ಪುಟ:ವಾಲ್ಮೀಕಿ ರಾಮಾಯಣ - ಶಾಪ ಮತ್ತು ವರ.pdf/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಾಪಾದಪಿ ವರಾದಪಿ!

೭೫

ನಂತರ ಹೊಳೆದಿದೆ ಎಂತಲ್ಲ; ಕೈಕೇಯಿಯ ವಿವಾಹದ ಸಮಯದಲ್ಲಿಯೇ ಆಕೆಗೆ ಹುಟ್ಟಿದ ಮಗನಿಗೆ ರಾಜ್ಯ ದೊರೆಯಬೇಕು! ಎಂಬ ವಚನವನ್ನು ದಶರಥನಿಂದ ತೆಗೆದುಕೊಳ್ಳಲಾಗಿದೆ. ದಶರಥನು ಸಂಗ್ರಾಮಕ್ಕೆ ಹೋದಾಗ ಕೈಕೇಯಿಯು ಆತನ ಜೊತೆ ಇದ್ದಳು. ದಶರಥನನ್ನು ಪ್ರಾಣಸಂಕಟದಿಂದ ಉಳಿಸಿದಳು. ಆಗ ದಶರಥನು ಕೈಕೇಯಿಗೆ ಎರಡು ವರಗಳನ್ನು ಕೊಟ್ಟನು. ಪ್ರಾಣವನ್ನುಳಿಸಿದ ಕೈಕೇಯಿಗೆ ಈ ರೀತಿ ವರಗಳನ್ನು ಕೊಡುವುದು ಅಸ್ವಾಭಾವಿಕವಾಗಿರಲಿಲ್ಲ. ಅವಳು ಅವುಗಳನ್ನು ತಕ್ಷಣ ಬೇಡಿಕೊಳ್ಳದೆಯೇ ಸಮಯ ಒದಗಿದಾಗ ಬೇಡುವೆನೆಂದಳು. ಅವುಗಳನ್ನು ಈ ರೀತಿ ಬಳಸಬಹುದೆಂಬ ಕಲ್ಪನೆ ಕೈಕೇಯಿಗೂ ಆಗ ಇರಲಿಕ್ಕಿಲ್ಲ. ರಾಮನಿಗೆ ಯುವರಾಜ್ಯಾಭಿಷೇಕವಾಗುವುದೆಂದು ಕೈಕೇಯಿಗೆ ಎಂದಿಲ್ಲದ ಆನಂದ, ಸಡಗರ ವಾಗಿತ್ತು. ರಾಮನಿಗೆ ಯುವರಾಜ್ಯಾಭಿಷೇಕ ನಡೆಯುವುದರಲ್ಲಿ ಯಾವ ಅಡಚಣೆಯೂ ಇರಲಿಲ್ಲ. ಇಂಥ ಸಮಯದಲ್ಲಿ ಕೈಕೇಯಿಯ ಮತ್ಸರಭಾವವನ್ನು ಜಾಗೃತಗೊಳಿಸಿ, ದಶರಥನ ವರಗಳ ಸ್ಮರಣೆ ಮಾಡಿಕೊಟ್ಟು, ಕಥಾವಸ್ತುವಿಗೆ ಅನಪೇಕ್ಷಿತವಾದ, ಸ್ವಾಭಾವಿಕವೆನ್ನಿಸುವ ತಿರುವನ್ನು ಕೊಡುವ ಉದ್ದೇಶ, ಈ ವರಗಳ ಯೋಜನೆಯಲ್ಲಿದೆ. ಮಂಥರೆಯು ಒಂದು ಸಾಧನವಾದಳು. ಕೈಕೇಯಿಯ ಮನಸ್ಸಿನಲ್ಲಿ ಪರಿವರ್ತನೆಯನ್ನುಂಟುಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ; ಏಕೆಂದರೆ ರಾಮನ ಬಗ್ಗೆ ಅವಳ ಪ್ರೀತಿಯು ಭರತನ ಮೇಲಿದ್ದಷ್ಟೇ ಇತ್ತು. ಹೀಗಿದ್ದರೂ ಮಂಥರೆಯು ಈ ಮಹತ್ತ್ವದ ಕೆಲಸವನ್ನು ಸಾಧಿಸಿದಳು. ಎಲ್ಲಿಯೂ ಅಡ್ಡಿ ಬರದಂತೆ ವರಗಳ ಯೋಜನೆಯಿತ್ತು. ಮನುಷ್ಯರ ಸ್ವಭಾವದ ಸರಿಯಾದ ಜ್ಞಾನ ಕೈಕೇಯಿಗೆ ಇತ್ತು. ವರಗಳ ಉಪಯೋಗ ಸರಿಯಾಗಿ ಆಗುವುದೆಂದು ಅವಳು ಅರಿತಿದ್ದಳು. ದಶರಥನಿಂದ ವರಗಳನ್ನು ಬೇಡಿಕೊಳ್ಳುವಾಗ ಅವಳು ಬುದ್ದಿವಂತಿಕೆಯಿಂದ ಆತನನ್ನು ವಚನ ಬದ್ಧ ಮಾಡುತ್ತಾಳೆ; ದೇವರನ್ನು ಸಾಕ್ಷಿಯಾಗಿ ಇಡುತ್ತಾಲೆ; ರಾಮನ ಮಾತಿನಲ್ಲಿ ಅವಳಿಗೆ ಭರವಸೆ ಇತ್ತು. ದಶರಥನು ಒಂದು ವೇಳೆ ಕೊಟ್ಟ ಮಾತನ್ನು ಹಿಂತೆಗೆದುಕೊಳ್ಳಬಹುದು; ಆದರೆ, ರಾಮನು ಕೊಟ್ಟ ವಚನವನ್ನು ಮೀರುವವನಲ್ಲವೆಂಬುದು ಆಕೆಗೆ ಗೊತ್ತಿತ್ತು. ಕೈಕೇಯಿಯ ಮುಖ್ಯ ಆಧಾರವೆಂದರೆ ರಾಮ ಮತ್ತು ಆತನ ವ್ಯಕ್ತಿವಿಶೇಷ. ಪಾಲಿಸಲೋಸುಗ ರಾಮನು ಬೆಂಕಿಯಲ್ಲಿ ಸಹ ಧುಮುಕಬಹುದು; ಹಾಲಾಹಲವನ್ನು ಸಹ ಕುಡಿಯಬಹುದು; ಸಾಗರದಲ್ಲಿ ಮುಳುಗಬಹುದು; ಆದರೆ ಆಜ್ಞೆಯನ್ನು ಉಲ್ಲಂಘಿಸಲಾರನೆಂದು ಕೈಕೇಯಿಗೆ ಪೂರ್ಣ ವಿಶ್ವಾಸವಿತ್ತು. ಈ ವಿಶ್ವಾಸದಿಂದಲೇ ಕೈಕೇಯಿಯ ವರಗಳು ಯಶಸ್ವಿಯಾದವು. ರಾಮನಿಗಿದ್ದ ರಾಜ್ಯದ ಸ್ವಯಂಸಿದ್ಧ ಮತ್ತು ಸ್ವಯಂಭೂ