ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ೭. ಗಂಗಾ “ಗಮಯತಿ ಭಗವತ್ಪದಮಿತಿ ಗಂಗಾ'- ಸ್ನಾನ ಮಾಡುವ ಜೀವಾತ್ಮರಿಗೆ ಭಗವಂತನ ಪಾದಕ್ಕೆ ತಲುಪಿಸುವವಳೆಂದರೆ ಗಂಗೆ ಎಂದೆನ್ನಲಾಗುತ್ತದೆ. 'ಗಮ್ಯತೇ ಪ್ರಾಪ್ಯತೇ ಮೋಕ್ಷಾರ್ಥಿಭಿರತಿ ಗಂಗಾ'- ಮೋಕ್ಷವನ್ನು ಬಯಸುವವರು ಯಾರ ಬಳಿ ಹೋಗುತ್ತಾರೋ ಅವಳೇ ಗಂಗೆ. ಈ ಬಗೆಯ ಶಲ್ನೋತ್ಪತ್ತಿಯನ್ನು ಗಂಗೆಯ ಬಗ್ಗೆ ಕೊಡುತ್ತಾರೆ. - ಗಂಗಾನದಿಯು ಭಾರತದಲ್ಲಿಯ ಪವಿತ್ರವೆಂದೆನಿಸಿದ ಏಳು ನದಿಗಳಲ್ಲಿ ಶ್ರೇಷ್ಟ ನದಿಯಾಗಿದೆ. ಈ ಗಂಗಾನದಿಗೆ ವಿಷ್ಣುಪದಿ, ತ್ರಿಪಥಗಾ, ಭಾಗೀರಥಿ, ಜಾಹ್ನವಿ ಮುಂತಾದ ಅನೇಕ ಹೆಸರುಗಳಿವೆ. ಈ ನದಿಯ ಉಗಮವು ಉತ್ತರ ಪ್ರದೇಶದಲ್ಲಿಯ ತೇಹರಿ ಗಡವಾಲ ಭಾಗದಲ್ಲಿದ್ದ ಗಂಗೋತ್ರಿ ಎಂಬಲ್ಲಿ ಸಮುದ್ರದ ಪಾತಳಿಗಿಂತ ೪೨೦೦ ಮೀಟರ್ ಎತ್ತರದಲ್ಲಾಗಿದೆ. ಹೃಷಿಕೇಶದ ಬಳಿ ಈ ನದಿಯು ಸಮತಳ ಪ್ರದೇಶವನ್ನು ತಲುಪಿ ಹರಿಯುತ್ತದೆ. ಗಂಗಾ ಮತ್ತು ಯಮುನಾ ಈ ನದಿಗಳ ಸಂಗಮಸ್ಥಾನದವರೆಗಿನ “ದುಆಬ್ ಪ್ರದೇಶಕ್ಕೆ ಅಂತರ್ವೇದಿ ಎಂದೆನ್ನುತ್ತಾರೆ. ಈ ಪ್ರದೇಶವು ಫಲವತ್ತಾದ ಭೂಮಿಯಾಗಿದ್ದು ಇದು ವೈದಿಕ ಸಂಸ್ಕೃತಿಯ ಕೇಂದ್ರವಾಗಿತ್ತು. ಗಂಗಾನದಿಗೆ ಯಮುನಾ, ಬ್ರಹ್ಮಪುತ್ರಾ ಮೇಘನಾ ಮುಂತಾದ ಅನೇಕ ಚಿಕ್ಕದೊಡ್ಡ ನದಿಗಳು ಕೂಡಿಕೊಳ್ಳುತ್ತವೆ. ಗಂಗಾನದಿಯು ಸಹಸ್ರಮುಖವಾಗಿ ಸಾಗರವನ್ನು ಪ್ರವೇಶಿಸುತ್ತದೆ. ಗಂಗಾನದಿಯ ಮುಖದಲ್ಲಿ 'ಸಾಗರ'ವೆಂಬ ನಡುಗಡ್ಡೆ ಇದೆ. ಅಲ್ಲಿ ಕಪಿಲ ಮುನಿಯ ಆಶ್ರಮವಿತ್ತೆಂದು ಹೇಳುತ್ತಾರೆ. ಎಲ್ಲ ಸಾಧುಸಂತರು, ಮಹಾಪುರುಷರು ಗಂಗೆಯನ್ನು ಪವಿತ್ರ ನದಿಯೆಂದು ಮನ್ನಿಸುತ್ತ ಬಂದಿದ್ದಾರೆ. ಆರೋಗ್ಯದೃಷ್ಟಿಯಿಂದ ಗಂಗೆಯ ನೀರು ಅತಿಶುದ್ಧ, ರೋಗ ನಿವಾರಕ, ಶಕ್ತಿದಾಯಕವೂ ಆಗಿದೆ. ಈ ನದಿಯ ತೀರದಲ್ಲಿ ಸುಮಾರು ಮೂರುಕೋಟಿ ತೀರ್ಥಗಳಿವೆ ಎಂದು ಧಾರ್ಮಿಕ ಶ್ರದ್ದೆ ಇದೆ. ಗಂಗೆಯು ಅಗ್ನಿಯ ಬೀಜವನ್ನು ಪಡೆದು ಸ್ಕಂದನನ್ನು ಹೆತ್ತಳು. ಇವಳು ಮಹಾಸಾಗರನ ಪತ್ನಿಯಾಗಿದ್ದು ವೇದಗಳ ಬಲಭಾಗವಾಗಿದ್ದಾಳೆ. ಪುರಾಣಗಳಲ್ಲಿ ಗಂಗೆಯ ಮಾಹಾತ್ಮವನ್ನು ವಿಸ್ತ್ರತವಾಗಿ ವರ್ಣಿಸಿದ್ದಾರೆ. ಋಗೈದದಲ್ಲಿ ಗಂಗೆಯ ಉಲ್ಲೇಖವಿದೆ. ಇವಳನ್ನು ಸ್ವರ್ಗದ ದೇವತೆ ಎಂದು ಬರೆಯುತ್ತಾರೆ. ಒಮ್ಮೆ ಎಲ್ಲ ದೇವತೆಗಳು ಬ್ರಹ್ಮದೇವನ ಬಳಿ ಹೋದರು. ಅವರ ಜೊತೆಯಲ್ಲಿ ಗಂಗೆಯೂ ಹಾಗೂ ಇಕ್ಷಾಕುಕುಲದಲ್ಲಿ ಜನಿಸಿದ ಮಹಾಭಿಷನೂ ಇದ್ದರು. ಗಾಳಿಯಿಂದ ಆಗ ಇವಳು ಉಟ್ಟ ವಸ್ತ್ರವು ಹಾರಿದಾಗ ದೇವತೆಗಳೆಲ್ಲರೂ ಮುಖ ಕೆಳಗೆ