ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಂದೇಹಾಸ್ಪದ ಶಾಪ/ವರಗಳು

೫೨೧


'ಹೇ ರಾಜನೆ, ತಾನು ಗಳಿಸಿದ ನನ್ನ ತಪಸ್ಸಿನ ಸಾಮರ್ಥ್ಯವನ್ನು ತಾನು
ಅವಲೋಕಿಸು. ನಾನು ಈಗ ಆ ತಪೋಬಲದಿಂದ ನಿನ್ನನ್ನು ನಿನ್ನ ಶರೀರ
ಸಮೇತವಾಗಿ ಸ್ವರ್ಗಕ್ಕೆ ಒಯ್ಯುತ್ತೇನೆ. ಸದೇಹವಾಗಿ ಸ್ವರ್ಗ ಸೇರುವದು ಕಠಿಣ;
ಆದರೂ ಅಲ್ಲಿಗೆ ನೀನು ಹೋಗು! ನಾನು ತಪಸ್ಸಿನ ಸಿದ್ದಿಯನ್ನು ಕಾಯ್ದು
ಇಟ್ಟಿದ್ದೇನೆ. ಅದರ ಪ್ರಭಾವದಿಂದ ನಿನ್ನ ಶರೀರದೊಂದಿಗೆ ಸ್ವರ್ಗಕ್ಕೆ ಹೋಗು!”
ಎಂದನು.
ಈ ರೀತಿಯ ವಿಶ್ವಾಮಿತ್ರನ ಪ್ರತಿಜ್ಞೆಯು ಆತನ ಸದಿಚ್ಛೆಯನ್ನು ವ್ಯಕ್ತ
ಗೊಳಿಸುತ್ತದೆ. ಏಕೆಂದರೆ ಆತನ ಪ್ರಯತ್ನವು ಫಲಕಾರಿಯಾಗಲಿಲ್ಲ. ಈ ಸಂದರ್ಭದಲ್ಲಿ
ವಾಲ್ಮೀಕಿ ಸಹ 'ವರ' ಎಂಬ ಶಬ್ದವನ್ನು ಬಳಸಿಲ್ಲ. ಇದು ಮಹತ್ವದ ಸಂಗತಿಯಾಗಿದೆ.
ವರ ಅಥವಾ ಶಾಪದ ಫಲವು ನಿಶ್ಚಿತವಾಗಿರುತ್ತದೆ. ಅದೆಂದೂ ಸುಳ್ಳಾಗಲಾರದು.
ವಿಶ್ವಾಮಿತ್ರನ ಪ್ರಯತ್ನವು ಸಫಲಗೊಂಡಿದ್ದರೆ ಅದಕ್ಕೆ ವರವೆಂದೆನ್ನಬಹುದಿತ್ತು.

೫. ಶುನಃಶೇಪನಿಗೆ ದೀರ್ಘ ಆಯುಸ್ಸು ದೊರೆತದ್ದು

ಬಾಲಕಾಂಡ/೬೨

ಶುನಃಶೇಪನು ಋಚೀಕನ ಮಕ್ಕಳಲ್ಲಿ ನಡುವಿನವನು. ಇವನು ವಿಶ್ವಾಮಿತ್ರನ
ಸಹೋದರಿಯ ಮಗನಾಗಿದ್ದನು. ಯಜ್ಞದಲ್ಲಿ ನರಬಲಿಯನ್ನು ಕೊಡಲೋಸುಗ
ಅಂಬರೀಷನು ಇವನನ್ನು ಕೊಂಡುಕೊಂಡಿದ್ದನು. ಶುನಃಶೇಪನನ್ನು
ಕೊಂಡೊಯ್ಯುವಾಗ ಮಾರ್ಗದಲ್ಲಿ ವಿಶ್ವಾಮಿತ್ರನ ಭೇಟಿಯಾಯಿತು. ಶುನಃಶೇಪನು
ತನ್ನ ಸೋದರಮಾವನಾದ ವಿಶ್ವಾಮಿತ್ರನಿಗೆ ಶರಣುಹೊಗಿ, 'ಎಲೈ ಮುನಿಯೇ,
ನನಗೆ ತಾಯಿಯೂ ಇಲ್ಲ, ತಂದೆಯೂ ಇಲ್ಲ. ಅಂದಬಳಿಕ ಮಿಕ್ಕ ನೆಂಟರಿಷ್ಟರು
ಯಾರು ನನಗೆ? ಈ ಸ್ಥಿತಿಯಲ್ಲಿರುವ ನನ್ನನ್ನು, ಹೇ ಸೌಮ್ಯನೇ, ಹೇ ಮುನಿಶ್ರೇಷ್ಠನೇ,
ಧರ್ಮವೆಂದು ನೀನು ನನ್ನನ್ನು ರಕ್ಷಿಸಬೇಕು. ಹೇ ಪುರುಷಶ್ರೇಷ್ಠನೇ, ನೀನೇ
ನನ್ನ ರಕ್ಷಕನು. ಶರಣಾಗತರೆಲ್ಲರನ್ನೂ ರಕ್ಷಿಸುವವನು ನೀನೇ ಆಗಿರುವಿ. ಅಂಬರೀಷನ
ಕಾರ್ಯವೂ ನಡೆಯಬೇಕು; ನಾನು ದೀರ್ಘಾಯುವಾಗಿರಬೇಕು. ಉತ್ಕೃಷ್ಟ
ತಪಸ್ಸನ್ನು ಮಾಡಿ ನಾನು ಸ್ವರ್ಗಲೋಕವನ್ನು ಪಡೆಯುವಂತಾಗಬೇಕು. ಇದಕ್ಕಾಗಿ
ನೀನು ಉದಾರ ಅಂತಃಕರಣದಿಂದ, ಅನಾಥನಾದ ನನಗೆ ಸ್ವಾಮಿಯಾಗಬೇಕು.
ಎಲೈ ಧರ್ಮನಿಷ್ಠನೇ, ತಂದೆಯು ಮಗನನ್ನು ಕಾಪಾಡುವಂತೆ ನೀನು ನನ್ನನ್ನು
ಈ ಸಂಕಟದಿಂದ ಕಾಪಾಡಬೇಕು' ಎಂದನು. ಶುನಃಶೇಪನ ಬಗ್ಗೆ ವಿಶ್ವಾಮಿತ್ರನ
ಅಂತಃಕರಣವು ಕರಗಿತು. ಶುನಃಶೇಪನನ್ನು ಬದುಕಿಸಲು ನೆರವಾಗಿರೆಂದು