ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦೮ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ೨೨. ಲಂಕಾಪಟ್ಟಣ ರಾಕ್ಷಸಾಧಿಪತಿಯಾದ ರಾಮನ ರಾಜಧಾನಿ. ದಕ್ಷಿಣ ಸಮುದ್ರದ ಅಂಚಿನಲ್ಲಿ ನೂರು ಯೋಜನಗಳಷ್ಟು ಅಂತರದ ದ್ವೀಪದಲ್ಲಿ ವಿಶ್ವಕರ್ಮನಿಂದ ನಿರ್ಮಿಸಲ್ಪಟ್ಟ ಈ ಪಟ್ಟಣ ಒಂದು ನೂರು ಯೋಜನಗಳಷ್ಟು ವಿಸ್ತೀರ್ಣವಾದ ತ್ರಿಕೂಟಾಚಲ ವೆಂಬಲ್ಲಿ ನೆಲೆಸಿದೆ. ಹತ್ತು ಯೋಜನಗಳಷ್ಟು ಅಗಲ, ಇಪ್ಪತ್ತು ಯೋಜನಗಳಷ್ಟು ಉದ್ದವಿದ್ದ ಈ ಸುವರ್ಣಮಯ ಲಂಕಾಪಟ್ಟಣವು ಕೋಟೆಕೊತ್ತಳಗಳಿಂದ ಸುತ್ತುಗಟ್ಟಲ್ಪಟ್ಟಿತ್ತು. ಸುಕೇಶಪುತ್ರರು ತಪಗೈದದ್ದರಿಂದ ಸಂತೋಷಗೊಂಡ ವಿಶ್ವಕರ್ಮನು ಅವರಿಗೆ ಈ ಪಟ್ಟಣವನ್ನು ಕೊಟ್ಟನು. ದೇವತೆಗಳಿಂದ ಮಾಲಿಯ ವಧೆಯಾದ ನಂತರ ಮಾಲ್ಯವಾನನು ತನ್ನ ಸಹೋದರರೊಂದಿಗೆ ಇಲ್ಲಿ ವಾಸವಿದ್ದನು. ಈತನು ದೇವತೆಗಳಿಗೆ ಉಪದ್ರವ ಕೊಡಲಾರಂಭಿಸಿದನಂತರ ವಿಷ್ಣು ಈತನನ್ನು ವಧಿಸಿದನು. ಅನಂತರ ವೈಶ್ರವಣ ಕುಬೇರ ತಂದೆಯಿಂದ ಲಂಕೆಯನ್ನು ಬೇಡಿ ಪಡೆದುಕೊಂಡನು; ಆದರೆ ರಾವಣನು ಕುಬೇರನನ್ನು ಪರಾಭವಗೊಳಿಸಿ ಲಂಕೆಯನ್ನು ಬೇಡಿ ಪಡೆದುಕೊಂಡನು; ಆದರೆ ರಾವಣನು ಕುಬೇರನನ್ನು ಪರಾಭವಗೊಳಿಸಿ ಲಂಕೆಯನ್ನು ತನ್ನ ವಶಕ್ಕೆ ತೆಗೆದುಕೊಂಡನು. ರಾವಣನ ವಧೆಯಾದ ನಂತರ ಲಂಕಾ ರಾಜ್ಯವು ವಿಭೀಷಣನ ವಶಕ್ಕೆ ಬಂದಿತು. ಲಂಕೆಯ ಭೌಗೋಲಿಕ ಸ್ಥಾನದ ಬಗ್ಗೆ ಸಂಶೋಧಕರಲ್ಲಿ ಮತಭೇದಗಳಿವೆ. ಕೆಲವು ಸಂಶೋಧಕರು ಮಾಲ್ದೀವ್ ಮತ್ತು ಜಾವಾ ದ್ವೀಪಗಳನ್ನು ಲಂಕೆಯೆಂದು ಅಭಿಪ್ರಾಯಪಡುತ್ತಾರೆ. ಇನ್ನು ಕೆಲವರ ಮತದಂತೆ ಲಂಕಾಪಟ್ಟಣವು ಮಧ್ಯ ಭಾರತದಲ್ಲಿ ವಿಂಧ್ಯ ಪರ್ವತದ ಬಳಿ ಇತ್ತೆಂದು ತಿಳಿಯುತ್ತಾರೆ. ಮುಂಬಯಿಯ ಸಮೀಪವಿರುವ ಈಗಿನ ಬೋರಿವಲಿ ಭಾಗವು ಲಂಕೆ ಇರಬಹುದೆಂಬ ಇನ್ನೊಂದು ಮತವಿದೆ. ಸಿಂಹಳ ದ್ವೀಪವೇ ಲಂಕೆಯಾಗಿದೆ ಎಂಬ ತಿಳಿವಳಿಕೆಯು ಬಹು ಪುರಾತನಕಾಲದಿಂದಲೂ ಇದೆ. ಈ ಸಂಗತಿಯನ್ನು ಪುಷ್ಟಿಕರಿಸಿರುವ ಅನೇಕ ಪೋಷಕ ಸಂದರ್ಭಗಳು ವಾಲ್ಮೀಕಿ ರಾಮಾಯಣದಲ್ಲಿವೆ. (ಶ್ರೀರಾಮಕೋಶ, ಖಂಡ ೨, ಭಾಗ ೩/೧, ಪರಿಶಿಷ್ಟ ಪು. ಸಂಖ್ಯೆ ೭೬-೮೭ರಲ್ಲಿ ಈ ಎಲ್ಲ ಅಭಿಪ್ರಾಯಗಳನ್ನು ವಿವರಗಳೊಂದಿಗೆ ಸಂಕಲನ ಮಾಡಲಾಗಿದೆ. ಜಿಜ್ಞಾಸುಗಳು ಪರಿಶೀಲಿಸಬಹುದು.) ಸರ್ವಸಾಮಾನ್ಯ ಅರಿವಿನಂತೆ ಶ್ರೀಲಂಕಾ (ಸಿಲೋನ್) ಇದು ರಾವಣನ ಲಂಕೆಯೆಂದು ನಂಬಲಾಗುತ್ತದೆ. ರಾವಣನ ಲಂಕೆಯು ಸಮುದ್ರದಲ್ಲಿ ಮುಳುಗಿ