ಪುಟ:ವಿಕ್ರಮೋರ್ವಶಿಯ ನಾಟಕಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಯಕಂ. ೨೭ New wvvvvvvvvvvvvvvvvvvvvvvvvvvvvv vouwen ಊರ,ಈಗ ಏನು ಹೇಳುವನೋ ! ನೋಡಬೇಕು, ಚಿತ್ರ-ಎಲೆ ಸಖಿ ವಿರಹದಿಂದ ತಾವರೇ ದಂಟಿನಂತೆ ಬೆಳ್ಳಗಿರುವ ಈತನ ಅಂಗಗಳನ್ನು ನೋಡಿದಮೇಲೆ ಮುಂದೆ ಹೇಳತಕ್ಕದ್ದು ತಿಳಿದೇ ಇದೆ. - ವಿದೂ-ಎಲೈ ಮಹಾರಾಜನ ಹಸಿದಿರತಕ್ಕೆ ನನಗೆ ಸ್ವಗ್ರವಾಚನೆ ಸಿಕ್ಕಿದಂತೆ ದೈವಯೋಗದಿಂದ ನಿನ್ನ ಮನಸ್ಸಿನ ಸಮಾಧಾನಕ್ಕೆ ಕಾರಣವಾದ ಈ ಭುಜಪತ್ರವು ನಿನಗೆ ಸಿಕ್ಕಿತು. ರಾಜ೦-ಇದು ಸಿಕ್ಕಿದ್ದರಿಂದ ನನ್ನ ಮನಸ್ಸಿಗೆ ಸಮಾಧಾನವೊಂದೇ ಅಲ್ಲ. ಕಂ || ಇನಿಯಳ ಲಲಿತಾರ್ಥನಿಬಂ || ಧನಾ ಲೇಖಂಸವಾನುರಾಗಕ್ಕೆಸಿದ | ರ್ಶನವಿದನೆ ನಿಟ್ಟ ಪೆನ್ನಾ | ನನಕಾಮದಿರಾಕ್ಷಿ ಮುತ್ತನಿಟ್ಟಂತೆಣಿಸೆ lin೪|| ಊ.-ಈಗಲೀಗ ನಮ್ಮಿಬ್ಬರ ಅನುರಾಗವೂ ಸಮಾನವಾದದ್ದೆಂದು ತಿಳಿದುಬಂತು. ರಾಜ-ಮಿತ್ರನ ನನ್ನ ಕೈಬೆವರಿಂದ ಆಕೆಯ ಸಹಸ್ತಾಕ್ಷರಗಳು ಅಳಿಸಿಹೋದಾವು. ಈ ಪತ್ರಿಕೆ ನಿನ್ನ ಕೈಯಲ್ಲಿರಲಿ. ವಿದೂ-(ಪತ್ರಿಕೆಯನ್ನು ತೆಗೆದು ಕೊಂಡು) ಮಹಾರಾಜನ ಆ ಮಾನ್ಯ Yಾದ ಊರಶಿಯು ನಿನ್ನ ಮನೋರಥವೆಂಬ ವೃಕ್ಷಕ್ಕೆ ಪುಷ್ಪವನ್ನು ಕಾಣಿಸಿ ಫಲವನ್ನು ತೋರಿಸುವುದಕ್ಕೆ ಯಾತಕ್ಕೋಸ್ಕರ ಸುವಕಾಶ ಮಾಡುವಳು ? ಉರ-ಎಲ್‌ ಚಿತ್ರಲೇಖೆ ಈತನನ್ನು ಸೇರುವುದಕ್ಕೆ ಕಾತರಸಡು ತಿರುವ ನನ್ನ ಮನಸ್ಸನ್ನು ಸಮಾಧಾನಪಡಿಸುವಷ್ಟರಲ್ಲಿ ನೀನು ಈತನ ಸವಿಾಪಕ್ಕೆ ಹೋಗಿ ನನ್ನ ವಿಷಯದಲ್ಲಿ ಉಚಿತವಾದ ಮಾತುಗಳನ್ನಾಡು, ಚಿತ-ಹಾಗೇ ಆಗಲಿ, (ಎ೦ದು ರಾಯನ ಸಮೀಪಕ್ಕೆ ಬಂದು) ಎಲೈ ಮಹಾರಾಜನ ಜಯಶೀಲನಾಗು. ರಾಜರಿ-(ಆದರಾತಿಶಯದಿಂದ) ಎಲೆ ಮಂಗಳಾಂಗಿ ನಿನಗೆ ಸುಖಾಗವು ನವೆ ?