ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಶ್ರವಣಕುಮಾರನ ಪಿತನ ಶಾಪದ ಫಲವಾಗಿ ದಶರಥನಿಗೆ ಅಕಾಲಮೃತ್ಯುವಾಯಿತು. ಇನ್ನೂ ಹಲವಾರು ಪತಿವ್ರತೆಯರ ಶಾಪದಿಂದ ರಾವಣನು ಸಾವಿಗೆ ಈಡಾದನು. ಬ್ರಹ್ಮದೇವ ಹಾಗೂ ನಲಕೂಬರರಿಂದ ರಾವಣನಿಗೆ ಕಟ್ಟಳೆಯ ಶಾಪಗಳು ದೊರೆತಿದ್ದವು. ಕಟ್ಟಳೆಗಳ ಪಾಲನೆಯಾಗುವ ಬದಲು ಅವುಗಳ ಉಲ್ಲಂಘನೆಯ ಸಂಭವ ಅಧಿಕವಿತ್ತು. ರಾವಣನಿಗೆ ಭಯವಿದ್ದುದರಿಂದ ಕಟ್ಟಳೆಗಳನ್ನು ಸರಿಯಾಗಿ ಪಾಲಿಸಿದನು. ರಾವಣನ ವಧೆಗಾಗಿಯೇ ವೇದವತಿಯು ಪುನರ್ಜನ್ಯವನ್ನು ತಾಳುವ ಪ್ರತಿಜ್ಞೆ ಮಾಡಿದಳು. ಮರಣ ಶಯ್ಯೆಯಲ್ಲಿದ್ದ ಅನರಣ್ಯ ರಾಜನ ನುಡಿಗಳು ರಾವಣನಿಗೆ ಶಾಪರೂಪವಾದವು. ಅನೇಕ ಶಾಪಗಳು ಸೇರಿ ರಾವಣನಿಗೆ ಮೃತ್ಯು ಬಂದಿತು. ವಸಿಷ್ಠ ಮತ್ತು ನಿಮಿರಾಜ ಇವರು ಪರಸ್ಪರರಿಗೆ ಶಾಪಕೊಟ್ಟು ಇಬ್ಬರೂ ನಿಶ್ಚೇತನಗೊಂಡರು.

ವಸಿಷ್ಠನ ಪುತ್ರರು, ವಿಶ್ವಾಮಿತ್ರನ ಪುತ್ರರು, ಮಾರೀಚ ಮತ್ತು ದನು ಮೊದಲಾದವರು ಶಾಪದ ಪರಿಣಾಮಗಳನ್ನು ಜನ್ಮಾಂತರದಲ್ಲಿ ಅನುಭವಿಸಿದರು. ಹೀನಯೋನಿಯಲ್ಲಿ ಅವರು ಜನಿಸಬೆಕಾಯಿತು. ನಿಕೃಷ್ಟ ಆಹಾರವನ್ನು ಸೇವಿಸಿ ಬಾಳಿದರು. ಸ್ವರ್ಗಸ್ಥ ದೇವರಿಗೂ ಅಪ್ಸರೆಯರಿಗೂ ಶಾಪ ತಪ್ಪಿಲ್ಲ. ವಿಷ್ಣು, ಊರ್ವಶಿ, ಪುಂಜಿಕಸ್ಥಲಾ ಇವರು ಮೃತ್ಯುಲೋಕದಲ್ಲಿ ಬದುಕಬೆಕಾಯಿತು. ಬ್ರಹ್ಮದತ್ತ ಹಾಗೂ ನೃತ ಎಂಬ ರಾಜಮನೆತನದ ಪುರುಷರು ಹದ್ದಿನ ಮತ್ತು ಓತಿಕೇತ'ದ ಜನ್ನ ತಾಳಬೇಕಾಯಿತು. ಇಂದ್ರನು ಮೇಷವೃಷಣನಾದನು. ಕುಬೇರನ ಒಂದು ಕಣ್ಣು ಭಸ್ಮವಾಗಿ ಇನ್ನೊಂದು ಪಿಂಗಲವಾಯಿತು. ನಾಯಿಯನ್ನು ದೊಣ್ಣೆಯಿಂದ ಹೊಡೆದ ಕಾರಣ ಒಬ್ಬ ಬ್ರಾಹ್ಮಣನಿಗೆ ಎರಡನೆಯ ಜನ್ಮದಲ್ಲಿ ಕುಲಪತಿಯ ಜನ್ಮ ಬಂದಿತು. ಆತನು ನರಕವಾಸವನ್ನು ಅನುಭವಿಸಬೇಕಾಯಿತು. ಅಹಲ್ಯೆಯು ರೂಪಹೀನಳಾಗಿ ಬೂದಿಯಲ್ಲಿ ಉರುಳಾಡಬೇಕಾಯಿತು. ವಿಶ್ವಾವಸು ಎಂಬ ಗಂಧರ್ವನ ಹಾಗೂ ತುಂರುಬನ ಅಧಃಪಾತ ನಡೆಯಿತು. ಅವರು ಘೃಣಾಸ್ಪದ ಕೌರೂಪ್ಯವನ್ನು ಪಡೆದರು. ಇವೆಲ್ಲ ಶಾಪದ ಪರಿಣಾಮಗಳು. ಕೆಟ್ಟದ್ದರ ಜೊತೆಗೆ ಒಳ್ಳೆಯದಕ್ಕೂ ಬಾಧೆ ಬರುತ್ತದೆ. ಈ ರೀತಿ ದುಷ್ಟರ ಸಹವಾಸದಿಂದ ತಾಟಕಾವನ, ದಂಡಕಾರಣ್ಯ, ಲಂಕೆ ಮುಂತಾದವು ನಾಶಗೊಂಡವು. ವಾಯು ಭಕ್ಷಣೆ ಮಾಡಿ ಜೀವಿಸುವ ಸ್ಥಿತಿಯು ಅಹಲ್ಯಗೆ ಉಂಟಾಯಿತು. ಯದುವಂಶದವರು ಉದ್ದಾಮರಾದರು. ಪೃಥ್ವಿಯು ರಾಜರನೇಕರ ಪತ್ನಿಯಾದರೂ ಬಂಜೆಯಾಗಿ ಉಳಿಯಬೇಕಾಯಿತು. ನಂದಿಕೇಶ್ವರನ ಶಾಪದ ಫಲವಾಗಿ ರಾವಣನ ಕುಲಸಂಹಾರವಾಯಿತು. ಪುಲಸ್ತ್ಯನ ದೃಷಿಕ್ಷೇಪದಿಂದ ತೃಣಬಿಂದು ಕನ್ಯೆಯು ಗರ್ಭವತಿಯಾದಳು.