ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨೨ ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು ವಿಶ್ವಾಮಿತ್ರನು ತನ್ನ ಮಕ್ಕಳಿಗೆ ಹೇಳಿದನು. ಅವರು ಆತನ ಹೇಳಿಕೆಯನ್ನು ಅಲಕ್ಷಿಸಿದ್ದಕ್ಕಾಗಿ ವಿಶ್ವಾಮಿತ್ರನು ಅವರಿಗೆ ಶಾಪವನ್ನಿತ್ತನು. ಸರ್ವದುಃಖನಾಶಕ ರಾಮಂತ್ರದಿಂದ ಶುನಃಶೇಫನನ್ನು ವಿಶ್ವಾಮಿತ್ರನು ರಕ್ಷಿಸಿದನು. ವಿಶ್ವಾಮಿತ್ರನು ಶುನಃಶೇಫನಿಗೆ ಈ ರೀತಿ ಹೇಳಿದನು: “ದರ್ಭೆಯ ಹಗ್ಗಗಳಿಂದ ಕಟ್ಟಲ್ಪಟ್ಟ ಕೆಂಪು ಪುಷ್ಟಗಳಿಂದ ಹಾಗೂ ಕೆಂಪು ಗಂಧದಿಂದ ಅಲಂಕರಿಸಲ್ಪಟ್ಟ ನೀನು ಯಜ್ಞದ ಯೂಪದ ಬಳಿಗೆ ಬಂದ ನಂತರ ಈ ಮಂತ್ರಗಳಿಂದ ಅಗ್ನಿಯನ್ನು ಸ್ತುತಿಸು. ಅಂಬರೀಷನ ಯಜ್ಞದಲ್ಲಿ ಈ ಎರಡು ಮಂತ್ರ ಸ್ತೋತ್ರಗಳನ್ನು ಹೇಳು. ನಿನ್ನ ಇಷ್ಟಾರ್ಥವು ಪೂರ್ತಿಗೊಳ್ಳುವದು' ಎಂದನು. ಆ ರೀತಿ ಶುನಃಶೇಫನು ಇಂದ್ರ ಹಾಗೂ ವಿಷ್ಣು ಈ ದೇವತೆಗಳನ್ನು ಕುರಿತು ಉತ್ಕೃಷ್ಟ ಮಂತ್ರಗಳಿಂದ ಸ್ತುತಿಸಿದನು. ಶತಃ ಪ್ರೀತಃ ಸಹಸ್ರಾಕ್ಷೆ ರಹಸಯಸ್ತುತಿತೋಷಿತಃ | ದೀರ್ಘಮಾಯುಕ್ತದಾ ಪ್ರಾದಾಚ್ಚುನಃಶೇಪಾಯ ವಾಸವಃ ||೨೬|| ಈ ವಿಧದ ರಹಸ್ಯಸ್ತುತಿಯಿಂದ ಇಂದ್ರನು ಪ್ರಸನ್ನನಾದನು. ಶುನಃಶೇಫನಿಗೆ ಸಂತೋಷದಿಂದ ದೀಘಃ ಹೀಗೆ ಶುನಃಶೇಫನಿಗೆ ದೀರ್ಘ ಆಯುಸ್ಸು ದೊರೆತದ್ದು ಮಂತ್ರಪ್ರಭಾವ ದಿಂದಾಗಿದೆ. ಶುನಃಶೇಫನು ಇಂದ್ರನನ್ನು ಯಾಚಿಸಿರಲಿಲ್ಲ; ವಿಶ್ವಾಮಿತ್ರನ ಬಳಿ ದೀರ್ಘಾಯುಸ್ಸನ್ನು ಬೇಡಿದ್ದನು. ಆದ್ದರಿಂದ ಇದು ಇಂದ್ರನ ಪರವಾಗಿರದೇ ಆತನ ಆಶೀರ್ವಾದವೆಂದೆನ್ನುವದು ಸೂಕ್ತವಾಗುತ್ತದೆ. ಈ ಆಶೀರ್ವಾದದ ಸ್ವರೂಪವು ಮಾತ್ರ ವರದಂತಾಗಿದೆ. ವಾಲ್ಮೀಕಿಯು ಸಹ 'ವರ'ವೆಂಬ ಶಬ್ದವನ್ನು ಬಳಸಿಲ್ಲ. ೬. ರಾವಣನಿಗೆ ಮಂತ್ರ ಪ್ರಾಪ್ತಿಯಾಗಿದ್ದು ಉತ್ತರಕಾಂಡ/ಪ್ರಕ್ಷಿಪ್ತ-೬೫ ರಾವಣನು ದಿಗ್ವಿಜಯ ಮಾಡಲು ಚಂದ್ರಲೋಕಕ್ಕೆ ಹೋಗಿದ್ದನು. ಅಲ್ಲಿಯ ಚಂದ್ರ ಕಿರಣಗಳ ಶೀತಲತೆಯನ್ನು ಸಹಿಸುವದು ರಾವಣನಿಗೆ ಅಸಾಧ್ಯವಾಯಿತು. ಆಗ ಆತನು ತನ್ನ ಧನುಸ್ಸನ್ನೆತ್ತಿಕೊಂಡು ಚಂದ್ರನಿಗೆ ಗುರಿ ಇಡಲಾರಂಭಿಸಿದನು. ಈ ರೀತಿ ಚಂದ್ರನನ್ನು ಪೀಡಿಸುತ್ತಿರುವದನ್ನು ಕಂಡು ಬ್ರಹ್ಮದೇವನು ಚಂದ್ರಲೋಕಕ್ಕೆ ಬಂದನು. ರಾವಣನನ್ನು ಕುರಿತು, “ನೀನು ಚಂದ್ರನಿಗೆ ಪೀಡೆ ಕೊಡಬೇಡ! ಈ ಮಹಾತೇಜಸ್ಸುಳ್ಳ ದ್ವಿಜರಾಜನು ಜಗತ್ತಿನ ಹಿತವನ್ನು ಬಯಸುತ್ತಾನೆ. ನಾನು