ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೦

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಎರಡೂ ವರಗಳ ಸ್ವರೂಪವು ಇನ್ನಿತರ ವರಗಳಿಗಿಂತ ತೀರ ಭಿನ್ನವಾಗಿದೆ. ಒಂದು ವರದ ಮೇರೆಗೆ ರಾಕ್ಷಸಿಯರಿಗೆ “ಸಮಾಗಮ ನಡೆದ ತಕ್ಷಣ ಗರ್ಭದಾರಣೆ, ಗರ್ಭದಾರಣೆಯಾದ ಮರುಕ್ಷಣವೇ ಹೆರಿಗೆ, ಹೆರಿಗೆಯಾದ ಕ್ಷಣವೇ ಜನಿಸಿದ ಮಗುವು ತಾಯಿಯಷ್ಟೇ ವಯಸ್ಸಿನದಾಗುವದು” ಎಂದಿತ್ತು.<-ಉಮೆಯು ಕೊಟ್ಟ ಇನ್ನೊಂದು ಅರ್ಧವರದಂತೆ “ಇಲ ಎಂಬ ರಾಜನಿಗೆ ಒಂದು ತಿಂಗಳ ಮಟ್ಟಿಗೆ ಸ್ತ್ರೀತ್ವವಾಗಿರಬೇಕು; ಮರುತಿಂಗಳು ಆತನು ಪುರುಷತ್ವವನ್ನು ಹೊಂದಿರಬೇಕು. ಪುರುಷನಿರುವಾಗ ಸ್ತ್ರೀತ್ವದ ಸ್ಮರಣೆ ಇರಲಾರದು; ಸ್ತ್ರೀಯಾಗಿರುವಾಗ ಪುರುಷತ್ವದ ನೆನಪು ಇರಲಾರದು!” ಎಂಬ ನಗೆಪಾಟಲಿನ ವರದ ಆಶಯವಿತ್ತು.೪೩
ಭರತನಿಗೆ ಯುವರಾಜಪದವನ್ನು ದೊರಕಿಸಿಕೊಡುವ ಮಹತ್ತ್ವಾಕಾಂಕ್ಷೆಯು< ಕೈಕೇಯಿಯದಾಗಿತ್ತು. ಇದು ದಶರಥನು ಆಕೆಗೆ ವರಗಳನ್ನು ಕೊಡುವ ವಚನ ಕೊಟ್ಟ ಕಾರಣದಿಂದಾಗಿ ವರ್ಧಿಸಿತ್ತು. ರಾಕ್ಷಸರ ಅಳಿಗಾಲವು ಸಮೀಪಿಸಿದ ಮುನ್ಸೂಚನೆಯು ಲಂಕಾದೇವಿಗೆ ಅವಳು ಪಡೆದ ವರದಿಂದ ದೊರಕಿತ್ತು. ಒಂದೇ ವ್ಯಕ್ತಿಯಿಂದ ಶಾಪ ಮತ್ತು ವರವನ್ನು ಪಡೆಯುವ ಭಾಗ್ಯ ಕುಂಭಕರ್ಣನದಾಗಿತ್ತು. ಶಾಪದ ಪರಿಣಾಮ ಮತ್ತು ವರದ ಪರಿಣಾಮ ಒಂದೇ ಆಗಿತ್ತು. ಬ್ರಹ್ಮನು ಕುಂಭ ಕರ್ಣನಿಗೆ ದೀರ್ಘನಿದ್ರೆಯ ಶಾಪವನ್ನು ಕೊಟ್ಟನು; ಜೊತೆಗೆ
ವರವನ್ನೂ ಕೊಟ್ಟನು. ಇದೊಂದು ಅಪವಾದವೆನಿಸುವ ಉದಾಹರಣೆ ರಾಮಾಯಣದಲ್ಲಿದೆ.೪೪ ನಲನೆಂಬ ವಾನರನಿಗೆ, ಬೇಕೆನಿಸಿದ ವಸ್ತುವನ್ನು ಸೃಷ್ಟಿಸುವ ಸಾಮರ್ಥ್ಯ ಲಭಿಸಿತ್ತು; ಸ್ವಸಂರಕ್ಷಣೆಯ ಕ್ಷಮತೆ ಸ್ವಯಂಪ್ರಭೆಯಲ್ಲಿತ್ತು; ಸೂರ್ಯನಿಂದ ಹನುಮಂತನಿಗೆ, ಸೂರ್ಯತೇಜದ ನೂರನೆಯ ಒಂದು ಭಾಗವು ಪ್ರಾಪ್ತವಾಗಿತ್ತು; ಜೊತೆಗೆ ವಾಕ್ಪಟುತ್ವ, ಅಪ್ರತಿಮ ಶಾಸ್ತ್ರಜ್ಞಾನ ಇವೆಲ್ಲ ವರಗಳು ಫಲರೂಪಕವಾಗಿ ದೊರೆತಿದ್ದವು.
ವಾಲ್ಮೀಕಿಯ ರಾಮಾಯಣದಲ್ಲಿ ಹಲವು ವರಗಳ ಪರಿಣಾಮಗಳು ಸ್ಪಷ್ಟವಾಗಿಲ್ಲ.

——————
೪೩. ಉತ್ತರಕಾಂಡ ೪ ಮತ್ತು ೮೭
೪೪. ಶಾಪ ಕ್ರ. ೩೭ ಮತ್ತು ವರ ಕ್ರ. ೫೬.