ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂದೇಹಾಸ್ಪದ ಶಾಪವರಗಳು ೫೧೯ ಶಾಪವೆಂದು ಪರಿಗಣಿಸಿದರೆ ಅದರ ಬಗ್ಗೆ ಮೊದಲು ವಿವೇಚಿಸಲಾಗಿದೆ. (ಶಾಪ ಕ್ರಮ ಸಂಖ್ಯೆ ೪೬, ನಲಕೂಬರ < ರಾವಣ ಪರಿಶೀಲಿಸಿರಿ.) ರಂಬೆಯು ಬೇರೆ ಶಾಪವನ್ನು ನುಡಿದ ಬಗ್ಗೆಯಾಗಲೀ ಅದೇ ರೀತಿ ಉಮೆ ಮತ್ತು ವರುಣಕನೈಯರು ಶಾಪಗಳನ್ನು ಉಚ್ಚರಿಸಿದ ಉಲ್ಲೇಖವು ಬೇರೆ ಎಲ್ಲಿಯೂ ಬಂದಿರುವದಿಲ್ಲ. ೩. ಪಾಯಸ ಪಡೆದಿದ್ದು ಬಾಲಕಾಂಡ/೧೬ ದಶರಥನು ಪುತ್ರಪ್ರಾಪ್ತಿಯಾಗಬೇಕೆಂಬ ಉತ್ಕಟೇಚ್ಛೆಯಿಂದ ಪುತ್ರಕಾಮೇಷ್ಟಿ ಯಜ್ಞವನ್ನಾಚರಿಸಿದನು. ಅಗ್ನಿಕುಂಡದಿಂದ ಒಬ್ಬ ಮಹಾಪುರುಷನು ಪ್ರಕಟನಾದನು. ಆತನ ರೂಪವು ಅಗ್ನಿಯ ಜ್ವಾಲೆಯಂತೆ ಕಂಗೊಳಿಸುತ್ತಿತ್ತು. ದಿವ್ಯವಾದ ಪಾಯಸದಿಂದ ಪೂರ್ತಿ ತುಂಬಿದ, ಬೆಳ್ಳಿಯ ಮುಚ್ಚಳವಿದ್ದ ಒಂದು ಚಿನ್ನದ ಪಾತ್ರೆಯು ಆತನ ಕರಗಳಲ್ಲಿತ್ತು 'ಪ್ರಜಾಪತಿಯು ನನ್ನನ್ನು ನಿನ್ನ ಬಳಿ ಕಳುಹಿದ್ದಾನೆ ಎಂದು ಆತನು ಯಜ್ಞ ಮಂಟಪದಲ್ಲಿ ಬಂದು ದಶರಥನಿಗೆ ಹೇಳಿದನು. ದಶರತನು ಆತನನ್ನು ಯಥಾಯೋಗ್ಯವಾಗಿ ಸತ್ಕರಿಸಿದನು. ಆತನು ದಶರಥರಾಜನಿಗೆ- ಇದಂ ತು ನೃಪಶಾರ್ದೂಲ ಪಾಯಸ ದೇವನಿರ್ಮಿತಮ್ | ಪ್ರಜಾಕರಂ ಗೃಹಾಣ ತ್ವಂ ಧನ್ಯಮಾರೋಗ್ಯವರ್ಧನಮ್ ೧೧ ಭಾರ್ಯಾಣಾಮನುರೂಪಾಣಾಮತೇತಿ ಪ್ರಚ್ಛ ವೈ | ತಾಸು ತ್ವಂ ಲಪ್ಪಸೇ ಪುತ್ರಾನ್ಯದರ್ಥಂ ಯಜಸೇ ನೃಪ |೨೦|| 'ಹೇ ರಾಜನೇ, ದೇವತೆಗಳನ್ನು ಅರ್ಚಿಸುತ್ತಿರುವದರಿಂದ ಇದು ಇಂದು ನಿನಗೆ ಪ್ರಾಪ್ತವಾಗಿದೆ. ಎಲೈ ನೃಪಶೇಷ್ಟನೇ, ಈ ಪಾಯಸವು ಧನಕಾರವೂ ಆರೋಗ್ಯಕರವೂ ಸಂತಾನಕರವೂ ಇದ್ದು ದೇವತೆಗಳಿಂದ ನಿರ್ಮಿಸಲ್ಪಟ್ಟಿದೆ. ಅದನ್ನು ನೀನು ಸ್ವೀಕರಿಸು! ನೀನು ನಿನ್ನ ಪ್ರಿಯರಾಗಿರುವ ಪತ್ನಿಯರಿಗೆ ಕೊಡು! ಎಲ್ಲರೂ ಸೇರಿ ಭಕ್ಷಿಸಿರಿ! ಅಂದರೆ ನೀನು ಯಾವ ಉದ್ದೇಶದಿಂದ ಯಜ್ಞವನ್ನು ಮಾಡುತ್ತಿರುವಿಯೋ ಆ ಉದ್ದೇಶವು ನಿನ್ನ ಪತ್ನಿಯರಿಂದ ಪುತ್ರರು ಹುಟ್ಟಿ ಸಫಲವಾಗುವದು' ಎಂದು ನುಡಿದನು. ಪಾಯಸ ದೊರೆತದ್ದು ಯಜ್ಞದ ಫಲರೂಪವಾಗಿದೆ. ಪುತ್ರರು ಹುಟ್ಟಿದ್ದು ಪಾಯಸದ ಪರಿಣಾಮವಾಗಿದೆ. ಇದು ವರವೆಂದೆನಿಸಿದರೂ ಪಾಯಸ ದೊರೆತದ್ದಕ್ಕೆ