ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಕಾಲಾವಧಿಯನ್ನು ಮೊಟಕುಗೊಳಿಸಬಹುದು; ಆದರೆ ಅದೆಲ್ಲ ಕಟ್ಟಳೆಯ ಶಾಪವನ್ನು ಕೊಡುವವನನ್ನು ಅವಲಂಬಿಸಿರುತ್ತದೆ. ಉಃಶಾಪವು ಯಾಚಿತವಿರಲಿ, ಅಯಾಚಿತವಿರಲಿ, ಅದಕ್ಕೆ ಶಾಪ ಕೊಡುವಾತನ ಕೃಪೆ ಬೇಕು. ಕಟ್ಟಳೆಯ ಶಾಪಗಳಿರುವಂತೆ ಕಟ್ಟಳೆಯ ವರಗಳ ಸಾಧ್ಯತೆ ಇದೆ; ಆದರೆ, ಅವುಗಳ ಪ್ರಯಾಣ ತೀರ ಕಡಿಮೆ.

ವಾಲ್ಮೀಕಿಯ ರಮಾಯಣದಲ್ಲಿ ಹತ್ತು ಕಟ್ಟಳೆಯ ಶಾಪಗಳಿವೆ. ಕೈಕೇಯಿಯನ್ನು ಉದ್ದೇಶಿಸಿ ದಶರಥನು, ಅವಳ ಪತ್ನಿತ್ವವನ್ನು ತೊರೆದುಹಾಕುವುದಾಗಿ ಕೊಟ್ಟ ಮುನ್ಸೂಚನೆಯು ಕಟ್ಟಳೆಯ ಶಾಪದಂತಿದೆ. ಕೈಕೇಯಿ ತನ್ನ ಛಲವನ್ನು ಬಿಟ್ಟಿದ್ದರೆ, ಪರಿಣಾಮಗಳುಂಟಾಗುತ್ತಿರಲಿಲ್ಲ. ಭರತನು ಯುವರಾಜ್ಯಪದವನ್ನು ಸ್ವೀಕರಿಸಿದರೆ, ತನ್ನ ಮೃತ್ಯುವಿನ ನಂತರ ನಡೆಯಿಸಲಾಗುವ ಶ್ರಾದ್ಧಾದಿ ಪಿಂಡೋದಕಗಳು ತನಗೆ ತಲುಪದಿರಲಿ ಎಂದು ದಶರಥನು ಶಾಪವಿತ್ತನು. ಭರತನು ಯುವರಾಜ್ಯ ಪದವನ್ನು ಸ್ವೀಕರಿಸಲಿಲ್ಲ; ಆದ್ದರಿಂದ ಆತನಿಗೆ ದಶರಥನ ಶಾಪದ ಪರಿಣಾಮವಾಗಲಿಲ್ಲ. ಪ್ರಸ್ರವಣಪರ್ವತ ಮತ್ತು ನದಿ ಇವರಿಂದ ರಾಮನು ವಿಚಾರಿಸದ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕು! ಎಂಬ ಕಟ್ಟಳೆಯಿಂದ ಶಾಪವನ್ನು ರಾಮನು ನುಡಿದಿದ್ದನು. ಪ್ರಸ್ತವಣಪರ್ವತರಾಜನು ಸಂಕೇತಗಳನ್ನು ರಾಮನಿಗೆ ತಿಳಿಸಿದ್ದರಿಂದ ಶಾಪವು ಅರ್ಥಹೀನಗೊಂಡಿತು. ಮತಂಗನ ಕಟ್ಟಳೆಗಳನ್ನು ವಾಲಿಯು ಕೂಲಂಕುಷವಾಗಿ ಪಾಲಿಸಿದ್ದರಿಂದ ಶಾಪಕ್ಕೆ ಒಳಪಡಲಿಲ್ಲ. ಸೀತೆಯ ಮನಸ್ಸಿನ ವಿರುದ್ಧ ಅವಳನ್ನು ಸ್ಪರ್ಶಿಸುವುದನ್ನು ರಾವಣನು ಬುದ್ಧಿಪೂರ್ವಕವಾಗಿ ತ್ಯಜಿಸಿದನು. ಹೀಗೆ ವರ್ತಿಸಿದ್ದರಿಂದ ಬ್ರಹ್ಮದೇವ ಮತ್ತು ನಲಕೂಬರರ ಶಾಪದ ಪರಿಣಾಮ ರಾವಣನಿಗೆ ಆಗಲಿಲ್ಲ; ರಾವಣನ ಶಿರವು ಸಿಡಿದು ಹೋಳಾಗಲಿಲ್ಲ. ಲಕ್ಷ್ಮಣನು ಆತ್ಮಸಮರ್ಪಣೆ ಮಾಡಿ ದುರ್ವಾಸನ ಶಾಪವನ್ನು ನಿರರ್ಥಕಗೊಳಿಸಿದನು.

ಯಜ್ಞವನ್ನು ಪ್ರಾರಂಭಿಸಲು ಅನುವಾಗದೇ ಆತನ ಆಜ್ಞೆಯನ್ನು ಪಾಲಿಸದೇ ಹೋದರೆ ವಿಶ್ವಾಮಿತ್ರನು ಶಾಪ ಕೊಡಬಹುದು! ಎಂಬ ಭಯದಿಂದ ಋಷಿಮುನಿಗಳು ಆತನ ಅಪ್ಪಣೆಯ ಬಗ್ಗೆ ಎಚ್ಚರಿಕೆ ವಹಿಸಿದರು. ಮಾತೆಯ ಮನಸ್ಸಿನ ವಿರುದ್ಧವಾಗಿ “ರಾಮನು ವನವಾಸಕ್ಕೆ ಹೋದರೆ ಅವನಿಗೆ ನರಕವಾಸ” ಎಂಬ ಶಾಪದಂತಿದ್ದ ಉದ್ಗಾರವನ್ನು ಕೌಸಲ್ಯೆಯು ನುಡಿದಿದ್ದಳು. ಇದು ಕಟ್ಟಳೆಯ ಶಾಪವೆನಿಸುತ್ತದೆ. ರಾಮನು ಈ ಕಟ್ಟಳೆಯಂತೆ ವರ್ತಿಸಿಲ್ಲ. ಹೀಗೆ ಕಟ್ಟಳೆಯನ್ನು ಉಲ್ಲಂಘಿಸಿದರೂ ಶಾಪದ ಪರಿಣಾಮ ಕಂಡುಬರದ ಇದೊಂದು ಸಂದರ್ಭವಾಗಿದೆ. ರಾಮಾಯಣದಲ್ಲಿಯ ಈ ಸಂದರ್ಭವನ್ನು ಸೂಕ್ಷ್ಮವಾಗಿ