ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೬

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ರಾಮನು ಸೀತೆಗೆ 'ವರವನ್ನು ಬೇಡಿಕೊ!' ಎಂದನು. ಸೀತೆಗಿತ್ತ ಈ ವರವು ಅಯಾಚಿತವಾಗಿದೆ. ಸೀತೆಯ ಪಾಲಿಗೆ ಈ ವರವು ಶಾಪದಂತಾಯಿತು. ಮುಂದಾಗಲಿರುವ ಕಾಲದಲ್ಲಿ ಫಲಪ್ರದವಾಗಬೇಕೆಂದು ಕೊಟ್ಟ ವರಗಳು ಅನೇಕವಾಗಿವೆ. ಈ ರೀತಿಯಲ್ಲಿ ಸುಪಾತಿಗೆ ದೊರೆತ ವರವೊಂದನ್ನುಳಿದು ಮಿಕ್ಕ ಬಹುಶಃ ಎಲ್ಲ ವರಗಳು ಹನುಮಂತನಿಗೆ ದೊರಕಿವೆ. ಮೇಲಿನ ಎಲ್ಲ ವರಗಳ ಉದ್ದೇಶವು ಮುಂದೆ ರಾಮನು ಅಂಗೀಕರಿಸಿದ ಕಾರ್ಯದಲ್ಲಿ ಉಪಯುಕ್ತವಾಗಬೇಕೆಂದಿತ್ತು.೪೨ ಲಂಕೆಯ ಪ್ರಯಾಣದಲ್ಲಿ ಹನುಮಂತನಿಗೆ ಸಹಾಯವಾಗಲೆಂದು ಮೈನಾಕ ಪರ್ವತಕ್ಕೆ ವರ ದೊರೆತಿತ್ತು; ಆದರೆ ಹನುಮಂತನು ಅದರ ಉಪಯೋಗವನ್ನು ಮಾಡಿಕೊಳ್ಳಲಿಲ್ಲವೆಂಬುದು ಬೇರೆ ಸಂಗತಿಯಾಗಿದೆ. ನಿಷಾದನಿಗೆ ಶಾಪವನ್ನು ಕೊಟ್ಟ ಕಾರಣದಿಂದ ವಾಲ್ಮೀಕಿಗೆ ನಂತರ ಪಶ್ಚಾತ್ತಾಪವಾಯಿತು. ಆಗ ಬ್ರಹ್ಮದೇವನು ವಾಲ್ಮೀಕಿಯನ್ನು ಸಂತೈಸಲೆಂದು, ವಾಲ್ಮೀಕಿಯಿಂದ ರಾಮಾಯಣವು ಬರೆಯಲ್ಪಡಬೇಕೆಂಬ, ಇಬ್ಬಗೆಯ ವಿಚಾರದಿಂದ ಆತನಿಗೆ ವರವನ್ನಿತ್ತನು. ಶಾಪದಿಂದ ಔದಾಸ ರಾಜನ ಬಿಡುಗಡೆಯಾಗಬೇಕೆಂದು ವಸಿಷ್ಠನು ಆತನಿಗೆ ವರವನ್ನು ಕೊಟ್ಟನು.
ಸದ್ವರ್ತನೆ ಸುವಾರ್ತಾಕಥನ, ಉತ್ಕೃಷ್ಟವೆನಿಸುವ ಸೇವೆ, ಸತ್ಪುರುಷದರ್ಶನ, ವಿಘ್ನ ನಿವಾರಣೆ, ಅನುಗ್ರಹ, ಪ್ರಾರ್ಥನೆ, ಉತ್ಕಟಪ್ರೀತಿ, ದುಷ್ಟರ ಸಂಹಾರ, ಸಜ್ಜನರ ರಕ್ಷಣೆ ಇವುಗಳಿಂದ ಸಂತೋಷಗೊಂಡ ದೇವರು ಋಷಿಗಳಿಗೆ ಅನೇಕ ವರಗಳನ್ನು ಕೊಟ್ಟಿದ್ದಾರೆ. ರಾಮನಿಗೆ, ಆತನ ಸದ್ವರ್ತನೆಯ ಕಾರಣದಿಂದಲೇ ವರಗಳು ಪ್ರಾಪ್ತವಾಗಿವೆ. ದುಷ್ಟರನ್ನು ದಂಡಿಸಿ ಮಾನವಕುಲವನ್ನು ಕಾಪಾಡಿದ್ದಕ್ಕಾಗಿ, ರಾವಣನ ವಧೆಯನಂತರ ರಾಮನನ್ನು ದೇವತೆಗಳು ತುಂಬಾ ಹೊಗಳಿದ್ದಾರೆ. ಲವ-ಕುಶರು ಹಾಡಿದ ರಾಮಾಯಣವನ್ನು ಕೇಳಿ ಸಂತೋಷಗೊಂಡ ಮುನಿಗಳು ಅವರಿಗೆ ವರಗಳನ್ನು ನೀಡಿದ್ದಾರೆ. ಶ್ರೀರಾಮನಂಥ ಸತ್ಪುರುಷನ ದರ್ಶನವಾಗಬೇಕೆಂದು, ಶರಭಂಗನು, ಬ್ರಹ್ಮಲೋಕಕ್ಕೆ ಕರೆದೊಯ್ಯಲು ಬಂದ ಇಂದ್ರನಿಂದ, ತುಸು ಸಮಯ ಕೊಡಬೇಕೆಂದು ಪ್ರಾರ್ಥಿಸಿದನು. ಸೀತೆಯ ಸದಾಚರಣೆಯಿಂದ ಅನಸೂಯೆಯು ಸಂತುಷ್ಟಳಾದಳು. ರಾಮನ ಅಲೌಕಿಕತೆಯಿಂದ ಭರದ್ವಾಜನು ಸಂತುಷ್ಟನಾದನು. ರಾಮಸೀತೆಯರಿಗೆ ವರಗಳು ದೊರೆತವು. ರಾಮನಿಗೆ ಯುವರಾಜ್ಯಾಬಿಷೇಕವಾಗಲಿದೆ ಎಂಬ ಸುವಾರ್ತೆಯನ್ನು
——————
೪೨. ಹನುಮಂತನಿಗೆ ದೊರೆತ ವರ-ಶಾಪ ನೋಡಿ.