿಯವರೆಗೆ ಇದ್ದಂತಿದೆ. ಅನೇಕ ಪ್ರಾಚೀನ ಗ್ರಂಥಗಳಲ್ಲಿ ಈ ಪರ್ವತವನ್ನು ಅನೇಕ ಹೆಸರುಗಳಿಂದ ಕರೆದಿದ್ದಾರೆ. ಋಕ್ಷ ಅಂದರೆ ಕರಡಿ, ಈ ಕಾರಣದಿಂದಲೇ ಈ ಪರ್ವತಕ್ಕೆ ಋಕವಾನ ಎಂಬ ಹೆಸರು ಬಂದಿರಬಹುದು.