ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೪

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ದಶರಥನು ರಾಮನನ್ನುದ್ದೇಶಿಸಿ ಆಡಿದ ಮಾತು ವರವಾಗಿರದಿದ್ದರೂ ವರದಂತಿವೆ.೩೮ ಪತಿವ್ರತೆಯ ಮಾತಿನ ಘನತೆ ಹೆಚ್ಚಾಗಿರುವುದು ಅವಳ ಪಾತಿವ್ರತ್ಯದ ಕಾರಣದಿಂದ ಎಂದು ಬಗೆಯು ತ್ತಾರೆ. ವಾಲ್ಮೀಕಿರಾಮಾಯಣದಲ್ಲಿ ಪತಿವ್ರತೆಯರು ಕೊಟ್ಟ ಐದು ವರಗಳಿವೆ. ಹೇಮಾ ಎಂಬ ಅಪ್ಸರೆಗೆ ಅದರಂತೆ ಕೈಕೇಯಿಗೆ ವರಕೊಡುವ ಅಧಿಕಾರ ಎಲ್ಲಿಂದ ಬಂದಿತು ಎಂಬುದು ಸ್ಪಷ್ಟವಾಗುವುದಿಲ್ಲ. ಹೇಮಾ ಎಂಬವಳು ಸ್ವಯಂಪ್ರಭೆಗೆ ಹಾಗೂ ಕೈಕೇಯಿಯು ಮಂಥರೆಗೆ ವರಗಳನ್ನು ನೀಡಿದ ಉಲ್ಲೇಖವಿದೆ. ಮಿಕ್ಕ ಮೂರು ವರಗಳಲ್ಲಿ ಪಾರ್ವತಿಯು ಒಂದೂವರೆ ವರವನ್ನು, ಅನಸೂಯೆಯು ಒಂದು ವರವನ್ನು ಕೊಟ್ಟಿದ್ದಾರೆ. ಅವರು ಕೊಟ್ಟ ಈ ವರಗಳು ಕೇವಲ ಅವರ ಪಾತಿವ್ರತ್ಯದ ಪ್ರಭಾವದಿಂದಲ್ಲ:

ನಿಯಃಮೈರ್ವಿವಿಧೈರಾಪ್ತಂ ತಪೋ ಹಿ ಮಹದಸ್ತಿ ಮೇ ‖೧೪‖

ಎಂದು ಅನಸೂಯೆಯು ಸ್ಪಷ‍್ಟೀಕರಿಸಿದ್ದಾಳೆ.೩೯ ಪಾರ್ವತಿಯು ತನ್ನ ತಪೋಬಲದಿಂದ ಮತ್ತು ದೇವತೆಯಾಗಿ ಹುಟ್ಟಿದ್ದರಿಂದ ವರಗಳನ್ನು ದಯಪಾಲಿಸಿದ್ದಾಳೆ. ಪಾರ್ವತಿಯು ಒಂದು ವರವನ್ನು ರಾಕ್ಷಸಿಯೊಬ್ಬಳಿಗೆ, ಇನ್ನು ಅರ್ಧ ವರವನ್ನು 'ಇಲ' ಎಂಬ ರಾಜನಿಗೆ ಕೊಟ್ಟಿದ್ದಾಳೆ.೪೦

ವರದಾತನ ಸ್ಥಾನವು ವರವನ್ನು ಪಡೆಯುವವನಿಗಿಂತ ಹಿರಿಮೆಯದು; ಈ ಹಿರಿಮೆಯು ಶ್ರೇಷ್ಠತೆ, ವಯಸ್ಸು, ಜ್ಞಾನ, ಸ್ಥಾನ, ಅಧಿಕಾರಗಳನ್ನೊಳಗೊಂಡಿರುತ್ತದೆ.

ವರಗಳ ಕಾರಣಗಳು

ತಪಶ್ಚರ್ಯೆಯು ವರಗಳನ್ನು ಪಡೆಯುವ ಮುಖ್ಯಸಾಧನವಾಗಿದೆ. ಇಷ್ಟ ದೇವತೆಯನ್ನು ಒಲಿಸಿಕೊಂಡರೆ ತಮ್ಮ ಇಷ್ಟಾರ್ಥವು ಸಫಲವಾಗುತ್ತದೆ ಎಂಬ ನಂಬಿಕೆಯು ಭಾರತೀಯರದಾಗಿದೆ. ಫಲಪ್ರಾಪ್ತಿಗಾಗಿ ಸಾಕಷ್ಟು ಸಂಕಷ್ಟಗಳನ್ನು, ಶಾರೀರಿಕ ಕ್ಲೇಶಗಳನ್ನು, ಬಹುದೀರ್ಘಕಾಲದವರೆಗೆ ಸಹಿಸಿ ಶಕ್ತಿಯನ್ನು ತಪಸ್ವಿಗಳು ಹೊಂದಿರುತ್ತಿದ್ದರು. ತಪದ ಸಾಧನೆಯು ಘೋರವಾದದ್ದು, ಕಷ್ಟಕರವಾದದ್ದು


೩೮. ಅಯೋಧ್ಯಾಕಾಂಡ, ೬೪.
೩೯. ಅಯೋಧ್ಯಾಕಾಂಡ, ೧೧೮.
೪೦. ಉತ್ತರಕಾಂಡ, ೪ ಮತ್ತು ೮೭.