ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೪೫

ಶಪಥ ಮಾಡುವುದು ಮತ್ತು ಶಪಥ ಹಾಕುವುದು ಈ ರೀತಿಯ ಎರಡು ವಿಧಗಳಿವೆ. ಮೇಲಿನ ಉದಾಹರಣೆಯಲ್ಲಿ ಪ್ರಿಯವಾದ ವ್ಯಕ್ತಿ, ವಸ್ತು ಇವುಗಳನ್ನು ಉಲ್ಲೇಖಿಸಿ, ಆಣೆಯಿಟ್ಟು ಶಪಥಗಳನ್ನು ಮಾಡಿದ್ದಾರೆ. ಸ್ವಂತ ಪ್ರಾಣದ, ಇಲ್ಲವೇ ಪ್ರಿಯ ವ್ಯಕ್ತಿಯ ಪ್ರಾಣದ ಶಪಥವನ್ನು ಮಾಡಲಾಗುತ್ತದೆ; ಇಲ್ಲವೇ ಆಣೆ ಹಾಕಲಾಗುತ್ತದೆ. ಶರೀರದ ಅವಯವಗಳನ್ನು ನಿರ್ದೇಶಿಸಿ ಆಣೆಹಾಕುತ್ತಾರೆ. ಇದರಲ್ಲಿ ಪಾದಗಳ ನಿರ್ದೆಶವು ಮಹತ್ವದ್ದೆನಿಸುತ್ತದೆ. ಪಾದದ ಆಣೆಯಿಡುವಾಗ ಹಿರಿಯ-ಕಿರಿಯ ಸಂಬಂಧಕ್ಕೆ ಮಹತ್ವವಿರುತ್ತದೆ. ವಾಸ್ತವದಲ್ಲಿ ಶಪಥವನ್ನು ಯಾರು ಬೇಕಾದರೂ ಮಾಡಬಹುದು; ಯಾರ ಮೇಲಾದರೂ ಆಣೆ ಇಡಬಹುದು. ಕಿರಿಯರು ಪಾದದ ಆಣೆಯನ್ನು ಹಿರಿಯರಿಗೆ ಹಾಕುವಂತಿಲ್ಲ. ಈ ಹಿರಿತನವು ವಯಸ್ಸಿನಿಂದ, ಜ್ಞಾನದಿಂದ ಮತ್ತು ಅಧಿಕಾರದಿಂದ ಇರಬೇಕಾಗುತ್ತದೆ. ಸೀತೆಯನ್ನು ವಾಲ್ಮಿಕಿಮುನಿಗಳ ಆಶ್ರಮದತ್ತ ಬಿಟ್ಟುಬರಲು ಲಕ್ಷ್ಮಣನಿಗೆ ಆಜ್ಞಾಪಿಸಿದಾಗ ಆತನಿಂದ ವಿರೋಧ ಪ್ರಕಟವಾಗ ಬಹುದೆಂಬ ಭೀತಿಯು ರಾಮನಿಗೆ ಇತ್ತು. ರಾಮನು ಲಕ್ಷ್ಮಣನಿಗೆ ಮಾತನಾಡುವ ಅವಕಾಶ ಕೊಡದೇ-


            ಶಾಷಿತಾ ಹಿ ಮಯಾ ಯೂಯಂ ಪಾದಾಭ್ಯಾಂ ಜೀವಿತೇನ ಚ |

“ನನ್ನ ಪಾದಗಳ ಮತ್ತು ನನ್ನ ಪ್ರಾಣದ ಆಣೆ ನಿನಗೆ ಇದೆ” ಎಂದಿದ್ದಾನೆ.೨೭ಆಕ್ರಮಕ ಖರ-ದೂಷಣರನ್ನು ದಂಡಿಸುವ ಸಾಮರ್ಥ್ಯ ಲಕ್ಷ್ಮಣನಲ್ಲಿತ್ತು. ರಾಮನು ಅವರ ಸಂಹಾರವನ್ನು ತಾನೇ ಮಾಡಬೇಕೆಂದಿದ್ದನು. ಈ ಪ್ರಸಂಗದಲ್ಲಿಯೂ ಲಕ್ಷ್ಮಣನಿಗೆ ಮಾತನಾಡುವ ಸಂಧಿಯನ್ನು ಕೊಡದೇ ರಾಮನು-


            ಪ್ರತಿಕೂಲಿತುಮಿಚ್ಛಾಮಿ ನ ಹಿ ವಾಕ್ಯಮಿದಂ ತ್ವಯಾ ||
            ಶಾಪಿತೋ ಮಮ ಪಾದಾಭ್ಯಾಸಂ ಗಮ್ಯತಾಂ ವತ್ಸ ಮಾ ಚಿರಮ್ |೧೩||

“ನನ್ನ ಹೇಳಿಕೆಗೆ ವಿರುದ್ಧವಾಗಿ ನೀನು ವರ್ತಿಸಬೇಕೆಂದು ನಾನು ಬಯಸುವುದಿಲ್ಲ. ನಿನಗೆ ನನ್ನ ಪಾದದ ಆಣೆಯಿದೆ!”೨೮

ಶಪಥ ಮತ್ತು ಪ್ರತಿಜ್ಞೆ ಇವು ಬೇರೆ ಬೇರೆ ಅರ್ಥದ ಶಬ್ದಗಳು. ಶಪಥ ಎಂಬ ಶಬ್ದದಲ್ಲಿ, ಪ್ರತಿಜ್ಞೆಯು ಪ್ರಕಟವಾಗಿ ಇಲ್ಲವೇ ಸೂಕ್ತವಾಗಿ ಇದ್ದೇ ಇರುತ್ತದೆ;

——————

೨೭. ಉತ್ತರಕಾಂಡ, ೪೫/೨೧
೨೮. ಅರಣ್ಯಕಾಂಡ, ೨೪.