ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಥಳವಿಶೇಷ ೪ರ್೯ ೫. ಕಿಂಧೆ ಇದು ವಾನರರ ರಾಜನಾದ ವಾಲಿಯ ಹಾಗೂ ಸುಗ್ರಿವನ ರಾಜಧಾನಿ ಯಾಗಿತ್ತು. ಇದು ದಕ್ಷಿಣ ಭಾರತದಲ್ಲಿಂ ಪಂಪಾಸರೋವರದ ಬಳಿಯಿದ್ದ ನಗರ, ಪರಿಸರದಲ್ಲಿ ಪಂಪಾ ಸರೋವರ, ತುಂಗಭದ್ರಾನದಿ, ಪ್ರಸವಣಪರ್ವತ, ಮತಂಗಾಶ್ರಮ ಮುಂತಾದವಿದ್ದವು. ಈ ನಗರವು ಗಿರಿಕಂದರಗಳಿಂದ ಸುತ್ತುವರಿಯಲ್ಪಟ್ಟಿತ್ತು. ಅಲ್ಲಿ ವಜ್ರವೈಡೂರ್ಯಗಳು ಅಗಣಿತವಾಗಿದ್ದವು. ಅನೇಕ ಉದ್ಯಾನ-ಉಪವನಗಳಿದ್ದವು. ಚಿತ್ರಾವಶಾಸ್ತಗಿಳ ಮತದಂತೆ ಕರ್ನಾಟಕದಲ್ಲಿರುವ ಹಂಪೆ-ಆನೆಗುಂದಿಯ ಭಾಗವೆಂದರೆ 'ಕಿಷ್ಕಂಧೆ ನಗರವಿತ್ತು. ಇದರ ಹತ್ತಿರದಲ್ಲಿಯೇ 'ವಾಲೀಪ್ರಸಾದ' ಮತ್ತು 'ಸಪ್ತತಾಲವೇಧ' ಎಂಬ ಸ್ಥಾನಗಳಿವೆ. ಬ್ರಹ್ಮದೇವನ ಆನಂದಬಾಷ್ಪಗಳಿಂದ ಜನ್ಮತಾಳಿದ ಋಕ್ಷರಾಜನೆಂಬ ವಾನರಾಧಿಪತಿಗಾಗಿ, ಬ್ರಹ್ಮದೇವನ ಆಜ್ಞೆಯಂತೆ ವಿಶ್ವಕರ್ಮನು ಈ ಪಟ್ಟಣವನ್ನು ರಚಿಸಿದನೆಂಬ ಭಾವಾರ್ಥ ರಾಮಾಯಣದಲ್ಲಿದೆ. 'ಕಿಷ್ಕಂಧಾ' ಈ ಶಬ್ದದ ಅರ್ಥವು ಶಂಬರ ಭಾಷೆಯಲ್ಲಿ 'ಪರ್ವತದ ಹಿಂದೆ ಮೃತ್ಯು'ವೆಂದಿದೆ. ಜೈನಗ್ರಂಥಗಳಲ್ಲಿ ಈ ನಗರಕ್ಕೆ “ಖಖಂದ'ವೆಂದು ಬರೆದದ್ದು ಕಂಡುಬರುತ್ತದೆ. ೬. ಕೇಕಯ ಉತ್ತರ ದಿಕ್ಕಿನಲ್ಲಿಯ ಪಂಚನದಿಗಳ ಪ್ರದೇಶದಲ್ಲಿಂಯ ವಿತಸ್ತಾ ಎಂಬ ನದಿಯ (ಈಗಿನ ಝಲಮ್ ನದಿ) ಪೂರ್ವದಂಡೆಯಲ್ಲಿನ ಒಂದು ಪ್ರದೇಶ. ಇದರ ಹೆಸರುಗಳು ಬವಲಾವಣೆಯಾಗುತ್ತ ಹೋಗಿವೆ. ಕೈಕಯ, ಕೈಕೇಯ, ಕೇಕಯ ಸ್ಥಾಪಿತ ದೇಶ ಇತ್ಯಾದಿ, ಉಶಿನರ ಮತ್ತು ಶಿಬಿರಾಜ ಇವರ ಸಂಬಂಧವು ಈ ದೇಶದೊಡನಿತ್ತು. ಇದರ ರಾಜಧಾನಿ 'ರಾಜಗೃಹ'ವೆಂದಿತ್ತು. ವಿಪಾಶಾ ನದೀ ತೀರದಲ್ಲಿದ್ದ ಈ ಪ್ರದೇಶವು ರಾಮಾಯಣಕಾಲದ ಬಾಘೀಕ ಮತ್ತು ಇಕ್ಷುಮತೀ ನದಿಗಳ ಪಶ್ಚಿಮದ ಭಾಗವಿರಬಹುದು. ಸತತ ಪರಕೀಯರ ದಾಳಿಗಳನ್ನು ಎದುರಿಸುತ್ತಿದ್ದ ಇಲ್ಲಿಯ ಜನರು ಯುದ್ಧಕುಶಲರೂ ಧನುರ್ವಿದ್ಯಾಪ್ರವೀಣರೂ ಆಗಿದ್ದರು. ಪೂರ್ವಗಾಂಧಾರ ದೇಶದ ರಾಜನಾದ ಅಂಭಿಯನ್ನು ಸೆರೆಹಿಡಿದು ಸಿಕಂದರನು ಪಶ್ಚಿಮ ಸರಹದ್ದಿನಲ್ಲಿದ್ದ ವಿತಸ್ರಾ ನದಿಯ ಬಳಿ ತಲುಪಿದ್ದನು. ದಶರಥನ ಮಾವನಾದ ಕೈಕಯ ಅಶ್ವಪತಿಯು ಇಲ್ಲಿಯ ರಾಜನಾಗಿದ್ದನು.