ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೯೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು


ಧೂಮ್ರ ಎಂಬಾತನು ಒಂದು ವಾನರಸಮೂಹದ ಸೇನಾಪತಿಯಾಗಿದ್ದನು.
ಆತನು ಈ ಪರ್ವತದಲ್ಲಿ ವಾಸವಿದ್ದನು. ಕರಡಿಗೆ ಗ್ರೀಕರ ಭಾಷೆಯಲ್ಲಿ 'ಅರ್ಕ್ತೊಸ'
ಎಂದೂ ಟಾಲೆಮಿಯ ಗ್ರಂಥದಲ್ಲಿ 'ಆರ್ಕ್ಸೆತೀನ' ಎಂದೂ ಬರೆದದ್ದು ಈ ಪರ್ವತದ
ಇನ್ನೊಂದು ಹೆಸರಾಗಿದೆ. ನರ್ಮದಾ, ತಾಪಿ, ಧಸನ, ದಮುದಾ, ಸೋನ,
ಮಹಾನದಿ, ಮಂದಾಕಿನಿ, ತಮಸಾ ಮುಂತಾದ ಗಂಗಾ, ಯಮುನಾ ನದಿಗಳ
ಉಪನದಿಗಳು ಈ ಪರ್ವತದಲ್ಲಿ ಉಗಮ ಹೊಂದಿದೆ.

೩. ಋಷ್ಯಮೂಕ

ಇದು ಬಳ್ಳಾರಿ ಜಿಲ್ಲೆಯ ಹಂಪೆಯ ಬಳಿಯಲ್ಲಿದ್ದ ಪರ್ವತ. ಇದು
ತುಂಗಭದ್ರೆಯ ನದೀತೀರದಲ್ಲಿದೆ. ಇದು ಸಹ್ಯಾದ್ರಿಪರ್ವತದ ದಕ್ಷಿಣದ ಒಂದು
ಉಪಪರ್ವತ. ಇಲ್ಲಿ ಸುಗ್ರೀವನು ವಾಸವಿರುತ್ತಿದ್ದನು. ರಾಮಲಕ್ಷ್ಮಣರು
ಸುಗ್ರೀವನೊಡನೆ ಇಲ್ಲಿಯೇ ಮಿತ್ರತ್ವವನ್ನು ಸಂಪಾದಿಸಿದರು. ಮತಂಗ ಮುನಿಯ
ಶಾಪವಿದ್ದ ಕಾರಣ ವಾಲಿ ಇಲ್ಲಿಗೆ ಬರುವಂತಿರಲಿಲ್ಲ. ಮಹಾಭಾರತದಲ್ಲಿ ಇದನ್ನು
'ತೀರ್ಥ'ವೆಂದು ಉಲ್ಲೇಖಿಸಲಾಗಿದೆ.

೪. ಕನಖಲತೀರ್ಥ

ಹರಿದ್ವಾರದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ. ದಕ್ಷಪ್ರಜಾ
ಪತಿ ಇಲ್ಲಿ ಯಜ್ಞವನ್ನು ಮಾಡಿದ್ದನು. ಸತಿಯು ಆಗ ದೇಹಾರ್ಪಣೆಯನ್ನು
ಮಾಡಿದ್ದರಿಂದ ಶಂಕರನು ಈ ಯಜ್ಞವನ್ನು ಹಾಳುಮಾಡಿದನೆಂಬ ದಂತಕಥೆಯಿದೆ.
ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಪುನರ್ಜನ್ಮವು ಬರುವುದಿಲ್ಲವೆಂಬ ಶ್ರದ್ದೆ
ಇದೆ. ಇಲ್ಲಿ ದಕ್ಷಪ್ರಜಾಪತಿಯ ಒಂದು ಮಂದಿರವಿದೆ. ಶ್ರಾದ್ಧವಿಧಿಯನ್ನು
ಆಚರಿಸಲು ಈ ಕ್ಷೇತ್ರವು ಅತಿಯೋಗ್ಯವಾದುದೆಂದು ಅನೇಕ ಪುರಾಣಗಳಲ್ಲಿ
ಹೇಳಲಾಗಿದೆ. ಸ್ಕಂದ ಪುರಾಣದಲ್ಲಿ ಹೇಳಿದನುಸಾರ ಈ ತೀರ್ಥವು
ಅರುಣಾಚಲ ಪರ್ವತದಲ್ಲಿಯ ಶಿವನ ಸ್ಥಾನವಾಗಿದೆ. ನೃಗರಾಜನು ದಾನವಾಗಿ
ಕೊಟ್ಟ ಗೋವುಗಳಲ್ಲಿಯ, ಒಬ್ಬ ದರಿದ್ರ ಬ್ರಾಹ್ಮಣನ ಕಳೆದುಹೋದ ಹಸು
ಈ ತೀರ್ಥ ಕ್ಷೇತ್ರದಲ್ಲಿ ಸಿಕ್ಕಿತು. ಸನತ್ಕುಮಾರ ಋಷಿಗಳು ಈ ಕ್ಷೇತ್ರದಲ್ಲಿ
ರುತ್ತಿದ್ದರು.