ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೧೮ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ೧. ಉಮಾ, ರಂಭಾ ಮತ್ತು ವರುಣಕನೈಯರ ಶಾಪ ಯುದ್ಧಕಾಂಡ/೬೦ ರಾಮನ ಬಾಣಗಳಿಂದ ಭಯಭೀತನಾದ ಪರಾಜಯದಿಂದ ನಿಃಶಕ್ತನಾದ ರಾವಣನು ಇತರ ರಾಕ್ಷಸರ ಎದುರಿನಲ್ಲಿ ತನ್ನ ಅಳಲನ್ನು ತೋಡಿಕೊಳ್ಳುತ್ತಿದ್ದಾಗ “ನನ್ನಂತಹ ಮಹೇಂದ್ರನಿಗೆ ಸಮನಾದವನನ್ನು, ಈ ಮಾನವನು ಪರಾಭವ ಗೊಳಿಸಿದನೆಂದ ಬಳಿಕ ನನ್ನ ಪರಿಶ್ರಮದ, ಇಂದಿನವರೆಗಿನ ತಪೋಬಲವು ನೀರುಪಾಲಾಯಿತು. ಬ್ರಹ್ಮದೇವನಲ್ಲಿ ವರವನ್ನು ಬೇಡಿಕೊಳ್ಳುವಾಗ ನಾನು ಮಾನವನನ್ನು ಗಣಿಸಿರಲಿಲ್ಲ. ಆಗ ಬ್ರಹ್ಮದೇವನು 'ಮಾನವನಿಂದ ನಿನಗೆ ಭಯವಿದೆ ಎಂಬುದನ್ನು ಜ್ಞಾಪಕದಲ್ಲಿಟ್ಟುಕೋ!” ಎಂದಿದ್ದು ನನ್ನ ಸ್ಮರಣೆಗೆ ಬರುತ್ತಿದೆ” ಎಂದನು. ಇದಲ್ಲದೇ ಅನರಣ್ಯ, ವೇದವತಿ ಇವರ ಶಾಪಗಳ ಬಗ್ಗೆ ರಾವಣನು- ಉಮಾ ನಂದೀಶ್ವರಸ್ವಾಮಿ ರಂಭಾ ವರುಣಕನ್ಯಕಾ ೧೧॥ ಯಥೋಕ್ತಾಸ್ತನ್ನಯಾ ಪ್ರಾಪ್ತಂ ನ ಮಿಥ್ಯಾ ಋಷಿಭಾಷಿತಮ್ ॥೧೨॥ ಮುಂದೆ ನುಡಿದದ್ದೇನೆಂದರೆ “ಉಮಾ, ನಂದಿಕೇಶ್ವರ, ರಂಭಾ ಮತ್ತು ವರುಣಕನೈಯರು ನುಡಿದಂತೆಯೇ (ಶಾಪ ಕೊಟ್ಟಂತೆ) ನಡೆದಿದೆ. ತಪಸ್ವಿಗಳ ಮಾತು ಎಂದಿಗೂ ಸುಳ್ಳಾಗಲಾರದು' ಎಂದು. ನಂದಿಕೇಶ್ವರನು ಕೊಟ್ಟ ಶಾಪದ ಬಗ್ಗೆ ಸವಿಸ್ತರವಾಗಿ ಹೇಳಿಯಾಗಿದೆ (ಶಾಪ ಕ್ರಮ ಸಂಖ್ಯೆ ೪೨, ನಂದೀಶ್ವರ ( ರಾವಣ ಪರಿಶೀಲಿಸಿರಿ). ಇಲ್ಲಿ ನಂದಿಕೇಶ್ವರನ ಶಾಪದ ಜೊತೆ ಉಮೆ, ರಂಭೆ ಮತ್ತು ವರುಣಕನೈಯರ ಶಾಪಗಳ ಉಲ್ಲೇಖ ಮಾಡಿದ್ದರೂ ಅವರು ರಾವಣನಿಗೆ ಯಾವ ಕಾರಣಕ್ಕಾಗಿ ಯಾವ ಶಾಪಗಳನ್ನು ಕೊಟ್ಟರೆಂಬುದರ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಹೆಚ್ಚು ಮಾಹಿತಿಯು ದೊರಕುವುದಿಲ್ಲ. ಹೀಗಿರುವದರಿಂದ ಈ ಶಾಪಗಳ ಬಗ್ಗೆ ಸ್ವತಂತ್ರವಾಗಿ ವಿಚಾರ ಮಾಡಿಲ್ಲ. ರಾವಣನು ರಂಭೆಯನ್ನು ಬಲಾತ್ಕರಿಸಿದ ಕಾರಣ ಕೋಪಗೊಂಡ ನಳಕೂಬರನು ರಾವಣನಿಗೆ ಕೊಟ್ಟ ಶಾಪವನ್ನು ರಂಭೆಯ ಅನುವಾದದಲ್ಲಿ ಈ ಸರ್ಗಕ್ಕೆ 'ವನಕ್ರೀಡೆ' ಎಂಬ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಇದರಲ್ಲಿ ಆ ಕಾಗೆಯು ಸೀತೆಯ ಕೊರಳಲ್ಲಿಯ ಹಾರದವರೆಗೆ ಅತಿರೇಕ ಮಾಡಿದ ವರ್ಣನೆ ಇದೆ. ರಾಮನು ಈ ಕಾಗೆಗೆ ಶಿಕ್ಷೆ ವಿಧಿಸಲು ಐಷಿಕಾಸ್ತ್ರದಿಂದ ಮಂತ್ರಿಸಿ ಒಂದು ಕಡ್ಡಿಯನ್ನು ಬಾಣದಂತೆ ಈ ಕಾಗೆಗೆ ಬಿಟ್ಟನೆಂಬ ವರ್ಣನೆ ಇದೆ. ಈ ಕಾಗೆಯ ಬಗ್ಗೆ ಇನ್ನಿತರ ಮಾಹಿತಿ ಬಂದಿಲ್ಲ.