ಪುಟ:ವಿಕ್ರಮೋರ್ವಶಿಯ ನಾಟಕಂ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

V9 ಕರ್ಣಾಟಕ ವಿಕ್ರಮೋಶೀಯ ನಾಟಕಂ, ರಾಜ-ಅವರನ್ನು ಬೇಗ ಕರೆದುಕೊಂಡುಬಾ. ಕಂ-ಅಪ್ಪಣೆ (ಎಂದು ಹೋಗಿ ಧನುರ್ಧಾರಿಯಾದ ಕುಮಾರನೊಡನೆ ತಾಪಸಿಯನ್ನು ಕರೆದುಕೊಂಡು ಬಂದು) ಎಲೆ ಪೂಜ್ಯಳ ಹೀಗೆ ದಯಮಾಡಿಸ ಬೇಕು. (ಎಲ್ಲರೂ ನಡತರುವರು). ವಿದೂ--(ಕುಮಾರನನ್ನು ನೋಡಿ) ಮಹಾರಾಜನ ಈತನು ಕ್ಷತ್ರಿಯು ಕುಮಾರನಂತ ಕಾಣಿಸುವನು. ಈತನಲ್ಲಿ ನಿನ್ನ ಹೋಲಿಕೆ ವಿಶೇಷವಾಗಿ ರುವುದರಿಂದ ಆ ಹದ್ದನ್ನು ಸಂಹರಿಸಿದ ಈ ಬಾಣವು ಈತನದಾಗಿಯೇ ಇರ ಬಹುದು. ರಾಜn-ಇದ್ದರೂ ಇರಬಹುದು. ಆದ್ದರಿಂದಲೇ, *ಕಂ|| ಹೃದಯದೆ ವಾತ್ಸಲ್ಯ ನೇ | ಇದೆ ಬಾಪ್ಪಂ ತಿಳವು ಮನದೆ ನಡುಕಂ ಕರೋ೪ || ಉದಯಿಸೆ ಧೈರ್ಯ೦ ವಿಗಳಗೆ || ಮೊದಲಾಂ ಬಿಗಿದಿವನ ನಪ್ಪಿಕಳಲೆಳಸಿದಷಂ || ಕಂ-ಹೀಗೆ ನಿಂತುಕೊಳ್ಳಿರಿ. (ತಾಪಕುಮಾರರು ಒಂದು ಕಡೆ ನಿಂತುಕೊಳ್ಳುವರು.) ರಾಜಿ.-ಎಲ್‌ ಪೂಜ್ಯಳ ವಂದಿಸುವೆನು. ತಾಪಸಿ.-ಎಲೈ ಮಹಾರಾಜನ ಚಂದ್ರವಂಶೋ+ಾರಕನಾಗು. (ತನ್ನಲ್ಲಿತಾನು) ಯಾರೂ ಹೇಳದೇ ಇದ್ದಾಗ್ಯೂ ಈ ರಾಜರ್ಷಿಗ ಈ ಕು ಮಾರನಿಗೂ ಔರಸಸಂಬಂಧವು ಚೆನ್ನಾಗಿ ಗೊತ್ತಾಗುತ್ತಿರುವುದು. (ಪ್ರ) ವತ್ಸನೆ ನಿಮ್ಮ ತಂದೆಗೆ ನಮಸ್ಕಾರಮಾಡು. --- - - - - -

  • 1] ರಾಗ-ಫಜF-ಏಕತಾಳ ||

ಯಾರೇನೆಂದರೋ ಮಹರಾಯ ಎಂಬಂತ.) ಬಾಲಕನಿವನನು ನೋಡಿ | ಆನಂದತೋರ್ಪುದು | ಮಾನಸದೊಳೇನಿದು|| ಪ|| ಈ ನೇತ್ರಯುಗದಳ | ಗಾನಂದಬಾಷ್ಪವು | ನೀ ನೋಡುಬರುತಿದೆ / ತಾನೀಗಳೇ ನಿದು Inು ಹೃದಯದಿವಾತ್ಸಲ್ಯ | ವೊದಗಿತೋರುತ್ತಿದೆ | ಇದ ಕೇನೂ ಕಾರಣ | ವದಕಾಣೆನೇನಿದು |೨| ಈ ಲಲಿತಾಂಗನ | ಅಲೋಕಿಸಲುಬಿಗಿ | ದಾಲಿಂಗಿಸಲು ಮನ | ಕಾಕಾಂಕ್ಷೆಯೇನಿದು |೩||