ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೫೧

“ನಾನು ಪತಿಯ ಶುಶ್ರೂಷೆಯನ್ನು ಮಾಡಿದ್ದರೆ, ತಪಸ್ಸನ್ನು ಆಚರಿಸಿದ್ದರೆ, ನನ್ನಲ್ಲಿ ಪಾತಿವ್ರತ್ಯವಿದ್ದರೆ, ಹೇ ಅಗ್ನಿಯೇ! ನೀನು ಹನುಮಂತನ ಪಾಲಿಗೆ ಶೀತಲನಾಗು?”೩೬

ಸೀತೆಯು ಕೈಕೊಂಡ 'ಅಗ್ನಿಪರೀಕ್ಷೆ' ಇದು ವಾಲ್ಮೀಕಿಯ ರಾಮಾಯಣದ್ಲಿಯ ತುಲನೆಗೆ ಅಸಾಧ್ಯವಾದ ಒಂದು ಪ್ರಸಂಗವಾಗಿದೆ. ಇದರಲ್ಲಿಯ ಚಮತ್ಕಾರದ ಅಂಶವನ್ನು ಬದಿಗಿಟ್ಟರೂ ನನ್ನ ಚಾರಿತ್ರ್ಯದ ಬಗ್ಗೆ ಸೀತೆಗೆ ಅದೆಷ್ಟು ವಿಶ್ವಾಸವಿತ್ತು! ಅದರ ಬಲದಿಂದ ಯಾವುದೇ ಬಗೆಯ ಸಂಕಟದಿಂದ ತಾನು ಪಾರಾಗುವೆ! ಎಂಬ ಮನೋಬಲವು ಅವಳದಾಗಿತ್ತು. ಅಗ್ನಿಯನ್ನು ಪ್ರಾರ್ಥಿಸಿಕೊಂಡಾಗ ಅವಳಿಂದ ಅಗ್ನಿಯ ಪರೀಕ್ಷೆಯೂ ನಡೆದಂತಿದೆ. ನನ್ನ ಶುದ್ಧತೆಯನ್ನು ಸಿದ್ಧಪಡಿಸುವ ಭಾರವನ್ನು ಅವಳು ಅಗ್ನಿದೇವತೆಯ ಮೇಲೆ ಹಾಕಿದ್ದಾಳೆ.


           ಯಥಾ ಮೇ ಹೃದಯಂ ನಿತ್ಯಂ ನಾಪಸರ್ಪತಿ ರಾಘವಾತ್ |
           ತಥಾ ಲೋಕಸ್ಯ ಸಾಕ್ಷೀ ಮಾಂ ಸರ್ವತಃ ಪಾತು ಪಾವಕಃ ||೨೫||
           ಯಥಾ ಮಾಂ ಶುದ್ಧಚಾರಿತ್ರಾಂ ದುಷ್ಟಾಂ ಜಾನಾತಿ ರಾಘವಃ |
           ತಥಾ ಲೋಕಸ್ಯ ಸಾಕ್ಷೀ ಮಾಂ ಸರ್ವತಃ ಪಾತು ಪಾವಕಃ ||೨೬॥
           ಕರ್ಮಣಾ ಮನಸಾ ವಾಚಾ ಯಥಾ ನಾತಿಚರಾಮ್ಯಹಮ್ |
           ರಾಘವಂ ಸರ್ವಧರ್ಮಜ್ಞಂ ತಥಾ ಮಾಂ ಪಾತು ಪಾವಕಃ||೨೭||

“ನನ್ನ ಮನಸ್ಸು ರಾಮನಿಂದ ಅತ್ತಿತ್ತ ಕದಲದೇ ಇದ್ದಲ್ಲಿ, ಲೋಕಸಾಕ್ಷಿಯಾದ ಅಗ್ನಿಯು ನನ್ನನ್ನು ಕಾಪಾಡಲಿ! ರಾಮನು ಭಾವಿಸಿರುವಂತೆ ನಾನು ಪತಿತಳಾಗಿರದೇ ಶುದ್ಧ ಚಾರಿತ್ರ್ಯವುಳ್ಳವಳಾಗಿದ್ದರೆ ಸರ್ವಸಾಕ್ಷಿಯಾದ ಅಗ್ನಿಯು ನನ್ನನ್ನು ರಕ್ಷಿಸಲಿ! ಕಾಯೇನ ವಚಸಾ ಮನಸಾ ನಾನು ಧರ್ಮಜ್ಞನಾದ ರಾಘವನನ್ನು ಅತಿಕ್ರಮಿಸಿರದಿದ್ದಲ್ಲಿ, ಲೋಕಸಾಕ್ಷಿಯಾದ ಹೇ ಅಗ್ನಿಯೇ! ನೀನು ನನ್ನನ್ನು ಕಾಪಾಡು!”೩೭

ವರಗಳು

ಯಾವ ಮಾತುಗಳಿಂದ ಮನಸ್ಸಿನ ಪ್ರಸನ್ನತೆ, ಸಂತೋಷಗಳು ವ್ಯಕ್ತವಾಗುತ್ತವೆಯೋ ಆ ಉಚ್ಚರಣೆಗೆ ವರ, ಆಶೀರ್ವಾದ, ಸದಿಚ್ಛೆ ಎಂದೆನ್ನುತ್ತಾರೆ. ಈ

——————
೩೬. ಸುಂದರಕಾಂಡ, ೫೩.
೩೭. ಯುದ್ಧಕಾಂಡ, ೧೧೬.