ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ಕೊಲೆ ನಡೆಯಿತು. ಆ ಪಾಪದಿಂದ ಮುಕ್ತನಾಗಲು ಗೌತಮನು ಶಂಕರನ ತಲೆಯ ಮೇಲಿನ ಗಂಗೆಯನ್ನು ಇಲ್ಲಿಗೆ ತಂದನು. ಆದ್ದರಿಂದ, ಈ ನದಿಗೆ ಗೌತಮೀ ಎಂಬ ಹೆಸರು. ಗೋದಾವರಿ ನದೀ ತೀರದಲ್ಲಿ ಸುಮಾರು ನುರು ಪವಿತ್ರ ತೀರ್ಥಕ್ಷೇತ್ರಗಳಿವೆ. ಈ ರೀತಿ ಬಂದ ಗಂಗೆಯ ನೀರು ಮೃತಪಟ್ಟ ಹಸುವಿನ ದೇಹದ ಮೇಲೆ ಹರಿದಿದ್ದರಿಂದ ಹಸುವು ಜೀವಂತವಾಯಿತು. ಈ ನದಿಗೆ ಗೋದಾವರಿ ಎಂಬ ಹೆಸರು ಹೇಗೆ ಬಂದಿತೆಂಬ ಒಂದು ದಂತಕತೆಯಿದೆ. ರೇವಾನದೀತೀರದಲ್ಲಿ ತಪಸ್ಸು ಗಂಗಾತೀರದಲ್ಲಿ ಮೃತ್ಯು ಮತ್ತು ಕುರುಕ್ಷೇತ್ರದಲ್ಲಿ ದಾನ, ಇವುಗಳಿಂದ ಪುಣ್ಯ ದೊರಕುತ್ತದೆಂದು ಹಿಂದೂಗಳು ನಂಬುತ್ತಾರೆ. ಇವೇ ಮೂರು ಸಂಗತಿಗಳು ಗೋದಾವರೀ ತೀರದಲ್ಲಿ ನಡೆದರೆ ಮೋಕ್ಷ ದೊರಕುವದೆಂಬ ಭಾವನೆ ಇದೆ. ಗೋದಾವರೀ ತೀರದಲ್ಲಿದ್ದ ಪೈಠಣ ನಗರಕ್ಕೆ ದಕ್ಷಿಣ ಕಾಶೀಕ್ಷೇತ್ರವೆಂದೆನ್ನುತ್ತಾರೆ. ಸಿಂಹಗ್ಗದ ಆಚರಣೆಗೆ ನಾಸಿಕವು ಒಂದು ಪವಿತ್ರಕ್ಷೇತ್ರವಿದೆ. ಮಹಾರಾಷ್ಟ್ರ, ಆಂಧ್ರ ಹಾಗು ಕರ್ನಾಟಕ ಈ ಮೂರು ರಾಜ್ಯಗಳಲ್ಲಿ ಹರಿಯುತ್ತಿರುವ ಈ ಪ್ರಸಿದ್ದ ನದಿಯ ಉದ್ದ ಒಂಬೈನೂರು ಮೈಲಿ, ಪ್ರವರಾ, ವರ್ಧಾ, ವೈನಗಂಗಾ, ಧಾರಣಾ, ಇಂದ್ರಾವತಿ ಇವೇ ಗೋದಾವರಿಯ ಅನೇಕ ಉಪನದಿಗಳು. ಈ ನದಿಯ ಸಾನ್ನಿಧ್ಯದಿಂದ ಇದರ ಪರಿಸರದ ಭೂಪ್ರದೇಶವು ಫಲವತ್ತಾಗಿದೆ. ಗೋದಾವರಿಯು ಗಂಗಾಸಾಗರಕ್ಕೆ ಸೇರುತ್ತದೆ. ರಾಜ ಮಹೇಂದ್ರಿಯಲ್ಲಿ 'ಪುಷ್ಕರ'ವೆಂಬ ಮಹೋತ್ಸವವನ್ನು ಆಚರಿಸುತ್ತಾರೆ. 3 ೯. ಚೈತ್ರರಥ ವನ ಈ ಸ್ಥಾನದ ಬಗ್ಗೆ ಹಲವಾರು ಗ್ರಂಥಗಳಲ್ಲಿ ಬಗೆಬಗೆಯ ಮಾಹಿತಿ ಇದೆ. ಈ ವನವು ಉತ್ತರಕುರುಕ್ಷೇತ್ರದಲ್ಲಿತ್ತು. ಚಿತ್ರರಥನೆಂಬ ಗಂಧವನ್ನು ಈ ವನವನ್ನು ನಿರ್ಮಿಸಿದನು. ಅದಕ್ಕಾಗಿ ಈ ವನಕ್ಕೆ ಚೈತ್ರರಥವನವೆಂಬ ಹೆಸರು ಬಂದಿತು. ಬ್ರಹ್ಮ ಪುರಾಣದಲ್ಲಿಯ ಮಾಹಿತಿಯಂತೆ ಈ ಉದ್ಯಾನವು ಚಂದ್ರಪ್ರಭ ಎಂಬ ಪರ್ವತದ ಮೇಲಿತ್ತು. ಅಲ್ಲಿ ಊರ್ವತಿ ಮತ್ತು ಐಲರ ಭೇಟಿಯಾಯಿತು. ಮತೃಪುರಾಣದಂತೆ ಈ ವನವು ಮಂದಾರಪರ್ವತದ ಮೇಲೆ ಇರುವ ಉಲ್ಲೇಖವಿದೆ. ವಾಯುಪುರಾಣದಲ್ಲಿ ಈ ವನವು ಇಲಾವೃತ್ತದ ಪೂರ್ವಕ್ಕೆ 'ಅಚ್ಚೇದಾ' ಎಂಬ ನದಿಯ ದಂಡೆಯಲ್ಲಿತ್ತೆಂದಿದೆ. ಇಂದ್ರಾದಿದೇವತೆಗಳು ವಿಹಾರಕ್ಕಾಗಿ ಇಲ್ಲಿಗೆ ಬರುತ್ತಿದ್ದರು. ಭಾಗವತ ಪುರಾಣದನುಸಾರ ಈ ವನವು ಮೇರು-ಮಂದರ ಪರ್ವತದ ಮೇಲೆ ಇತ್ತು.