ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಥಳವಿಶೇಷ ೫೦೭ ವಾಗಿತ್ತೆಂದು ತಿಳಿದುಬರುತ್ತದೆ. ಈ ಪರ್ವತದ ಪೂರ್ವಕ್ಕೆ ಮಂದರಪರ್ವತವೂ ದಕ್ಷಿಣಕ್ಕೆ ಗಂಧಮಾದನ ಪರ್ವತವೂ ಇದೆ. ಈ ವಿಶಾಲವಾದ ಪರ್ವತವು ಜಂಬೂದ್ವೀಪದ ಮಧ್ಯಭಾಗದಲ್ಲಿದೆ. ಆಕಾರವು ಘಂಟಾಕೃತಿ ಹೂವಿನಂತಿದೆ. ಪರ್ವತದ ಬುಡದ ಸುತ್ತಳತೆ ಹದಿನಾರು ಸಾವಿರ ಯೋಜನಗಳಷ್ಟಿದೆ. ಶಿಖರದ ಸುತ್ತಳತೆ ಮೂವತ್ತು ಸಾವಿರ ಯೋಜನಗಳಷ್ಟು ಆಳವಾಗಿ ಭೂಮಿಯಲ್ಲಿದೆ. ಈ ಪರ್ವತದ ಮೇಲೆ ವಿಸ್ತೀರ್ಣವಾದ ತಪ್ಪಲು ಪ್ರದೇಶವಿದೆ. ಅದನ್ನು ಸುತ್ತುವರಿಸಿ ಎತ್ತರಕ್ಕೆ ಪರ್ವತಶೃಂಗಗಳಿವೆ. ಈ ತಪ್ಪಲು ಪ್ರದೇಶವು ವರ್ತುಲಾಕಾರವಿದ್ದು ಕೆಲವು ಭಾಗ ಸಮತಟ್ಟಾಗಿದೆ; ಕೆಲವೆಡೆ ಮಾತ್ರ ಕೋನಕೋನವಾಗಿದೆ. ಈ ಪರ್ವತದ ದಕ್ಷಿಣಕ್ಕೆ ಹಿಮಾಲಯ, ಹೇಮಕೂಟ ಮತ್ತು ನಿಷಧ ಪರ್ವತಗಳಿವೆ. ಉತ್ತರಕ್ಕೆ ನೀಲ, ಶ್ವೇತ ಹಾಗೂ ಶೃಂಗಿ ಪರ್ವತಗಳಿವೆ. ಇದರ ಸುತ್ತಳತೆಯಲ್ಲಿ ನಾಲ್ಕು ಶಿಖರ(ಮುಖ)ಗಳಿದ್ದು, ಅವು ನಾಲ್ಕೂ ಬೇರೆ ಬೇರೆ ವರ್ಣದವಾಗಿವೆ. ಮೇರುವಿನ ಮೂರು ಶಿಖರಗಳಲ್ಲಿ ಬ್ರಹ್ಮ, ವಿಷ್ಣು ಮತ್ತು ಮಹೇಶ ಇವರ ನಗರಗಳಿದ್ದು, ಎಂಟೂ ದಿಕ್ಕುಗಳಲ್ಲಿ ಅಷ್ಟದಿಕ್ಷಾಲಕರ ಪುರಗಳಿವೆ. ಮೇರು ಪರ್ವತವು ನಿಶ್ಚಿತವಾಗಿ ಎಲ್ಲಿದೆ ಎಂಬ ಬಗ್ಗೆ ವಿದ್ವಾಂಸರಲ್ಲಿ ಅನೇಕ ಮತಭೇದವಿದೆ. ೨೧. ಮೈನಾಕ ಈ ಪರ್ವತದ ನಿಶ್ಚಿತಸ್ಥಾನದ ಬಗ್ಗೆ ವಿದ್ವಾಂಸರಲ್ಲಿ ಮತಭೇದಗಳಿವೆ. ಶ್ರೀ ನಂದಕುಮಾರ ಡೇ ಇವರ ಅಭಿಪ್ರಾಯದಂತೆ ಹಿಮಾಲಯದ ಶಿವಾಲಿಕ ಪರ್ವತ ಶ್ರೇಣಿಯೇ ಮೈನಾಕ ಪರ್ವತ, ಆಲೋಡಾ ಜಿಲ್ಲೆಯಲ್ಲಿಯ ಪರ್ವತದ ಸಾಲೇ ಮಯನಾಕ ಪರ್ವತವೆಂದು ಶ್ರೀ ಪಾರ್ಜಿಟರ್ ಇವರ ಮತ. ವಾಲ್ಮೀಕಿ ರಾಮಾಯಣದಲ್ಲಿರುವ ಉಲ್ಲೇಖಗಳನ್ನು ಗಮನಿಸಿದರೆ, ಈ ಪರ್ವತದ ಸ್ಥಾನವು ಭಾರತ ಮತ್ತು ಲಂಕಾ ಇದರ ನಡುವೆ ಇದ್ದ ಸಮುದ್ರದಲ್ಲಿ ಇರಬೇಕೆಂದು ತಿಳಿದುಬರುತ್ತದೆ. ಮೊದಲಿನ ಕಾಲದಲ್ಲಿ ರೆಕ್ಕೆಗಳನ್ನು ಹೊಂದಿದ್ದ ಪರ್ವತಗಳು ತಮ್ಮ ಇಚ್ಛೆಯಂತೆ ಸಂಚರಿಸುತ್ತಿದ್ದವಂತೆ. ಇಂದ್ರನು ಪರ್ವತಗಳ ರೆಕ್ಕೆಗಳನ್ನು ಕತ್ತರಿಸತೊಡಗಿದಾಗ ಭಯಗೊಂಡ ಮೈನಾಕ ಪರ್ವತವು ಸಮುದ್ರದಲ್ಲಿ ಅಡಗಿಕೊಂಡಿತೆಂಬ ಒಂದು ಕಥೆ ಇದೆ.