ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೫೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ರಾಮಾಯಣದಲ್ಲಿಯ ಒಟ್ಟು ವರಗಳ ಸಂಖ್ಯೆಯಲ್ಲಿ ಒಂದುನಾಲ್ಕಾಂಶ ವರಗಳನ್ನು ರಾಕ್ಷಸರು ಪಡೆದಿದ್ದಾರೆ. ಅಮರರಾಗುವ ಇಚ್ಛೆಯಂತೆ ಅತಿದೀರ್ಘ ಆಯುಸ್ಸನ್ನು ಹೊಂದಬೆಕೆಂಬ ಆಸೆಯು ಇರುತ್ತಿತ್ತು; ಅದಕ್ಕಾಗಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದ್ದವು. ಇವುಗಳ ಲಾಭವು ಸ್ವಂತಕ್ಕಾಗಬೇಕೆಂಬ ಸ್ವಾರ್ಥಭಾವನೆಯು ಗೋಚರವಾಗುತ್ತದೆ. ಶ್ರೀರಾಮನು ಮಾತ್ರ ಇವುಗಳಿಗೆಲ್ಲ ಅಪವಾದವಾಗಿದ್ದಾನೆ. ಆತನು ಯಾರಿಂದಲೂ ವರಗಳನ್ನು ಬೇಡಲಿಲ್ಲ; ಕೊಡಮಾಡಿದ ವರಗಳನ್ನು ಸ್ವೀಕರಿಸಲಿಲ್ಲ; ಅಯಾಚಿತವಾಗಿ ಬಂದ ವರಗಳನ್ನು ಬೇರೆಯವರ ಒಳಿತಿಗಾಗಿ ಸ್ವೀಕರಿಸಿದನು. ಬ್ರಾಹ್ಮಣನ ಮೃತ ಹೊಂದಿದ ಪುತ್ರನು ಜೀವಿತವಾಗಬೇಕೆಂದು, ಯುದ್ಧದಲ್ಲಿ ಮಡಿದ ವಾನರವೀರರು ಪುನಃ ಸಜೀವರಾಗಬೇಕೆಂದು, ಅಯೋಧ್ಯಾ ಮಾರ್ಗದ ಮರಗಿಡಗಳು ಸದಾಕಾಲವೂ ಫಲ-ಪುಷ್ಪಗಳಿಂದ ರಾರಾಜಿಸುತ್ತಿರಬೇಕೆಂದು, ಅವುಗಳ ಲಾಭವು ಜನರಿಗಾಗಬೇಕೆಂದು; ನದಿಗಳು ತುಂಬಿ ಹರಿಯುತ್ತಿರಬೇಕು!- ಎಂಬ ವರಗಳನ್ನು ರಾಮನು ಸ್ವೀಕರಿಸಿದನು. “ಸದಾ ಕಾಲವೂ ನನ್ನ ಬುದ್ದಿಯು ಧರ್ಮಪರವಶವಾಗಿರಲಿ!” ಎಂದು ವಿಭೀಷಣನು ಇಚ್ಛಿಸಿದ ವರವು ಎದ್ದುಕಾಣುತ್ತದೆ. ಬ್ರಹ್ಮದೇವ, ಅನ್ಯದೇವತೆಯರು ಹಾಗೂ ಲೋಕಪಾಲ ಇವರ ವರಗಳಿಂದ ಹನುಮಂತನ ಸಾಮರ್ಥ್ಯವು ತುಂಬಾ ವರ್ಧಿಸಿತು. ಮೈಂದ ಮತ್ತು ದ್ವಿವಿದರೆಂಬ ವಾನರರಿಗೆ ಮಿತಿಯುಳ್ಳ, ವರಗಳು ಬ್ರಹ್ಮದೇವನಿಂದ ದೊರೆತಿದ್ದರೂ ಅವರ ತೊಂದರೆಗಳ ನಿವಾರಣೆಯಾಯಿತು. ಇಂದ್ರನ ವರದಿಂದ ನವಿಲಿಗೆ ಗರಿಗಳ ತುಂಬ ಕಣ್ಣುಗಳು ಮೂಡಿದವು; ಸರ್ಪಗಳಿಂದ ನವಿಲಿಗೆ ಅಭಯವುಂಟಾಯಿತು.
ರಾಮಾಯಣದಲ್ಲಿ ಹತ್ತು ವರಗಳಿಂದ ಸಂತಾನಪ್ರಾಪ್ತಿಯಾಗಿದೆ. ಜಯಾ, ಸುಪ್ರಭಾ, ಕೇಶಿನಿ, ಸುಮತಿ ಮತ್ತು ಕಾಲಿಂದಿ ಇವರಿಗೆ ವರಗಳಿಂದ ಮಕ್ಕಳು ಹುಟ್ಟಿದ್ದಾರೆ. ಕೆಲವರಿಗೆ ಒಂದು ಮಗುವಿನಿಂದ ಅರವತ್ತು ಸಹಸ್ರ ಮಕ್ಕಳು ಆದ ಉಲ್ಲೇಖವೂ ಇದೆ. ವಿವಾಹವಾಗದೇ ಸೋಮದೆಗೆ ಮಗುವಾಯಿತು. ಗಂಡು ಮಗು ಬಯಸಿದ ಸಂಕೇತುವಿಗೆ ಸಾವಿರ ಆನೆಗಳ ಬಲವುಳ್ಳ ತಾಟಕಾ ಕನ್ಯೆಯಾಗಿ ಜನಿಸಿದಳು. ಕೇಕಸೀ ರಾಕ್ಷಸಿಯು ವಿಶ್ರವಸುವಿನಂಥ ಮಕ್ಕಳಾಗಬೇಕೆಂದು ಆತನ ಬಳಿ ಬಂದಳು. ಆಕೆಯು ಬಂದ ಗಳಿಗೆ ಕ್ರೂರಗಳಿಗೆ ಯಾದ್ದರಿಂದ ಅವಳಿಗೆ ಜನಿಸಿದ ಮಕ್ಕಳು ಕ್ರೂರಕರ್ಮಿಗಳಾದರು. ಅವಳು ಪ್ರಾರ್ಥಿಸಿದ್ದರಿಂದ, ಕೇವಲ ಒಬ್ಬ ಪುತ್ರನು-ವಿಭೀಷಣ ಮಾತ್ರ ವಿಶ್ರವನಂತಾದನು. ದಿತಿಗೆ ದೊರೆತ ವರವು ಕಟ್ಟಳೆಯದಿತ್ತು. ಕಟ್ಟಳೆಯನ್ನು ಪಾಲಿಸಿದ ಕಾರಣ