ಪುಟ:ವಿಕ್ರಮೋರ್ವಶಿಯ ನಾಟಕಂ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

2F nanananananana wanasund ಪಂಚವಾಂಕ, - ~ರಾಜಿಂ-ಸಾಯಂಕಾಲದಲ್ಲಿ ಯಾವುದಾದರೂ ಒಂದು ಮರದಮೇಲೆ ಹೋಗಿ ಸೇರತಕ್ಕ ಆ ಕಳ್ಳಹದ್ದನ್ನು ಹುಡುಕತಕ್ಕದ್ದೆಂದು ನಗರಾಧ್ಯಕ್ಷ ನಿಗೆ ಆಜ್ಞಾಪಿಸು. ಕಂಚು.-ಮಹಾರಾಜನ ಅಪ್ಪಣೆಯಾದಂತೆ. (ಎ೦ದು ತೆರಳಿದನು). ವಿದೂ-ಮಹಾರಾಜನ ಇನ್ನು ಕೂತುಕೊಳ್ಳಬಹುದು ; ಆ ರತ್ನ ವನ್ನು ಕದ್ದಿರತಕ್ಕ ಹದ್ದು ಈಗ ಇನ್ನೆಲ್ಲಿ ತಾನೇ ಹೊದೀತು ? ಅದೆಂದಿಗೂ ನಿನ್ನ ಆಜ್ಞೆಯಿಂದ ಬಿಡಿಸಿಕೊಳ್ಳಲಾರದು. ರಾಜ೦-ಒಳ್ಳೇದು ಆಗಲಿ. (ಎಂದು ವಿದೂಷಕನೊಡನೆ ಕೂತುಕೊಂಡು) ಎಲೈ ಮಿತ್ರನೆ, ಕಂ|| ಇನಿತಾದರವಿದು ಮಣಿ | ಯೆನುತಾನದ್ದೆತ್ತಿಕೊಂಡು ಪೋದಾವಣಿಯೊಳ್ | ಎನಗದಗೊಳಿಸಿತ್ತಾದರ ವಿನಿಯಳನನ್ನೊಂದುಗೂಡಿಸಿದೆನುತು |೫|| ವಿದೂ.-ಮಹಾರಾಜನ ಈ ನಿನ್ನ ಮಾತಿನಿಂದ ಊರ್ವಶಿಸಹಿತನಾಗಿ ನೀನು ದೇವತಾವನಗಳಲ್ಲಿ ವಿಹರಿಸುತ್ತಿದ್ದಾಗ ನಡೆದ ಸಂಗತಿಗಳೆಲ್ಲಾ ತಿಳಿದು ಬಂದಹಾಗಾಯಿತು. (ಬಳಿಕ ಬಾಣದೊಡನೆ ರತ್ನವನ್ನು ತೆಗೆದುಕೊಂಡು ಕಂಚುಕಿಯ ಕಿರಾತಿಯ ಪ್ರವೇಶಿಸುವರು). ಕಂಚು-ಮಹಾರಾಜನಿಗೆ ಜಯವಾಗಲಿ. ಕಂ|| ಶರರೂಪವನಾಂತೀ ನಿ | ನ್ನು ರುಕಪದೆ ಗಾಡಿವಡೆದು ತಮ್ಮ ರರತ್ನಂ || ಬೆರಸಂತರಿಕ್ಷದಿಂದಂ | ಕರುನಾಡದ ನಡುವ ಕೆಡೆದು ದಾಬೋರಖಗಂ ||೬| ಎಲ್ಲಕೂ-(ಅಶ್ಚತ್ಯವನ್ನು ನಟಿಸುವರು). ಎ - 1