ಪುಟ:ವಿಕ್ರಮೋರ್ವಶಿಯ ನಾಟಕಂ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಾಂಕಂ, פח ವಿದೂ- ಇನ್ನು ನಮ್ಮ ಕಾಶೀರಾಜಪುತ್ರಿಗೆ ಕಷ್ಟ ಬಂತು ! ರಾಜರಿ--ಎಲೈ ನಾಣವಕನೆ, ನನ್ನ ರಹಸ್ಯವನ್ನು ನಿನ್ನಲ್ಲಿಯೇ ಇಟ್ಟಿದ್ದೀಯಾ? ವಿದೂ-(ತನ್ನಲ್ಲಿ ತಾನು) ಅಯ್ಯೋ ! ತೂತಿನವುಗಳಾದ ಆ ಚೇಟಿ ಯು ನನ್ನನ್ನು ವಂಚಿಸಿದಳು, ಇಲ್ಲದಿದ್ದರೆ ನಮ್ಮ ಮಹಾರಾಜನು ನನ್ನನ್ನು ಹೀಗೆ ಹೇಳುತ್ತಿರಲಿಲ್ಲ. ರಾಜ೦-ಇದೇನು ಯಾತಕ್ಕೋಸ್ಕರ ಸುಮ್ಮನಿದ್ದೀಯ ? ವಿದೂ..-ಅಯಾ ಮಹಾರಾಜನೆ, ನಿನ್ನ ಮಾತಿಗೂಕೂಡ ಉತ್ತರ ವನ್ನು ಕೆಡದಂತೆ ನನ್ನ ನಾಲಗೆಯನ್ನು ಭದ್ರಪಡಿಸಿಕೊಂಡಿರುವೆನು. ರಾಜಂ-ಹಾಗೆ ನೀನು ನಾಲಗೆಯನ್ನು ತಡೆದುಕೊಂಡಿರುವುದು ಯುಕ್ತ. ಈಗ ನನ್ನ ಮನಸ್ಸನ್ನು ಯಾವತೆರದಿಂದ ವಿನೋದಪಡಿಸಲಿ ? ಹೇಳು, ವಿದೂ- ಹಾಗಾದರ ಅಡಿಗೆಮನೆಗೆ ಹೋಗೋಣ ನಡೆ. ರಾಜಂ-ಅಲ್ಲೇನು ? ವಿದೂ-ಅಲ್ಯನ ? ಬೇಕಾದ ಭಕ್ಷ್ಯ ಭೋಜ್ಯಗಳನ್ನು ತುಂಬಿರುವ ಪಾತ್ರೆಗಳನ್ನು ನೋಡುತ್ತ ಮನಸ್ಸನ್ನು ವಿನೋದಪಡಿಸಬಹುದು, ರಾಜ- (ನಕ್ಕು) ಅಲ್ಲಿ ನಿನಗೆ ಬೇಕಾದ ವಸ್ತುಗಳು ದೊರೆಯುವುದ ರಿಂದ ನಿನ್ನ ಮನಸ್ಸು ವಿನೋದಪಡಬಹುದು, ರುರ್ಲಭವಾದ ವಸ್ತುವನ್ನು ಅಪೇಕ್ಷಿಸುತ್ತಿರುವ ನನ್ನ ಮನಸ್ಸು ಹೇಗೆ ವಿನೋದಪಟ್ಟಿತು ? ವಿದೂ-ಪೂಜ್ಯಳಾದ ಆ ಊರ್ವಶಿಯ ದೃಷ್ಟಿಗೆ ನೀನು ಬಿದ್ದೆ ಇದ್ದೀಯ? ರಾಜೀಂ-ಅದರಿಂದೇನು ಪ್ರಯೋಜನ ? ವಿದೂ-ಅದೇಕ ಹಾಗೆ ಹೇಳುತ್ತೀಯೆ ? ಅವಳು ನಿನಗೆ ದುರ್ಲಭ ಇಂದು ನಾನೆಣಿಸುವುದಿಲ್ಲ. ರಾಜಂ-ನೀನು ಹೇಳಿದ್ದು ಪಕ್ಷಪಾತದ ಮಾತಾಗಿದೆ.