ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂದೇಹಾಸ್ಪದ ಶಾಪವರಗಳು ೫೨೩ ನಿನಗೆ ಒಂದು ಮಂತ್ರವನ್ನು ಉಪದೇಶಿಸುವೆ. ಈಮಂತ್ರವನ್ನು ಜಪಿಸುವವನು ಎಂದಿಗೂ ಮರಣ ಹೊಂದಲಾರನು. ಮರಣವು ಸನ್ನಿಹಿತವಾದಾಗ ಈ ಮಂತ್ರವನ್ನು ಜಪಿಸಬೇಕು' ಎಂದನು. ಆಗ ರಾವಣನು ಈ ಮಂತ್ರದ ಅಪೇಕ್ಷೆಯನ್ನು ವ್ಯಕ್ತಪಡಿಸಿ ಬ್ರಹ್ಮದೇವನಿಗೆ, 'ನೀನು ನನಗೆ ಪ್ರಸನ್ನನಾಗಿದ್ದರೆ ಮತ್ತು ನನಗೆ ಮಂತ್ರೋಪದೇಶವನ್ನು ಮಾಡುವ ಇಚ್ಚೆಯು ನಿನಗಿದ್ದರೆ ಆ ಮಂತ್ರವನ್ನು ನನಗೆ ಕೊಡು! ಇದರಿಂದ ಎಲ್ಲ ದೇವತೆಗಳ, ಅಸುರರ, ದಾನವರ ಹಾಗೂ ಸಕಲ ಪಕ್ಷಿಪಾಣಿಮಾತ್ರರ ಭಯವು ನನಗೆ ಇಲ್ಲದಂತಾಗುವದು. ನಿನ್ನ ಕೃಪಾ ಪ್ರಸಾದದಿಂದ ನಾನು ಯಾರಿಂದಲೂ ಜಯಿಸಲ್ಪಡಲಾರೆನು. ಇದರಲ್ಲಿ ಸಂಶಯವಿಲ್ಲ' ಎಂದು ನುಡಿದನು. ಬ್ರಹ್ಮದೇವನು ಈ ಮಂತ್ರಗಳನ್ನು ಕೊಟ್ಟನಂತರ ರಾವಣನು ಈ ಮಂತ್ರವನ್ನು ಸ್ವೀಕರಿಸಿದನು. ದತ್ವಾ ತು ರಾವಣಸ್ಯೆಮ ವರಂ ಸ ಕಮಲೋದ್ಭವಃ | ಪುನರೇವಾಗಮಾತ್ ಕ್ಷಿಪ್ರ ಬ್ರಹ್ಮಲೋಕಂ ಪಿತಾಮಹಃ 19/೧॥ ಈ ಸಂದರ್ಭದಲ್ಲಿ ವಾಲ್ಮೀಕಿಯು 'ವರ' ಎಂಬ ಶಬ್ದವನ್ನು ಯೋಜಿಸಿದ್ದಾನೆ. ಅನುವಾದದಲ್ಲಿಯೂ ಈ ರೀತಿ ರಾವಣನಿಗೆ ವರವನ್ನು ಕೊಟ್ಟ ನಂತರ ಪಿತಾಮಹನಾದ ಬ್ರಹ್ಮದೇವನು ಕೂಡಲೇ ಬ್ರಹ್ಮಲೋಕಕ್ಕೆ ತೆರಳಿದನು' ಎಂದಿದೆ. ಹೀಗಿದ್ದರೂ, ವರಗಳನ್ನು ಕುರಿತು ಬರೆಯುವಾಗ ಈ ವರವನ್ನು ಏಕೆ ಬರೆದಿಲ್ಲ? ಎಂಬುದು ಕೆಳಗಿನ ಕಾರಣಗಳಿಂದ ತಿಳಿದುಬರುತ್ತದೆ. ಯಾವುದೇ ಮಂತ್ರವು ಸಿದ್ಧಮಂತ್ರವಾಗಲು ಯಥಾಯೋಗ್ಯ ಜಪವು ಅವಶ್ಯಕವಿದೆ. ಕೆಲವು ನಿಯಮಬಂಧಗಳನ್ನು ಪಾಲಿಸಬೇಕಾಗುತ್ತದೆ. ಅದರಲ್ಲಿ ಲೋಪದೋಷಗಳಾದರೆ ಇಚ್ಚಿತ ಪರಿಣಾಮವು ಫಲಕಾರಿಯಾಗಲಾರದು. ವರದ ವಿಷಯದಲ್ಲಿ ಒಮ್ಮೆ ವರವನ್ನು ಪಡೆದನಂತರ ವರ ಪಡೆದ ವ್ಯಕ್ತಿಯ ಮೇಲೆ ಯಾವ ಬಂಧನಗಳೂ ಕಟ್ಟಳೆಗಳೂ ಇರುವದಿಲ್ಲ. ಆ ವ್ಯಕ್ತಿಯು ವರವನ್ನು ಪಡೆದನಂತರ ಹೇಗೆ ವರ್ತಿಸಿದರೂ ವರದ ಪರಿಣಾಮವು ನಿಶ್ಚಿತಸಾಧ್ಯವಿರುತ್ತದೆ. ಜಪವು ಮಂತ್ರಸಿದ್ಧಿಯ ಸಾಧನವಿದೆ. 'ಸಾಧ್ಯ' ಸಂಗತಿಯಲ್ಲ. ಇದು ಕಟ್ಟಳೆಯ ವರಗಳಿಗೆ ಅನ್ವಯಿಸುವದಿಲ್ಲ.