ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಥಳವಿಶೇಷ ೫೦೯ ಹೋಗಿರಬಹುದೆಂದು ಕೂಡ ಊಹಿಸುತ್ತಾರೆ. ಗುಪ್ತ ಹಾಗು ಮೌರ್ಯ ರಾಜ್ಯದ ಸಂಪರ್ಕವು ಲಂಕೆಯೊಡನಿತ್ತು. ವಿಜಯನಗರದ ಎರಡನೆಯ ದೇವರಾಯನ ಅಧಿಪತ್ಯವು ಲಂಕೆಯ ಮೇಲಿತ್ತು. ಪೋರ್ತುಗೀಸರು, ಡಚ್ಚರು, ನಂತರ ಇಂಗ್ಲೀಷರು ಇಲ್ಲಿ ಕೆಲವು ಕಾಲ ರಾಜ್ಯವಾಳಿದರು. ಇಂದು ಶ್ರೀಲಂಕಾ ಒಂದು ಸ್ವತಂತ್ರ ಸಾರ್ವಭೌಮ ರಾಷ್ಟ್ರವಾಗಿದೆ. ನಿಕುಂಭಿಲಾದೇವಿಯ ಸ್ಥಾನವು ಕೋಲಂಬೋದಿಂದ ನಾಲ್ವತ್ತು ಮೈಲಿ ದೂರದಲ್ಲಿದೆ. ಇಲ್ಲಿ ಸೀತೆಯ ಅನೇಕ ಸ್ಥಾನಗಳಿವೆ. ಅಶೋಕನ ಕಾಲದಲ್ಲಿ ಈ ದೇಶಕ್ಕೆ 'ತಾಮ್ರಪರ್ಣಿ' ಎಂದೆನ್ನುತ್ತಿದ್ದರು. ೨೩. ವಿಂಧ್ಯ ಮಧ್ಯಭರತದಲ್ಲಿಯ ಒಂದು ಪರ್ವತ. ವಿಂಧ್ಯಪರ್ವತದ ಮೂಲಕ ಉತ್ತರ ಭಾರತ ಹಾಗೂ ದಕ್ಷಿಣ ಭಾರತ ಎಂಬ ಎರಡು ಭಾಗಗಳಾಗಿವೆ. ಇದು ಗುಜರಾತ, ಮಧ್ಯಪ್ರದೇಶ ಹಾಗೂ ಬಿಹಾರ ಪ್ರಾಂತಗಳಲ್ಲಿ ಹಬ್ಬಿಕೊಂಡಿದೆ. ಮೇರುವಿಗಿಂತ ಹೆಚ್ಚು ಎತ್ತರಕ್ಕೆ ಬೆಳೆಯಬೇಕೆಂಬ ಇಚ್ಛೆ ಈ ಪರ್ವತಕ್ಕಿತ್ತು.ಈ ರೀತಿ ಬೆಳೆಯತೊಡಗಿದಾಗ ಅಗಸ್ಯಮುನಿಗಳ ದರ್ಶನದಿಂದ ಇದು ಲೀನವಾಗಿ ಸ್ಥಿರಗೊಂಡಿತು ಎಂಬ ಕಥೆಯು ಮತ್ಯಪುರಾಣ, ಪದ್ಮಪುರಾಣ ಮತ್ತು ವಾಯು ಪುರಾಣಗಳಲ್ಲಿದೆ. ಇದು ತುಂಬಾ ಪ್ರಾಚೀನ ಪರ್ವತವಿದ್ದು ಏಳು ಕುಲ ಪರ್ವತಗಳಲ್ಲಿ ಒಂದಾಗಿದೆ. ಇದು 'ದಕ್ಷಿಣಗಿರಿ' ಎಂತಲೂ ಖ್ಯಾತವಿದೆ. ತಾಪಿ, ನರ್ಮದಾ, ಶೋಣ, ಮಹಾನದಿ ಮುಂತಾದವುಗಳ ಉಗಮಸ್ಥಾನವಾಗಿದೆ. ಸಮುದ್ರದ ಸಮತಳದಿಂದ ಇದು ೨೫೦೦ ಅಡಿ ಎತ್ತರವಾಗಿದ್ದು ೭೦೦ ಮೈಲಿ ಉದ್ದವಾಗಿದೆ. ಋಕ್ಷವಾನ ಮತ್ತು ಪಾರಿಯಾತ್ರ ಇವು ಈ ಪರ್ವತದ ಭಾಗಗಳು. ಇಲ್ಲಿ ಅರಣ್ಯ' ಎಂಬ ಜನರು ವಾಸವಿರುತ್ತಿದ್ದರು. ಪ್ರಾಚೀನ ಕಾಲದಲ್ಲಿ ದಶಾರ್ಣ, ಭೋಜ, ಕೋಸಲ ಮುಂತಾದ ಜನಪದರ ವಸತಿ ಸ್ಥಾನಗಳು ಇಲ್ಲಿ ಇದ್ದವು. ೨೪, ವೈಜಯಂತನಗರ ದಂಡಕಾರಣ್ಯದಲ್ಲಿ ನಿಮಿರಾಜನಿಂದ ಗೌತಮಾಶ್ರಮದ ಬಳಿ ನಿರ್ಮಿಸಲ್ಪಟ್ಟ ರಾಜಧಾನಿ.