ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಥಳವಿಶೇಷ ೫೦೧ ಮಾಡಿಕೊಂಡರು; ಆದರೆ ಮಹಾಭಿಷನು ನಿಸ್ಸಂಕೋಚವಾಗಿ ಅವಳತ್ತ ನೋಡಿದಾಗ ಬ್ರಹ್ಮದೇವನು ಆತನಿಗೆ ನೀನು ಮೃತ್ಯುಲೋಕದಲ್ಲಿ ಜನ್ಮತಾಳುವೆ ಆಗ ಗಂಗೆಯು ನಿನ್ನ ಪತ್ನಿಯಾಗುವಳು? ನಿನಗೆ ಅಪ್ರಿಯವೆನಿಸುವ ಕೃತ್ಯಗಳನ್ನು ಅವಳು ಮಾಡುವಳು. ಈ ಕೃತ್ಯಗಳಿಂದ ನಿನಗೆ ಕೋಪವುಂಟಾಗಿ ಮುಕ್ತಿ ಪಡೆಯುವೆ!” ಎಂದು ಶಾಪವನ್ನಿತ್ತನು. ಈ ಶಾಪವನ್ನು ಕೇಳಿಕೊಂಡ ಮಹಾಭಿಷನು ಪ್ರತೀಪನ ಕುಲದಲ್ಲಿ ಜನ್ಮ ತಾಳುವದನ್ನು ನಿರ್ಧರಿಸಿದನು. ಮಾರ್ಗದಲ್ಲಿ ವಸಿಷ್ಠರ ಶಾಪದಿಂದ ಮರಣಹೊಂದಿದ ಅಷ್ಟವಸುಗಳು ಗಂಗೆಗೆ ಭೇಟಿಯಾದರು. ಅವರು ಗಂಗೆಯ ಮಕ್ಕಳಾಗಿ ಹುಟ್ಟಲು ಯೋಚಿಸಿದರು. ಅವರು ತಮ್ಮ ಇಚ್ಛೆಯನ್ನು ಗಂಗೆಗೆ ತಿಳಿಸಿದರು. ಆದರೆ, ಒಂದು ಶರತ್ತನ್ನು ಮುಂದಿಟ್ಟರು- ಮಗನು ಹುಟ್ಟಿದರೆ ಅವನನ್ನು ನೀರಿಗೆ ಎಸೆಯಬೇಕು. ಈ ಶರತ್ತನ್ನು ಅನುಸರಿಸಿ ಗಂಗೆಯು ಒಬ್ಬ ಮಗನನ್ನು ಮಾತ್ರ ಹೊರತುಪಡಿಸಿ ಎಲ್ಲ ಮಕ್ಕಳನ್ನು ನೀರಿಗೆ ಎಸೆಯಲು ಸಮ್ಮತಿಸಿದಳು. ಆಗ ಅಷ್ಟವಸುಗಳು ತಮ್ಮೆಲ್ಲರ ಅಂಶರೂಪವಾಗಿದ್ದ ಒಬ್ಬ ಮಗನನ್ನು ಕೊಡಲು ಒಪ್ಪಿದರು. ಮಹಾಭಿಷನು ಪ್ರತೀಪನ ಮಗನಾಗಿ ಜನ್ಮ ತಾಳಿದನು. ಆತನ ಹೆಸರು 'ಶಂತನು. ಗಂಗೆಯು ಶಂತನುವಿನ ಜೊತೆ ವಿವಾಹವಾದಳು. ಇವಳು ಮದುವೆ ನಡೆಯುವ ಮುಂಚಿತವಾಗಿ ತನ್ನ ಮಾವನಿಗೆ 'ವಿವಾಹದ ನಂತರ ನಾನು ಮಾಡುವ ಕೃತಿಗಳನ್ನು ನನ್ನ ಗಂಡನಾದ ಶಂತನು ಆಕ್ಷೇಪಿಸ ತಕ್ಕದ್ದಲ್ಲ; ಈ ಶರತ್ತನ್ನು ಪಾಲಿಸುವವರೆಗೆ ಮಾತ್ರ ನಾನು ಆತನ ಸಹವಾಸದಲ್ಲಿ ಉಳಿಯುವೆನು' ಎಂದು ಕರಾರನ್ನು ಮಾಡಿದ್ದಳು. ಇವಳಿಗೆ ಶಂತನುವಿನಿಂದ ಎಂಟು ಪುತ್ರರಾದರು. ಅವರಲ್ಲಿಯ ಏಳು ಪುತ್ರರನ್ನು ಇವಳು ನೀರಿಗೆಸೆದಳು. ಎಂಟನೆಯ ಪುತ್ರನನ್ನು ಗಂಗೆಯು ಮುಳುಗಿಸಬೇಕೆಂದಾಗ ಶಂತನು ಅಡ್ಡಿ ಮಾಡಿದನು. ಆಗ ಈಕೆಯು ಅವನನ್ನು ತ್ಯಜಿಸಿ ಸ್ವರ್ಗಲೋಕಕ್ಕೆ ಹೋದಳು. ಈ ರೀತಿ ಬದುಕಿ ಉಳಿದ ಎಂಟನೆಯ ಪುತ್ರನೆಂದರೆ ಭೀಷ್ಮನಾಗಿದ್ದಾನೆ. ಈ ಭೀಷ್ಮನನ್ನು ಗಂಗೆಯು ಜೊತೆಗೆ ಕರೆದೊಯ್ದು ಸ್ವರ್ಗಲೋಕದಲ್ಲಿ ಎಲ್ಲ ವಿಧದ ಶಿಕ್ಷಣವನ್ನು ಕೊಟ್ಟಳು. ಶಂತನು ಒಮ್ಮೆ ಬೇಟೆಗೆಂದು ಬಂದಾಗ ಈ ಭಿಷ್ಯನನ್ನು ಆತನ ವಶಕ್ಕೆ ಒಪ್ಪಿಸಿದಳು. ೮. ಗೋದಾವರಿ ದಕ್ಷಿಣಭಾರತದ ಒಂದು ಅತಿಪವಿತ್ರವಾದ ನದಿ. 'ದಕ್ಷಿಣಗಂಗೆ' ಎಂದೂ ಹೆಸರಿದೆ. ನಾಸಿಕ ಪಟ್ಟಣದ ಹತ್ತಿರ ತ್ರ್ಯಂಬಕೇಶ್ವರದಲ್ಲಿ ಬ್ರಹ್ಮಗಿರಿ ಎಂಬುದು ಗೋದಾವರಿಯ ಉಗಮ ಸ್ಥಾನ. ಗೌತಮ ಋಷಿಯಿಂದ ಒಂದು ಹಸುವಿನ