ಪುಟ:ವಿಕ್ರಮೋರ್ವಶಿಯ ನಾಟಕಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾಂಕಂ, h೫ vrat naman ಇದೆ ಈ ಉಪ್ಪರಿಗೆಯ ನಡುವೆ ಚಿತ್ರದಲ್ಲಿ ಬರೆದ ಕತಿಯಂತೆ ಅಲ್ಲಾಡದೆ ಸುಮ್ಮನೆ ನಿಂತಿರುವನು, ಒಳ್ಳೇದು ಈತನ ಸವಿಾಪಕ್ಕೆ ಹೋಗುವೆನು. (ಎಂದು ಸಮೀಪಕ್ಕೆ ಬಂದು) ಅಲ್ಯನೆ ನಮಸ್ಕರಿಸುವೆನು (ಎ೦ದು ನಮಸ್ಕರಿಸುವಳು). ವಿದೂ ನಿನಗೆ ಮಂಗಳವಾಗಲಿ. (ತನ್ನ ತಾನು) ಇದೇನು ! ಈ ದುಷ್ಟಳಾದ ಚೀಟಿಯನ್ನು ನೋಡಿದ ಕೂಡಲೆ ನನ್ನ ರಾಯನ ರಹಸ್ಯವು ನನ್ನ ಮನಸ್ಸನ್ನು ಭೇದಿಸಿಕೊಂಡು ತಾನಾಗಿ ಹೊರಕ್ಕೆ ಬರುತ್ತಿದೆ, (ಪ್ರಕಾಶವಾಗಿ) ಎಲೆ ನಿಪುಣಿಕೆ ಸಂಗೀತವ್ಯಾಸಂಗವನ್ನು ಬಿಟ್ಟು ಎಲ್ಲಿಗೆ ಹೊರಟೆ ? ಚೇಟ-ಮಹಾದೇವಿಯ ಆಜ್ಞೆಯಿಂರ ನಿನ್ನನ್ನೇ ನೋಡುವುದಕ್ಕೆ ಎಂದೆನು. ವಿದೂ-ಮಹಾದೇವಿ ಏನಾಜ್ಞಾಪಿಸಿರುವಳು ? ಚೇಟಿ--ಯಾವಾಗಲೂ ಆಕಯಲ್ಲಿ ಅನುರಕ್ತನಾಗಿದ್ದ ಮಹಾರಾಜನು ಈಗ ಆಕೆಯನ್ನು ಲಕ್ಷ್ಯ ಮಾಡದೆ ಇರುವನಂತೆ. ವಿದೂ --ಎಲೆ ನಿಪುಣಿಕೆ ಮಹಾದೇವಿಯ ವಿಷಯದಲ್ಲಿ ನಮ್ಮ ಮಹಾ ರಾಜನು ಆಚರಿಸಿದ ಪ್ರತಿಕೂಲವೇನು ? ಚೀಟ-ನಿಮ್ಮ ಮಹಾರಾಜನು ಯಾವಸ್ತಿಯಲ್ಲಿ ಅನುರಕ್ತನಾಗಿ ರುವನೋ ಆಕೆಯ ಹೆಸರು ಹಿಡಿದು ನನ್ನ ಮಹಾದೇವಿಯನ್ನು ಕರೆದನು. ವಿದೂ.-(ತನ್ನಲ್ಲಿ ತಾನು) ಆತನೇ ತನ್ನ ರಹಸ್ಯವನ್ನು ಬಹಿರಂಗಪಡಿ ನಿದಮೇಲೆ ನನ್ನ ನಾಲಗೆಯನ್ನು ನಾನೇಕೆ ತಡೆದುಕೊಂಡಿರಲಿ. (ಪ್ರಕಾಶ) ಊರಶಿಯೆಂದು ಕರೆದನೋ ? ಆ ಅಪ್ಪಶಸ್ತಿಯನ್ನು ನೋಡಿದಾರಭ್ಯ ಮಹಾದೇವಿಯನ್ನು ಹಾಗಿರಲಿ; ಹುಚ್ಚು ಹಿಡಿದವನಂತೆ ನನ್ನನ್ನೂ ಬಹಳ ವಾಗಿ ಪೀಡಿಸುತ್ತಿರುವನು, ಚೀಟ- (ತನ್ನಲ್ಲಿತಾನು) ರಾಯನ ಗುಟ್ಟನ್ನು ಒಳ್ಳೆ ಉಪಾಯದಿಂದ ಭೇದಿಸಿ ತಿಳದೆನು. (ಪ್ರಕಾಶ) ಮಹಾದೇವಿಗೆ ಏನರಿಕಮಾಡಲಿ?