ಪುಟ:ವಿಕ್ರಮೋರ್ವಶಿಯ ನಾಟಕಂ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪v ಕರ್ಣಾ ಟಕ ವಿಕಿರಶೀಯ ನಾಟಕಂ, M ಬಿಟ್ಟು ಪ್ರಸನ್ನಳಾಗಿರುವಂತೆಯ ತೋರುವುದರಿಂದ ನನ್ನ ಕಣ್ಣಿಗೆ ಅತ್ಯಂತ ಸಂತೋಷಕರಳಾಗಿದಾಳೆ. ರಾಜಂ-(ನಸುನಕ್ಕು) ಈಕೆಯು ಸಂತೋಷಕರಳಾಗಿರುವುದಕ್ಕೆ ನಿನ್ನ ವಿಷಯದಲ್ಲಿ ಎರಡು ಕಾರಣಗಳೂ ಇರಬಹುದು ; ನನಗಾದರೆ ಎರಡನೇ ಕಾರಣವೊಂದೇ, ಕಳು. ವೃ || ಕರದೊಳ್ ಮಂಗಳಸೂತ್ರವೆಪ್ಪೆ ಕುರುಳೊಳ್ ದೂರಾಂಕುರಂ - ಶೋಭಿಸ೮ || ಪಿರಿದುಂ ರಂಜಿಸೆ ಕೋಮಲಾಂಗತೆಯೋ ನಂದುಕ೨೦ ವತಾ! ಚರಣವ್ಯಾಹದೆ ವಕ್ರಭಾವವುಳಿದಿರ್ವಿವಾನಿರತ್ನ ದೊo ದಿರವೇ ಎನ್ನೊಳತಿ ಪ್ರಸನ್ನೆಯನುತುಂ ಪೇಳುತ್ತುಮಿರ್ಕ್ಕುಂನಿಜು | ರಾಣಿ-(ಸವಿಾಪಕ್ಕೆ ಬ೦ದು) ಅರಪುತ್ರನಿಗೆ ಜಯವಾಗಲಿ. ಚೇಟಿಯರು-ಮಹಾರಾಜನಿಗೆ ಜಯವಾಗಲಿ. ವಿದೂ-ಎಲ್‌ ಪೂಜ್ಯಳೆ ನಿನಗೆ ಮಂಗಳವಾಗಲಿ. ರಾಜರಿ-~ ಎಲೆ ದೇವಿ ನಿನಗೆ ಸುಖಾಗಮನವೆ ? (ಕೈ ಹಿಡಿದುಕೊ೦ಡು ಕುಳ್ಳಿರಿಸಿಕೊಳ್ಳುವನು.) ಉತ್ವ,-ಎಲೆ ಸಖಿ ಈಕ ದೇವಿಯೆಂದು ಕರೆಸಿಕೊಳ್ಳುವುದಕ್ಕೆ ಯೋಗ್ಯವೇ ಸರಿ. ಗುಣಗಳಲ್ಲಿ ಯಾವಭಾಗದಲ್ಲಿ ತಾನೇ ದೇವತಾಸ್ತ್ರಿ ಗಿಂತ ಕಡಮೆಯಾಗಿದಾಳ ? ಚಿತ್ರ.- ನಿಜ ಮತ್ಸರವಿಲ್ಲದೆ ನೀನು ಸರಿಯಾಗಿ ಹೇಳಿದೆ. ರಾಣಿ-ಅತ್ಯಪುತ್ರನೆ ನಿನ್ನನ್ನು ಪುರಸ್ಕರಿಸಿ ಈಗ ನಾನೊಂದು ವ್ರತ ವನ್ನು ಆಚರಿಸುವೆನು, ಅದಕ್ಕೋಸ್ಕರ ಬಂದು ಮಹೂರ ನನ್ನ ನಿರ್ಬಂಧವನ್ನು ಸಹಿಸಬೇಕು. ರಾಜರಿ-ನಾಣವಕನ ಈಕ ಮಾಡುವ ನಿರ್ಬಂಧವು ನನಗೆ ಅನುಗು ಹವಲ್ಲವೆ? Y