ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂದೇಹಾಸ್ಪದ ಶಾಪವರಗಳು ೫೨೫ ೮. ವಿಭೀಷಣನಿಗೆ ರಾಮನ ಆಜ್ಞೆ ಉತ್ತರಕಾಂಡ/೧೦೮ ಮಹಾ ಪ್ರಸ್ಥಾನಕ್ಕೆ ಹೊರಡುವದೆಂದು ನಿಶ್ಚಿತವಾದ ನಂತರ ರಾಮನು ಮಿಕ್ಕೆಲ್ಲ ಸಂಗತಿಗಳ ಏರ್ಪಾಟಿನಲ್ಲಿ ತೊಡಗಿದನು. ಸಹೋದರರನ್ನು, ಮಿತ್ರ- ಬಂಧುಗಳನ್ನು ಭೇಟಿಯಾದನು. ಆ ಸಮಯದಲ್ಲಿ ವಿಭೀಷಣನಿಗೆ, ಯಾವತ್ನಜಾ ಧುಷ್ಯಂತಿ ತಾವತ್ವಂ ವೈ ವಿಭೀಷಣ | ರಾಕ್ಷಸೇಂದ್ರ ಮಹಾವೀರ್ಯ ಲಂಕಾಸ್ಥ: ಸ್ವಂ ಧರಿಷ್ಯಸಿ ೨೭|| ಯಾವಚ್ಚಂದ್ರಶ್ಚ ಸೂರ್ಯಶ್ಚ ಯಾವತ್ತಿಷ್ಠತಿ ಮೇದಿನೀ | ಯಾವಚ್ಚ ಮತ್ಯಥಾ ಲೋಕೇ ತಾವಮ್ರಾಜ್ಯಂ ತವಾಹ ೨೮॥ 'ವಿಭೀಷಣನೇ, ಎಲೈ ಮಹಾವೀರ ರಾಕ್ಷಸಾಧಿಪತಿಯೇ, ಈ ಭೂಲೋಕದಲ್ಲಿ ಪ್ರಜೆಗಳಿರುವವರೆಗೆ ನೀನು ದೇಹದೊಂದಿಗೆ ಜೀವಿಸಿ ಲಂಕೆಯಲ್ಲಿರು. ಸೂರ್ಯ ಚಂದ್ರರು ಸೃಷ್ಟಿಯನ್ನು ಬೆಳಗುತ್ತಿರುವವರೆಗೆ ಮತ್ತು ನನ್ನ ಕಥೆಯು ಈ ಲೋಕದಲ್ಲಿ ಪ್ರಚಾರದಲ್ಲಿರುವವರೆಗೆ ನಿನ್ನ ರಾಜ್ಯವು ಸ್ಥಿರವಿರಲಿ' ಎಂದು ನುಡಿದನು. ರಾಮನ ಈ ಮೇಲಿನ ಹೇಳಿಕೆಯನ್ನು ವಾಲ್ಮೀಕಿಯು 'ವರವೆಂದು ಹೇಳದೇ ಅದಕ್ಕೆ 'ಆಜ್ಞೆ' ಎಂಬ ಶಬ್ದವನ್ನು ಬಳಸಿದ್ದಾನೆ. ರಾಮನು ಮತ್ತೆ, ಶಾಸಿತಶ್ಚ ಸಖತ್ತೇನ ಕಾರ್ಯಂ ತೇ ಮಮ ಶಾಸನಮ್ |೨೯| “ಮಿತ್ರತ್ವದಿಂದ ನಾನು ನಿನಗೆ ಆಜ್ಞೆ ಮಾಡುತ್ತಿದ್ದೇನೆ. ನೀನು ಅದರಂತೆ ನಡೆದುಕೊಳ್ಳುವದು ಅವಶ್ಯವಿದೆ' ಎಂದು ನುಡಿದನು. ಹನುಮಾನನ ಇಷ್ಟಾರ್ಥ ಪೂರ್ತಿಯಂತೆ (ಉತ್ತರಕಾಂಡ/೪೦ ಪರಿಶೀಲಿಸಿರಿ) ಈ ಸಂದರ್ಭದಲ್ಲಿಯೂ ರಾಮನು ತನ್ನ ಉತ್ಕಟ ಪ್ರೇಮ-ಸದ್ಭಾವನೆಗಳನ್ನು ಪ್ರಕಟಿಸಿದ್ದಾಣೆ. ಇದು ಆತನ ಸದಿಚ್ಛೆಯಾಗಿತ್ತು. ಇದಕ್ಕೆ ಆಶೀರ್ವಾದವೆಂದರೂ ಅಡ್ಡಿಯಿಲ್ಲ; 'ವರ'ವೆಂದು ಮಾತ್ರ ಹೇಳಲಾಗುವುದಿಲ್ಲ.