ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೩೩

ವಾಲ್ಮೀಕಿ ರಾಮಾಯಣದಲ್ಲಿಯ ಕೆಲವು ಶಾಪಗಳ ಪರಿಣಾಮಗಳು
ಏನೆಂಬುದು ನಿಖರವಾಗಿಲ್ಲ.

ಕಟ್ಟಳೆಯ ಶಾಪಗಳು

ಕಟ್ಟಳೆಯ ಶಾಪಗಳು (Conditional curse) ಈ ಶಬ್ದದ ಬಳಕೆಯನ್ನು ವೆಸ್ಟರ್ ಮಾರ್ಕ್ ನು ಪ್ರಥಮವಾಗಿ ರೂಢಿಯಲ್ಲಿ ತಂದನು. ಇತರ ಎಲ್ಲ ಶಾಪಗಳಿಗಿಂತಲೂ ಭಿನ್ನವಾದ ನೈತಿಕತೆಯು ಈ ಕಟ್ಟಳೆಯ ಶಾಪದಲ್ಲಿರುತ್ತದೆ. ಶಾಪವನ್ನು ಕೊಡುವ ವ್ಯಕ್ತಿಯಲ್ಲಿ, ಶಾಪಿತನಾಗುವ ವ್ಯಕ್ತಿಯ ಬಗ್ಗೆ ಸಹಾನೂಭೂತಿ ಇರುತ್ತದೆ. ವ್ಯಕ್ತಿಯು ಶಾಪಿತನಾಗುತ್ತಿದ್ದರೂ ಆತನಿಗೆ ಶುಭವನ್ನು ಬಯಸಿ, ಶಾಪದ ದುಷ್ಪರಿಣಾಮಗಳ ತಾಪವು ಆತನಿಗೆ ತಾಗಬಾರದೆಂಬ ಕಳಕಳಿ ಶಾಪ ಕೊಡುವಾತ ನಲ್ಲಿರುತ್ತದೆ. ಹೀಗೆಂದು ಶಾಪದಿಂದ ಆಗಬಹುದಾದ ಪರಿಣಾಮಗಳ ಮುನ್ಸೂಚನೆ ಕೊಟ್ಟು ಅವುಗಳನ್ನು ಆತನಿಗೆ ತಪ್ಪಿಸುವ ಉಪಾಯಗಳನ್ನು ಸೂಚಿಸಲಾಗಿರುತ್ತದೆ. ಯೋಗ್ಯ ಮುನ್ನೆಚ್ಚರಿಕೆಯಿಂದ ಶರತ್ತುಗಳನ್ನು ಪಾಲಿಸಿದರೆ, ಶಾಪದ ದುಷ್ಪರಿಣಾಮ ಗಳನ್ನು ಅನುಭವಿಸಬೇಕಾಗುವುದಿಲ್ಲ; ಶಾಪವು ಶಾಪವಾಗಿ ಉಳಿಯುವುದೇ ಇಲ್ಲ. ಕಟ್ಟಳೆಗಳನ್ನು ಪಾಲಿಸದಿದ್ದರೆ ಮಾತ್ರ ಶಾಪದ ಪರಿಣಾಮ ತಟ್ಟುತ್ತದೆ. ವೆಸ್ಟರ್ ಮಾರ್ಕ್ನ ಹೇಳಿಕೆ:

“Conditional curse is an important development of the principle of cursing and blessing and has had considerable influence in the making of morality, especially in the sphere of good faith, honesty and truthfulness... The energy of a conditional curse is the supernatural energy of an ordinary curse or of its embodiment, in a latent state. This is discharged by the act, if or when it takes place, against which the curse is directed.”೧೪

ಕಟ್ಟಳೆಯ ಶಾಪಗಳಲ್ಲಿ ಸಾಮಾಜಿಕ ಹಾಗೂ ನೈತಿಕ ಪ್ರಜ್ಞೆ ಇರುತ್ತದೆ. ಶಾಪದ ಪರಿಣಾಮಗಳನ್ನು ತೊಡೆದುಹಾಕಲು ಬರುವುದಿಲ್ಲ; ಆದರೆ, ಕಟ್ಟಳೆಯ ಶಾಪಗಳ ಪರಿಣಾಮಗಳನ್ನು ತಪ್ಪಿಸಿಕೊಳ್ಳುವುದು ಶಾಪ ಹೊಂದಿರುವವನ ಕೈಯಲ್ಲಿದೆ. ಉಃಶಾಪದಿಂದ ಶಾಪದ ತೀವ್ರತೆ ಕಡಿಮೆಯಾಗಬಹುದು.

——————
೧೪. Encyclopaedia of Religion and Ethics, p. 372.