ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಮಾನವರೂಪ ಅಥವಾ ಕೋತಿಯ ರೂಪವನ್ನು ತಾಳಬಹುದೆಂಬ ಸ್ವಾತಂತ್ರ್ಯ ದೊರೆತಿತ್ತು. ಆರು ತಿಂಗಳು ಸತತ ನಿದ್ರೆಮಾಡಿ ಎಚ್ಚರಗೊಂಡ ಒಂದು ದಿನ ಪೂರ್ತಿ ಮನಸಾರೆ ಸಂಹಾರವನ್ನು ನಡೆಯಿಸುವ ಸ್ವಾತಂತ್ರ್ಯ ಕುಂಭಕರ್ಣನಿಗೆ ದೊರಕಿತ್ತು. ರಾವಣನು ಕುಂಭಕರ್ಣನ ಪರವಾಗಿ ಇದನ್ನು ಬೇಡಿಕೊಂಡಿದ್ದನು. ಪಿತೃಕುಲಕ್ಕೆ ವಿರಾಜಿಸುವಂಥ ಪುತ್ರನೊಬ್ಬನು (ವಿಭೀಷಣನು) ಹುಟ್ಟಬೇಕೆಂಬ ಕೇಕಸಿಯ ಬೇಡಿಕೆಯಂತೆ ಅವಳಿಗೆ ಪುತ್ರಪ್ರಾಪ್ತಿಯಾಯಿತು. ಗೊತ್ತಿರದೇ ಗೌತಮನಿಗೆ ಅನಿಷ್ಟವಾದ ಭೋಜನವನ್ನು ಕೊಟ್ಟಿದ್ದಕ್ಕಾಗಿ “ರಣಹದ್ದು ಆಗು!” ಎಂಬ ಶಾಪವು ಬ್ರಹ್ಮದತ್ತ ರಾಜನಿಗೆ ದೊರೆಯಿತು. ಈ ನಂತರ 'ರಾಮನ ದರ್ಶನದಿಂದ ಆಗುವ ಬಿಡುಗಡೆ' ಇವೆಲ್ಲವೂ ಯಾಚಿತ ಉಃಶಾಪಗಳಾಗಿವೆ.

ಅಹಲ್ಯೆಯ ಶಾಪದ ಕಥೆ ರಾಮಾಯಣದಲ್ಲಿ ಎರಡು ಬಾರಿ ಬಂದಿದೆ. ಅವೆರಡರಲ್ಲಿ ಭಿನ್ನತೆಯು ಕಂಡುಬರುತ್ತದೆ.೧೮ ಬಾಲಕಾಂಡದಲ್ಲಿಯ ಉಃಶಾಪವು ಅಯಾಚಿತವಿದ್ದು, ಉತ್ತರಕಾಂಡದಲ್ಲಿ ಯಾಚಿತವಿದೆ. ಈ ಉಃಶಾಪಗಳು ಸರಿ ಸಮಾನವಾಗಿದ್ದರೂ ಅವುಗಳ ಸ್ವರೂಪದಲ್ಲಿ ವ್ಯತ್ಯಾಸವಿದೆ. ಬಾಲಕಾಂಡದಲ್ಲಿದ್ದ ಕಥೆಯಂತೆ 'ಗೌತಮನ ವೇಷದಲ್ಲಿ ಆಶ್ರಮಕ್ಕೆ ಬಂದವನು ಇಂದ್ರನೆಂದು ಅಹಲ್ಯೆಗೆ ಮೊದಲೇ ಗೊತ್ತಿತ್ತು; ಅಷ್ಟೇ ಅಲ್ಲದೆ, ದೇವತೆಗಳ ರಾಜನಾದ ಇಂದ್ರನು ತನ್ನಲ್ಲಿ ಮೋಹಿತನಾಗಿದ್ದಾನೆ ಎಂಬ ಸಂಗತಿಯು ಅವಳಿಗೆ ಹೆಮ್ಮೆಯ ವಿಷಯವಾಗಿತ್ತು' ಎಂದಿದೆ. ನಿಜವಾಗಿ ಅಹಲ್ಯೆಯಿಂದ ಮಹಾ ಅಪರಾಧ ನಡೆದಿತ್ತು. ಅದಕ್ಕೆ ತಕ್ಕ ಶಾಸ್ತಿ ಆಗಲೇಬೇಕಿತ್ತು. "ಸಾವಿರಾರು ವರ್ಷಗಳವರೆಗೆ ಯಾರ ಕಣ್ಣಿಗೂ ಬೀಳದೆ ನೀನು ಕೇವಲ ವಾಯುಭಕ್ಷಣೆ ಮಾಡಿ ಬದುಕಿರು!” ಎಂಬ ಶಾಪವನ್ನು ಗೌತಮನು ಅಹಲ್ಯೆಗೆ ಕೊಟ್ಟನು. “ಶ್ರೀರಾಮನ ದರ್ಶನದಿಂದ ಶುದ್ಧಳಾಗಿ ಪೂರ್ವರೂಪವನ್ನು ತಾಳುವೆ!” ಎಂಬ ಉಃಶಾಪವನ್ನು ಗೌತಮನು ಇಂಥ ಮಹಾಪರಾಧಕ್ಕೆ ಅಯಾಚಿತವಾಗಿ ಕೊಟ್ಟದ್ದು ಸೋಜಿಗದ ಸಂಗತಿಯಾಗಿದೆ. ಉತ್ತರಕಾಂಡದಲ್ಲಿ, ಗೌತಮನ ವೇಷವನ್ನು ಧರಿಸಿ ಆಶ್ರಮಕ್ಕೆ ಬಂದವನು ಇಂದ್ರನೆಂದು ಅಹಲ್ಯೆಗೆ ಗೊತ್ತಿರಲಿಲ್ಲವೆಂದು ಬರೆದಿದ್ದಾರೆ. ನಿಜಸ್ಥಿತಿಯು ತಿಳಿಯದ ವಿಷಯವಾಗಿದೆ. ವಾಲ್ಮೀಕಿಯನ್ನು ಆಧರಿಸಿ ಹೇಳುವುದಾದರೆ ಅಹಲ್ಯೆಯು ಉಃಶಾಪವನ್ನು ಗೌತಮನಿಂದ ಬೇಡಿಕೊಂಡಿದ್ದಾಳೆ. ಸ್ವೇಚ್ಛೆಯಿಂದ ಇಂದ್ರನೊಡನೆ ರತಿಕ್ರೀಡೆಯಲ್ಲಿ

——————
೧೮. ಬಾಲಕಾಂಡ, ೪೮, ೪೯; ಉತ್ತರಕಾಂಡ, ೩೦.