ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦೪ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ೧೨. ನಿಕುಂಭಿಲಾ ಕೋಲಂಬೋ ಪಟ್ಟಣದಿಂದ ನಾಲ್ವತ್ತು ಮೈಲಿ ದೂರದಲ್ಲಿ ನಿಕುಂಭಿಲಾ ದೇವಿಯ ಸ್ಥಾನವಿದೆ. ಇಂದ್ರಜಿತನು ಈ ದೇವಿಯನ್ನು ಆರಾಧಿಸುತ್ತಿದ್ದನು. ನಿಕುಂಭಿಲಾದೇವಿಯ ಸ್ಥಾನವಿದ್ದ ಈ ವನವು ಮೊದಲಿದ್ದಂತೆ ಈಗ ಇರುವುದಿಲ್ಲ. ಸಮುದ್ರವನ್ನು ದಾಟಿಹೋದ ಹನುಮಾನನಿಗೆ ಹಲವು ಪ್ರದೇಶಗಳು ಕಂಡವು. ಅವುಗಳ ವರ್ಣನೆಯಲ್ಲಿ ನಿಕುಂಭಿಲೆಯ ಉಲ್ಲೇಖವಿದೆ. ೧೩. (ದ್ಯಾವಾ ಪೃಥಿವಿ ದ್ಯಾವಾಪೃಥಿವಿ ಇವರನ್ನು ಋಗೈದದಲ್ಲಿ ತಂದೆ-ತಾಯಿಗಳೆಂದು ಬಗೆದಿದ್ದಾರೆ. ಇವರು ಇಂದ್ರಾದಿ ದೇವತೆಗಳ ಮತ್ತು ಸಕಲ ಲೋಕದ ತಂದೆತಾಯಿ ಗಳಾಗಿದ್ದಾರೆ. ಶಿವ ಪಾರ್ವತಿಯರ ರತಿಕ್ರೀಡೆಯಲ್ಲಿ ದೇವತೆಗಳು ಆತಂಕವನ್ನೊಡ್ಡಿದಾಗ ಪೃಥ್ವಿಯು ಶಂಕರನ ತೇಜಸ್ಸನ್ನು (ವೀರ್ಯ) ಧರಿಸಿದಲು. ಆಗ ಪಾರ್ವತಿಯು ಪೃಥ್ವಿಗೆ ಶಾಪವನ್ನು ಕೊಟ್ಟಳು. ಈ ಕಾರಣದಿಂದ ಸೃಷ್ಟಿಗೆ ಅನೇಕ ಪತಿಗಳಿದ್ದರೂ ಯಾರೂ ಸ್ಥಿರವಾಗಿ ಉಳಿಯುವಂತಿಲ್ಲ; ಸಂತಾನವಾಗುವಂತಿಲ್ಲ. ೧೪. ಪ್ರಸ್ರವಣ ಈ ಪರ್ವತವು ತುಂಗಭದ್ರಾನದೀ ತೀರದಲ್ಲಿ ಕಿಷ್ಕಂಧೆಯ ಹತ್ತಿರದಲ್ಲಿದೆ. ಇದು ಮಾಲ್ಯವಾನ ಪರ್ವತದ ಒಂದು ಭಾಗ. ಇಲ್ಲಿ ಅನೇಕ ನದಿಗಳು ಉಗಮ ಹೊಂದಿವೆ. ಈ ಪರ್ವತದ ಶಿಖರದಲ್ಲಿಯ ಒಂದು ಗುಹೆಯಲ್ಲಿ ರಾಮಲಕ್ಷ್ಮಣರು ಮಳೆಗಾಲದ ನಾಲ್ಕು ತಿಂಗಳ ಕಾಲವನ್ನು ಕಳೆದಿದ್ದರು. ಈ ಪ್ರದೇಶದಲ್ಲಿ ಗಾಳಿಯು ಚೆನ್ನಾಗಿ ಬೀಸುತ್ತಿತ್ತು. ಋಕ್ಷಬಿಲದಿಂದ ವಾನರರೆಲ್ಲರನ್ನೂ ಆಚೆ ಕಳುಹಿಸಿ ತಪಸ್ವಿನಿಯಾದ ಸ್ವಯಂಪ್ರಭೆಯು ಇವರಿಗೆ ಮಹಾಸಾಗರದ ಮಾರ್ಗವನ್ನು ತೋರಿಸಿಕೊಟ್ಟಳು. ಈ ಸಂದರ್ಭದಲ್ಲಿ ಈ ಪ್ರಸ್ತವಣ ಪರ್ವತವನ್ನು ಅವಳು ಉಲ್ಲೇಖಿಸಿದ್ದಾಳೆ. ನದಿಯ ಹೆಸರಿನ ಉಲ್ಲೇಖವಿಲ್ಲ. ೧೫. ಭ್ರಗುತುಂಗ ಭ್ರಗುತುಂಗ ಪರ್ವತದ ಮೇಲೆ ಋಚೀಕ ಮುನಿಯ ಆಶ್ರಮವಿತ್ತು. ಅಂಬರೀಷನಿಗೆ ಋಚೀಕ ಮುನಿಯ ದಶ್ನವು ಈ ಪರ್ವತದ ಮೇಲೆ ಆಯಿತು.