ಪುಟ:ವಿಕ್ರಮೋರ್ವಶಿಯ ನಾಟಕಂ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ದ್ವಿತೀಲ್ ೨೦ಕಂ, Bf come ರಾಜ- (ನಿಟ್ಟು ಸುರುಬಿಟ್ಟು) ಮಿತ್ರನೆ ಈಗ ನನ್ನ ಕಣ್ಣುಗಳು ವ್ಯರ್ಥ ವಾದವು. ವಿದೂ.- (ಭುಜಪತ್ರವನ್ನು ತೋರಿಸುವುದಕ್ಕೆ ಯತ್ನಿಸಿ) ಮಹಾರಾಜನೆ ಭುಜ (ಎಂದು ಅರ್ಧೆ ಯಲ್ಲಿ ತನ್ನಲ್ಲಿ ತಾನು) ಅಯ್ಯೋ ! ನಾನು ಆ ಊರ ಶಿಯ ರೂಪಾತಿಶಯವನ್ನು ಆಶ್ಚರ್ಯಪಟ್ಟು ನೋಡುತ್ತಿದ್ದಾಗ ಅ ಭುಜ ಪತ್ರವೆ ನನ್ನ ಕೈಯಿಂದ ತಪ್ಪಿಸಿಕೊಂಡು ಹೋಯಿತು. ನನಗೆ ಗೊತ್ತೇ ಆಗಲಿಲ್ಲ. ಇನ್ನೇನುಗತಿ ! ರಾಜಂ-ವಿನಯಾ! ಏನೂ ಮಾತನಾಡುವುದಕ್ಕೆ ಉಪಕ್ರಮಿಸಿದ ಹಾಗಿತ್ತು, ವಿದೂ.-- ನಾನು ಮಾತನಾಡುವುದಕ್ಕು ಸಕ ವಿನಿದ್ದೆ ? ನೀನೇತಕ್ಕೆ ಸುಮ್ಮನೆ ನಿನ್ನ ಅಂಗಗಳನ್ನು ನಿಂದಿಸಿಕೊಳ್ಳುವೆ ನಿನ್ನ ದುಃಖವನ್ನು ಬಿಡು. ಆ ಊರತಿ ನಿನ್ನಲ್ಲಿ ದೃಢವಾದ ಅನುರಾಗವುಳ್ಳವಳಾದ್ದರಿಂದ ಇಲ್ಲಿಂದ ಹೊರಟುಹೋದರೂ ಈ ಅನುಬಂಧವನ್ನು ಬಿಡತಕ್ಕವಳಲ್ಲವೆಂದು ಹೇಳು ವುದಕ್ಕೆ ಉಪಕ್ರಮಿಸಿದೆ. ರಾಜc~ ನನ್ನಭಿಪ್ರಾಯವೂ ಇದೇ, ಕೇಳು.ಕಂ | ತನುತನ್ನದಲ್ಲ ದುದರಿ೦ || ವನಿತಾಮಣಿಪೋಗುತ್ತಿತಣಿಂನಿಜಮನಮುಂ || ಸನಕಂಪನದಿಂAಚಿತ | ಮೆನಿನಿದನಿಟ್ಟು ಸುರಿನನ್ನೊಳಟ್ಟಂತೆಣಿಸೆಂ tor || ವಿದೂ, (ತನ್ನಲ್ಲಿ ತಾನು) ಇನ್ನು ಈ ಮಹರಾಯ ಭುಜಸತ್ರದ ಹೆಸರ ನಲ್ಲಿ ಎತ್ತುತ್ತಾನೆ ಎಂದು ನನಗೆ ದಿಗಿಲಾಗಿದೆ. ರಾಹಿಂ-ಮಿತ್ರನೆ ಈಗ ನನ್ನ ದೃಷ್ಟಿಯನ್ನು ಎಲ್ಲಿ ವಿನೋದಪಡಿಸಲಿ? (ಸ್ಮರಿಸಿಕೊಂಡು) ಅಹ ! ಮರೆತಿದ್ದೆ ; ಆ ಭುಜಪತ್ರವನ್ನಾದರೂ ತೋರಿಸು.