ಪುಟ:ವಿಕ್ರಮೋರ್ವಶಿಯ ನಾಟಕಂ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫೪ ಕರ್ಣಾ ಟಕ ವಿಮೋರತೀಯ ನಾಟಕ, ಚಿತ್ರ:-ಮಹಾರಾಜನ ಈ ಮಾತಿಗೆ ಇವಳನುತ್ತರ ಹೇಳಿಯಾಳು? ನನ್ನದೊಂದು ವಿಜ್ಞಾಪನೆಯನ್ನು ಲಾಲಿಸಬೇಕು. ರಾಜರಿ-ಅದೇನು ಹೇಳಾ, ಕೇಳುವೆನು. ಚಿತ್ರ:-ವಸಂತಋತು ಕಳದಮೇಲೆ ಬೆ~ ಸಿಗೇ ಕಾಲದಲ್ಲಿ ನಾನು ಸೂರೋಪಾಸನೆಗೊಸ್ಕರ ಹೋಗಬೇಕಾಗಿರುವುದರಿಂದ ಈ ನನ್ನ ಸಖಿ ಯು ಯಾವುದಾದರೂ ನಿಮಿತ್ತದಿಂದ ಅಯ್ಯೋ ! ಸ್ವರ್ಗವನ್ನು ಬಿಟ್ಟು ಬಂದೆ ನಲ್ಲಾ! ಎಂದು ಅಂದುಕೊಳ್ಳದಹಾಗೆ ಈಕೆಯನ್ನು ನೀನು ಆದರಿಸಿಕೊಂಡಿ ಕಬೇಕು. ವಿದೂ-ಏನೆಂದೆ ! ಸ್ವರ್ಗವನ್ನೇಕೆ ನೆನಸುವಳು ? ಅಲ್ಲೇನಿದೆ ! ಅಲ್ಲಿ ರತಕ್ಕವರಿಗೆ ಆಹಾರಕ್ಕೆ ಗತಿಯಿಲ್ಲದೆ ಎಲ್ಲರೂ ವಿಾನುಗಳ೦ತೆ ಸರದಾ ಕಣ್ಣು ಬಿಟ್ಟುಕೊಂಡಿರುವುಗೆ ಪುರುಷಾರ್ಥವಾದ್ದರಿಂದ ಲೋಕದಲ್ಲಿ ವಿಟಿ ಮಿಟಸ್ಸರ್ಗವೆಂದು ಜನರು ಹೇಳುವರು. ರಾಜಂ-ಎಲೆ ಸಖಿಯ ಕಂ | ಅರ್ಗಣಿತವೆನಿಸಿದಸಗ್ಗದ | ಸೊಗಮರಮರಸದಾವನಾಸ್ಪof೪ || ಮುಗುದೆಗೆಪುರರನಂ ತಾಂ | ಮಿಗಿಲೆನೆಸೆರಸೆಂಡರಿಂದೆ ದಾಸಪತ್ರಯಂ joy || ಚಿತ್ರ:-ನಾನು ಕೃತಾರ್ಥಳಾದೆನು, ಎಲೆ ಊರತಿ ಇನ್ನು ಭಯಪಡ ಬೇಡ, ನನ್ನನ್ನು ಕಳುಹಿಸಿಕೊಡು. ಊಾತ್ವ.-(ಚಿತ್ರಲೇಖೆಯನ್ನು ಆಲಿಂಗಿಸಿ) ಎಲೆ ಸಖಿ ನನ್ನನ್ನು ಮರೆ ಯಬೇಡ. ಚಿತ )-(ನಸುನಗುತ) ಮಹಾರಾಜನೊಡಗೂಡಿದ ನಿನ್ನ ಸಂಗಡ ನಾನಾ ಡತಕ್ಕ ಮಾತನ್ನು ನನ್ನ ಸಂಗಡ ನೀನೇ ಆಡಿದೆಯಾ ? (ಎಂದು ರಾಯನಿಗೆ ವಂದಿಸಿ ತೆರಳಿದಳು.)