ಪುಟ:ವಿಕ್ರಮೋರ್ವಶಿಯ ನಾಟಕಂ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

&v ಕರ್ನಾಟಕ ವಿಕ್ರಮೋಶೀಯ ನಾಟಕ೦. moov wowowowowowin ದಿ ವಿದೂ-(ಸಮೀಪಕ್ಕೆ ಬಂದು) ಹೇಗೆ ಮಾಡುವುದೇನು ? ಸಾಕು ಸಾಕು ನಿನ್ನ ಕರುಣ, ಈ ಅಪರಾಧಿಯನ್ನು ಬೇಗ ಶಿಕ್ಷಿಸು. ರಾಜ-ಹೌದು, ನೀನುಹೇಳಿದ್ದು ಸರಿ ; ಎಲ್ಲಿ ನನ್ನ ಧನುಸ್ಸು ? ಯವನಿಕೆ-ಇದೊ ತಂದೆನು (ಎ೦ದು ತೆರಳಿದಳು.) ರಾಗಿ-ಎಲ್ಲಿ? ಆ ಕಳ್ಳಹದ್ದು ಕಣ್ಣಿಗೆ ಕಾಣದಹಾಗಾಯಿತು | ವಿದೂ-ಮಹಾರಾಜನ ಆ ರಣಹದ್ದು ಇತ್ತಲಾಗಿ ದಕ್ಷಿಣದಿಕ್ಕಿನ ಕೊನೆಯನ್ನು ಸೇರಿದಹಾಗೆ ಕಂಡುಬಂತು. ರಾಜಂ-(ತಿರುಗಿನೋಡಿ) ಇದೆ ಈಗ ಕಾಣುತ್ತಿರುವುದು, ಕಂ| ಮಿಸುಗುವ ಕೆದಿರ್ಗ ಬಳಸಿರ | ಲಸುಗೆಯ ಪೊಸಗೊಂಚಲಿಂತೆ ತೋರ್ಪಮುಣಿಯಿರಿ | ದೆಸೆವೆಣ್ಣಿನ ಮುಂದಲೆಯಂ | ಪಸವನಗೊಳಸಂತ ನೋಡಲಾಗರ್ದ್ದೆಸೆಗುಂ ||೩|| ಯವನಿಕ-(ಧನುರ್ಬಾಣಗಳನ್ನು ತೆಗೆದುಕೊಂಡು ಬಂದು) ಮಹಾರಾಜನ ಇದೆ ಬಾಸಹಿತವಾದ ಧನುಸ್ಸು, ರಾಗಿರಿ-ಈಗ ಧನುಸ್ಸಿನಿಂದತಾನೆ ಏನುಪಯೋಜನ ? ಆ ಹದ್ದಾ ಗಲೇ ಬಾಣವಾರ್ಗವನ್ನು ಅತಿಕ್ರಮಿಸಿ ಹೊರಟು ಹೋಯಿತು, ಇದೆ ಕಂ|| ತಾರಗೆ ವಟ್ಟೆಗೆ ಪರ್ರೋ | ಯಾರತ್ನಮಿರುಳ ಸುನಾಭ್ರಖಂಡದೆಲೆರೆದಂ | ಗಾರಕ ನಕ್ಷತ್ರದವೋಲ್ | ದೂರದೆಮಿಣಮಿಣನೆ ಮಿನುಗುತಿರ್ಕ್ಕು೦ ನೋಡಲ್ |3| (ಎಂದು ಕಂಚುಕಿಯನ್ನು ನೋಡಿ) ಎಲೈ ಲಾತವ್ಯನೆ, ಕಂಚು-ಮಹಾರಾಜನೆ ಏನಪ್ಪಣೆ ? ೧.