ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೮

ವಾಲ್ಮೀಕಿ ರಾಮಾಯಣ : ಶಾಪ ಮತ್ತು ವರಗಳು

ಒಂದು ಲಕ್ಷ ಹಸುಗಳು, ವಸ್ತ್ರಗಳು, ಬ್ರಾಹ್ಮಣರಿಗೆ ಅನ್ನಸಂತರ್ಪಣೆ, ಅಯೋಧ್ಯೆಗೆ ಮರಳಿದ ನಂತರ ಒಂದು ಸಾವಿರ ಕುಂಭ ಮದ್ಯ ಮತ್ತು ಮಾಂಸಯುಕ್ತ ಅನ್ನ ಇವುಗಳನ್ನು ಬಲಿಯಾಗಿಡುವ ಪ್ರತಿಜ್ಞೆಯನ್ನು ಮಾಡಿದ್ದಳು. ಯಮುನೆಯ ಬಗ್ಗೆ ಕೇವಲ ಒಂದು ಸಾವಿರ ಹಸುಗಳು ಮತ್ತು ಒಂದುನೂರು ಕುಂಭಗಳ ಮದ್ಯವನ್ನು ಅರ್ಪಿಸುವ ಉಲ್ಲೇಖವಿದೆ. ಹಾಗೆ ಯೋಚಿಸಿದಲ್ಲಿ ಗಂಗೆಯನ್ನು ದಾಟುವಾಗ ಗುಹನ ಸಹಾಯದಿಂದ ಪ್ರಯಾಣಕ್ಕೆ ಅಡಚಣೆ ಇರಲಿಲ್ಲ; ಆದರೆ ಯಮುನಾ ನದಿಯನ್ನು ದಾಟುವುದರಲ್ಲಿ ನಿಜವಾದ ತೊಂದರೆಯಿತ್ತು. ರಾಮ-ಲಕ್ಷ್ಮಣರು ಒಣಗಿದ ಮರದ ತುಂಡುಗಳನ್ನು ಕಟ್ಟಿ ಒಂದು ಪೆಟ್ಟಿಗೆಯನ್ನು ರಚಿಸಿದರು. ಅಂತಹದರ ಸಹಾಯದಿಂದ ನದಿಯನ್ನು ದಾಟುವುದು ದುಸ್ತರವಿತ್ತು. ಯಮುನೆಯನ್ನು ಅಧಿಕ ಸಂತೋಷಗೊಳಿಸುವ ಪ್ರಸಂಗವಿತ್ತು. ಗಂಗೆಗೆ ಹರಸಿಕೊಂಡ ಕಾಣಿಕೆಗಿಂತ ಹೆಚ್ಚಾಗಿ ಯಮುನೆಗೆ ಅರ್ಪಿಸುವ ಸಂಕಲ್ಪ ಮಾಡಬೇಕಿತ್ತಲ್ಲವೇ? ಎಂದೆನ್ನಿಸುತ್ತದೆ.

ಆಕಾಶವಾಣಿ, ಪುಷ್ಪವೃಷ್ಟಿ

ಆಕಾಶವಾಣಿ, ಪುಷ್ಪವೃಷ್ಟಿ ಈ ಪ್ರಕಾರಗಳು ಅಯಾಚಿತ ವರಕ್ಕೆ ತೀರ ನಿಕಟವಾದಂಥವು. ಈ ಎರಡೂ ಸಂಗತಿಗಳಲ್ಲಿ ಸದ್ಭಾವನೆ, ಸದಿಚ್ಛೆ ಇರುತ್ತವೆ. ಆಕಾಶವಾಣಿಯಲ್ಲಿ ವಾಣಿಗೆ ಮಹತ್ತ್ವವಿದೆ; ಶಬ್ದೋಚ್ಚಾರದಿಂದ ಅಭಿವ್ಯಕ್ತಿ ಸಾಧ್ಯ. ಪುಷ್ಪವೃಷ್ಟಿಯಲ್ಲಿ ಇದೇ ಮನೋಭಾವವು ಹೂಗಳಿಂದ ವ್ಯಕ್ತಮಾಡಲ್ಪಡುತ್ತದೆ. ಸ್ವರ್ಗದಲ್ಲಿದ್ದ ದೇವತಾದಿಗಳಿಂದ ಆಕಾಶವಾನಿ ಮತ್ತು ಪುಷ್ಪವೃಷ್ಟಿಯಾಗುವುದುಂಟು. ವರ ಮತ್ತು ಆಕಾಶವಾಣಿ ಇವೆರಡರಲ್ಲಿ ಒಂದು ಸೂಕ್ಷ್ಮವಾದ ಭೇದವಿದೆ. ವರ ಕೊಡುವುದರಲ್ಲಿ ವರದಾತನು ಕಣ್ಣುಮುಂದೆ ಇರುತ್ತಾನೆ. ಆಕಾಶವಾಣಿಯ ವ್ಯಕ್ತಿಯು ಅದೃಶ್ಯನಾಗಿರುತ್ತಾನೆ. ಯಾರೊಬ್ಬನ ಸದ್ವರ್ತನೆಯಿಂದ, ಸಮಾಜಕಲ್ಯಾಣ ಕಾರ್ಯವನ್ನು ಮಾಡಿದ್ದರಿಂದ ಪ್ರಸನ್ನನಾದ ವ್ಯಕ್ತಿಯಿಂದ ಆಕಾಶವಾಣಿಯಾಗುತ್ತದೆ. ಪ್ರತ್ಯಕ್ಷ ಭೇಟಿಮಾಡಿ ಹೇಳಲು ಅಸಾಧ್ಯವಾದುದನ್ನು ಆಕಾಶವಾಣಿಯ ಮೂಲಕ ಹೇಳಲಾಗುತ್ತದೆ. ಆಕಾಶವಾಣಿಯಿಂದ ಕೇವಲ ವರ ಅಥವಾ ಶಾಪಗಳು ಕೊಡಲ್ಪಡುತ್ತವೆ ಅಂತಲ್ಲ; ಮುಂಬರುವ ಘಟನೆಗಳ ಪೂರ್ವಸೂಚನೆಯನ್ನು ಕೊಡಲಾಗುತ್ತದೆ. ಕಥಾಸೂತ್ರಗಳನ್ನು ಸೊಗಸಾಗಿ ಜೋಡಿಸಲು ಅನುವಾಗುವ (Literary device) ಒಂದು ಉತ್ತಮ ಪ್ರಕಾರವೆಂದರೆ ಆಕಾಶವಾಣಿ ಎಂದೆನ್ನಬಹುದು. ವಾಲ್ಮೀಕಿರಾಮಾಯಣದಲ್ಲಿ ಆಕಾಶವಾಣಿಯ ಉದಾಹರಣೆಗಳು ಬಹಳ