ಪುಟ:ವಿಕ್ರಮೋರ್ವಶಿಯ ನಾಟಕಂ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ತೃತೀಯಖpಕಂ, ೪೫ ಚಿತ್ರ-ಧ್ಯಾನದಿಂದ ನೋಡಿ ನಕ್ಕು ಆತ್ಮಗತವಾಗಿ) ಒಳ್ಳೇದು ಈಗ ಸ್ಪಲ್ಪ ಚಮತ್ಕಾರವಾಗಿ ಮಾತನಾಡುತ್ತೇನೆ. (ಪ್ರಕಾಶ) ಎಲೆ ಊರಶಿ ನಾನು ನೋಡಲಿಕ್ಕಾಗಿ ಆತನು ಉಪಭೋಗಕ್ಕೆ ಯೋಗ್ಯವಾದ ಸ್ಥಾನದಲ್ಲಿ ತನ್ನ ಮನೋರಥದಿಂದ ಕಲ್ಪಿತಳಾದ ಪ್ರಿಯಳ ಸಮಾಗಮಸುಖವನ್ನು ಅನುಭವಿಸುತ್ತಿರುವನು. ಊಧ್ವ-ಏನೆಂದೆ ? ಹಾಗಿದ್ದರೆ ಆಕೆಯು ಧನ್ಯಳಲ್ಲವೆ ? - ಚಿತ್ರ-ಎಲೆ ಮುಗ್ಗೆ ನೀನಲ್ಲದೆ ಆತನ ಸಂಕಲ್ಪಕ್ಕೆ ಗೋಚರಳಾದ ವಳು ಇನ್ನಾರು ? ಊ -ಅಷ್ಟು ಮಟ್ಟಿಗೆ ತಿಳಿಯಲಾರದ ಈ ನನ್ನ ಮನಸ್ಸು ಸಂದೇಹ ಪಡುತ್ತಿರುವುದು. ಚಿತ್ರ - (ನೋಡಿ) ಎಲೆ ಸಖಿ ಆ ರಾಜರ್ಸಿಯು ಮಣಿಹರ ದಲ್ಲಿ ತನ್ನ ಮಿತ್ರನೊಡನೆ ಸೇರಿರುವನು. ಅಲ್ಲಿಗೆ ಹೋಗೋಣ ನಡೆ. (ಎಂದಿಬ್ಬರೂ ಇಳಿಯುವರು.) ರಾಜ-ಮಿತ್ರನೆ ನನಗೆ ರಾತ್ರಿಯಂತೆ ನನ್ನ ಥತಾಪವೂ ಹೆಚ್ಚು ತ್ರಿ ರುವುದು. ಉರ-ಎಲೆ ಕೆಳದಿ ಈ ಮಾತಿನ ಅರ್ಥವು ಸ್ಪಷ್ಟವಾಗಿಲ್ಲ, ನಿನ್ನ ಮಾತಿನಿಂದ ಸ್ವಲ್ಪ ನೆಮ್ಮದಿಯಾಗಿದ್ದ ನನ್ನ ಮನಸ್ಸಿಗೆ ಕಳವಳವುಂಟಾಗಿ ರುವುದು ; ಸಂದೇಹಪರಿಹಾರವಾಗುವವರಿಗೂ ನಾವು ತಿರಸ್ಕರಿಣಿ ಪ್ರಭಾ ವದಿಂದ ಕಾಣಿಸಿಕೊಳ್ಳದಂತೆ ಇಲ್ಲಿಯೇ ಮರೆಯಾಗಿನಿಂತು ಅವರ ಸ್ನೇಚ್ಚಾ ಲಾಪಗಳನ್ನು ಕೇಳ೧೧. ಚಿತ್ರ-ಬಳ್ಳೇದು ನಿನ್ನಿಷ್ಟವಿದ್ದಂತಾಗಲಿ. (ಎಂದು ಮರೆಯಾಗಿ ನಿಲ್ಲುವರು.) ವಿದೂ-ಮಿತ್ರನೆ ಹಾಗಾದರೆ ನಿನ್ನ ಸಂತಾಪವನ್ನು ಕಳೆಯುವುದಕ್ಕೆ ಬಂದುಪಾಯವುಂಟು, ಕೇಳು ; ಅತ್ಯಂತ ಶೀತಳವಾಗಿರುವ ಅಮೃತಮಯ ವಾದ ಚಂದ್ರನ ಕಿರಣಗಳನ್ನು ಸೇವಿಸು. "