ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೩೯

ಕೋಪ ಬಂದಾಗ ಪರಿಣಾಮಗಳನ್ನು ಲೆಕ್ಕಿಸದೇ ಕೆಲವೊಮ್ಮೆ ಘೋರ ಶಾಪಗಳು ಕೊಡಲ್ಪಡುತ್ತವೆ. ನಂತರ ಪಶ್ಚಾತ್ತಾಪವೆನಿಸುವುದುಂಟು. ಶಾಪದ ಆಗುಗಳ ತೀವ್ರತೆಯನ್ನು ಕಡಿಮೆ ಮಾಡುವ ಉಪಾಯವೆಂದರೆ 'ಉಃಶಾಪ'ವಾಗಿದೆ. ಹಲವೊಮ್ಮೆ ಇನ್ನೊಂದು ವರವನ್ನು ಕೊಟ್ಟು ಈ ಉದ್ದೇಶವನ್ನು ಪೂರೈಸುತ್ತಾರೆ. ಉಃಶಾಪದಿಂದ ಶಾಪದ ಪರಿಣಾಮದ ಕಾಲಾವಧಿಯನ್ನು ಕಡಿಮೆ ಮಾಡಿ ಸ್ತಿಮಿತಕ್ಕೆ ತರಬಹುದು. ಮಾಡಿದ ತಪ್ಪಿಗೆ ಶಿಕ್ಷೆ ಇದ್ದರೂ ಆ ತಪ್ಪನ್ನು ತಿದ್ದಿಕೊಳ್ಳಬೇಕು! ಶಾಪಹೊಂದಿದವನಿಗೆ ಒಳಿತಾಗಬೇಕು! ಎಂಬ ಅರಿವು ಉಃಶಾಪದ ಹಿನ್ನೆಲೆಯಲ್ಲಿದೆ. ಶಾಪಕ್ಕೆ ಈಡಾದವನು ತನ್ನ ತಪ್ಪನ್ನು ಅರಿತು ಶಾಪದ ಕಾಲಾವಧಿ, ಪರಿಣಾಮ ಕಡಿಮೆಯಾಗಬೇಕೆಂದು ಪ್ರಾರ್ಥಿಸಿಕೊಂಡರೆ ಉಃಶಾಪಗಳನ್ನು ಯಾಚಿತವೆಂದು ಕೊಡುತ್ತಿದ್ದರು. ಒಮ್ಮೊಮ್ಮೆ ಶಾಪವನ್ನು ನುಡಿದವನಿಗೆ ಪಶ್ಚಾತ್ತಾಪವೆನಿಸಿ ಇಲ್ಲವೇ ಬೇರೆ ಕಾರಣಗಳಿಗಾಗಿ ಉಃಶಾಪವನ್ನು ಕೊಟ್ಟರೆ ಅವು ಯಾಚಿತವೆನಿಸಿಕೊಳ್ಳುತ್ತಿದ್ದವು. ಈ ಉಃಶಾಪದಲ್ಲಿ ಶಾಪದ ತೀವ್ರತೆಯನ್ನು ಕಡಿಮೆ ಮಾಡಬೇಕೆಂಬ ಮನೋಭಾವವಿರುತ್ತಿತ್ತು. ಕೆಲವೊಮ್ಮೆ ಶಾಪದ ಉತ್ತರಾರ್ಧದಲ್ಲಿಯೇ ಉಃಶಾಪವು ಬೆರೆತುಕೊಂಡಿರುತ್ತಿತ್ತು. ಉಃಶಾಪದ ಕಾರಣವೇನೇ ಇದ್ದರೂ ಅದನ್ನು ಕೊಡುವ ಇಲ್ಲವೇ ಕೊಡದಿರುವ ಇಲ್ಲವೇ ಅದರಲ್ಲಿ ಪರಿವರ್ತನೆ ಮಾಡುವ ಸಾಧ್ಯತೆಯು ಸಂಪೂರ್ಣವಾಗಿ ಶಾಪದಾತನ ಇಚ್ಛೆಯನ್ನವಲಂಬಿಸಿರುತ್ತದೆ. ಪ್ರತಿಯೊಂದು ಶಾಪಕ್ಕೆ ಉಃಶಾಪ ವಿರುವುದಿಲ್ಲ. ರಾಮಾಯಣದಲ್ಲಿಯ ಒಟ್ಟು ಅರವತ್ತೊಂದು ಶಾಪಗಳಲ್ಲಿ ಕೇವಲ ಹನ್ನೊಂದಕ್ಕೆ ಉಃಶಾಪಗಳಿವೆ. ಉಃಶಾಪಗಳಿಗೆ ಸ್ವತಂತ್ರ ಅಸ್ತಿತ್ವವಿರದೇ ಅವು ಶಾಪವನ್ನಾಧರಿಸಿಯೇ ಇರುತ್ತವೆ. ಶಾಪದ ತುಲನೆಯಲ್ಲಿ ಉಃಶಾಪದ ಸ್ಥಾನವು ಕಡಿಮೆ ಮಹತ್ವವುಳ್ಳದ್ದು, ಕಡಿಮೆ ದರ್ಜೆಯದಿದ್ದರೂ ಅದರ ಫಲಿತಾಂಶಗಳು ಉದ್ದೇಶಭರಿತವಿರುತ್ತದೆ.

ಸ್ಥೂಲಶಿರಾ ಋಷಿಯ ಶಾಪದಿಂದ ವಿಶ್ವಾವಸು ಎಂಬ ಗಂಧರ್ವನು ಕಬಂಧರಾಕ್ಷಸನಾದನು. ಆಗ ಕಬಂಧನು ಕೋರಿದಂತೆ “ನಿರ್ಜನ ಕಾಡಿನಲ್ಲಿ ರಾಮನು ಬಂದು ನಿನ್ನ ಹಸುಗಳನ್ನು ತುಂಡರಿಸಿ ನಿನ್ನನ್ನು ಎಂದು ದಹಿಸಿಬಿಡುವನೋ ಅಂದು ನಿನಗೆ ನಿನ್ನ ಭವ್ಯ ದಿವ್ಯ ಶುಭರೂಪವು ಮರಳಿ ದೊರೆಯುವುದು” ಎಂಬ ಯಾಚಿತ ಉಃಶಾಪ ದೊರಕಿತು. ಇದೇ ಗಂಧರ್ವನಿಗೆ ಇಂದ್ರನಿಂದಲೂ ಶಾಪ ದೊರೆತಿತ್ತು. ಈತನು ಇಂದ್ರನಿಂದಲೂ ಉಃಶಾಪವನ್ನು ಬೇಡಿಕೊಂಡಿದ್ದನು. ಬೇಡಿಕೊಂಡ ಉಶಾಪವೆಂದರೆ ಯಾಚಿತವಾಗಿದೆ. ಪುಂಜಿಕಸ್ಥಲೆ ಎಂಬ ಅಪ್ಸರೆಗೆ ಶಾಪ ದೊರೆತಿತ್ತು; ಶಾಪದ ಕಾಲದಲ್ಲಿ ತನ್ನ ಇಚ್ಛೆಯ ಅನುಸಾರ