ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೨

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಮೂರೂ ಸಂಗತಿಗಳು ಒಂದೇ ಪ್ರಕಾರದವಿರುವುದಿಲ್ಲ. ಪ್ರತಿಯೊಂದರ ಅರ್ಥ ವ್ಯಾಪ್ತಿ, ಸ್ವರೂಪ ಹಾಗೂ ಪರಿಣಾಮಗಳು ಭಿನ್ನಭಿನ್ನವಾಗಿವೆ. ಶಾಪ ಕೊಡುವ ವ್ಯಕ್ತಿಗೆ ಅವಶ್ಯವಿದ್ದ ಹಾಗೆ ವರ ಕೊಡುವ ವ್ಯಕ್ತಿಯು ತಕ್ಕ ಯೋಗ್ಯತೆಯನ್ನು ಹೊಂದಿರಬೇಕು. ದೇವತೆಗಳಲ್ಲಿ ಈ ಅರ್ಹತೆಯು ಜನ್ಮಜಾತವಾಗಿದ್ದರೂ ತಪಸ್ಸಿನಿಂದ ಅದರ ಮಟ್ಟವನ್ನು ಹೆಚ್ಚಿಸಬಹುದು; ಅಧಿಕಾರಕ್ಷೇತ್ರವನ್ನು ವಿಸ್ತಾರಗೊಳಿಸಬಹುದು. ಈ ಸೃಷ್ಟಿಯನ್ನು ನಿರ್ಮಿಸಿದ ಬ್ರಹ್ಮ ದೇವನು ಹಾಗೂ ಸೃಷ್ಟಿಸಂಹಾರಕನಾದ ಶಂಕರನೂ ತಪಶ್ಚರ್ಯವನ್ನು ಮಾಡಿದ್ದಾರೆ.

'ವರ' ಈ ಶಬ್ದವು 'ವೃ' ಈ ಧಾತುವಿನಿಂದ ಬಂದಿದೆ. ಈ ಶಬ್ದಕ್ಕೆ ಅನೇಕ ಅರ್ಥಗಳಿವೆ: ಕೃಪೆ, ಪ್ರಸಾದ, ಇಷ್ಟಾರ್ಥ, ಆಯ್ಕೆ ಅನುಗ್ರಹ, ಸದಿಚ್ಛೆ ಮೊದಲಾದವು.


           ವ್ರಿಯತೇ ಇತಿ ವರಃ | ಮನಾಕ್ ಅಭೀಷ್ಟೇ ವರಃ |
           ತಪೋಭಿಃ ಇಷ್ಯತೇ ಯಸ್ತು ದೇವೇಭ್ಯಃ ಸಃ ವರೋ ಮತಃ |

ಇಷ್ಟಾರ್ಥಪೂರ್ತಿಗಾಗಿ ಯಾರೊಬ್ಬರನ್ನು ಒಲಿಸಿಕೊಳ್ಳುವುದು ಮತ್ತು ಸಂತೋಷಗೊಂಡು ಇನ್ನೊಬ್ಬರಿಗೆ ಶುಭ ಕೋರುವುದೆಂದರೆ 'ವರದಾನ'. ಈ ರೀತಿ ಪ್ರಸನ್ನತೆಯು ತಪಸ್ಸಿನಿಂದ, ಪ್ರಾರ್ಥನೆಯಿಂದ, ಸ್ತುತಿಯಿಂದ, ಪೂಜೆಯಿಂದ, ಯಜ್ಞಕರ್ಮದಿಂದ, ಸದ್ಗುಣಗಳಿಂದ, ಸತ್ಕಾರ್ಯ ಆದಿ ಅನೇಕ ವಿಧಗಳಿಂದ ಲಭಿಸಬಹುದು. ಈ ಪ್ರಸನ್ನತೆಯಿಂದ ದೊರಕುವ ವರಗಳು 'ಅಯಾಜಿತ'ವಿರುತ್ತವೆ. ತಪಸ್ಸು, ಯಜ್ಞಾದಿಗಳಿಂದ ಪ್ರಸನ್ನರಾದವರಿಂದ ಸಿಗುವ ವರಗಳು ಯಾಚಿತವೆನಿಸುತ್ತವೆ. 'ಅಯಾಚಿತ' ವರಗಳು ಯಾಚಿತ ಮರಗಳಿಗಿಂತ ಶ್ರೇಷ್ಠವಿರುತ್ತವೆ. ವರವು ಯಾವುದೇ ಬಗೆಯದಿದ್ದರೂ ವರಕೊಡುವವನ ಇಚ್ಛೆಯೇ ಪ್ರಧಾನವಾಗಿದ್ದು, ಮಹತ್ವವುಳ್ಳದ್ದೂ ನಿರ್ಣಾಯಕವೂ ಇರುತ್ತದೆ. ಕೇವಲ ಬೇಡಿಕೊಳ್ಳುವ ಸ್ವಾತಂತ್ರ್ಯ ಯಾಚಕನಿಗಿರುತ್ತದೆ; ಆದರೆ ಅದೇ ರೀತಿ ವರದಾನ ಮಾಡಬೇಕೆಂಬ ಬಂಧನವು ವರದಾತನ ಮೇಲಿರುವುದಿಲ್ಲ. ಯಾಚತನ ಬೇಡಿಕೆಯು ಸಂಪೂರ್ಣವಾಗಿ ಅಥವಾ ಅಲ್ಪಾಂಶವಾಗಿ ಈಡೇರಬಹುದು; ಇಲ್ಲವೇ ಈಡೇರಲಿಕ್ಕಿಲ್ಲ. ರಾವಣ ಮತ್ತು ಮೇಘನಾದ ಇವರಿಬ್ಬರೂ ಸಂಪೂರ್ಣ ಅಮರತ್ವವನ್ನು ಪ್ರಾರ್ಥಿಸಿದ್ದರು; ಬ್ರಹ್ಮನು ಅವರ ಇಷ್ಟಾರ್ಥವನ್ನು ಸಂಪೂರ್ಣವಾಗಿ ಪೂರೈಸಲಿಲ್ಲ. ಸಂದೇಹವಾಗಿ ಸ್ವರ್ಗವನ್ನು ಸೇರಬೇಕೆಂಬ ಇಚ್ಛೆಯಿಂದ ನಡೆಸಿದ ತಪಶ್ಚರ್ಯೆಯನ್ನು ಶಂಬೂಕನು ಮಾಡಿದರೂ ಆತನ ಇಷ್ಟಾರ್ಥವು ಪೂರ್ಣವತೂ