ಪುಟ:ವಿಕ್ರಮೋರ್ವಶಿಯ ನಾಟಕಂ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

Vk ಕರ್ಣಾಟಕ ವಿಕ) ಮೊಲ್ವ ಶೀಯ ನಾಟಕ. ಊ. --(ಕುಮಾರನನ್ನು ತಬ್ಬಿಕೊಂಡು ಮುದ್ದಾಡಿ) ವತ್ಸನ ಸಕಲವಿಷಯ ದಲ ತಂದೆಯನ್ನು ಮೆಚ್ಚಿಸುತ್ತಾ ಇರು. (ಎ೦ದು ರಾಯನಬಳಿಗೆ ಬಂದು) ಮಹಾರಾಜನಿಗೆ ಜಯವಾಗಲಿ. ರಾಜಂ- ಎಲೆ ಪುತ್ರವತಿಯ ನಿನಗೆ ಸುಖಾಗಮನವೆ? ಇಲಿ ಕೂತುಕೊ (ಎ೦ದು ತನ್ನ ಅರ್ಧಾಸನವನ್ನು ಬಿಡುವನು) ಊಧ್ವ.-ಸತ್ಯವತಿಯನ್ನು ನೋಡಿ) ಎಲ್ ಪೂಜ್ಯಳೆ ಕೂತುಕೊಳ್ಳ ಬೇಕು. (ಎಲ್ಲರೂ ಅವರವರ ಸ್ಥಾನಗಳಲ್ಲಿ ಕೂತುಕೊಳ್ಳುವರು.) ತಾ,-ಎಲೆ ಮಗಳ ಚಿರಂಜೀವಿಯಾದ ಈ ನಿನ್ನ ಮಗನು ವಿದ್ಯಾ ನಂತನಾಗಿ ದೊಡ್ಡವನಾಗಿರುವನು ; ಇದೂ ಇವನನ್ನು ನಿನ್ನ ಗಂಡನೆದು ರಿಗೆ ನಿನ್ನ ಕಯ್ಯಲ್ಲಿ ಕೊಟ್ಟ ರಾವೆನು ; ಕರೆದುಕೊ. ಆಠವಧರ್ಮವು ನನ್ನ ಮನಸ್ಸನ್ನು ಸೆಳೆಯುವುದರಿಂದ ನಾನು ಹೇಗಿಬರುವೆನು. ಊ.-ಎ ಪೂಜ್ಯಳೆ ನಿನ್ನನ್ನು ನೋಡಿ ಬಹಳ ದಿವಸಗಳಾದ ರಿಂದ ಈಗಲೇ ನಿನ್ನನ್ನು ಕಳುಹಿಸಿಕೊಡುವುದಕ್ಕೆ ನನ್ನ ಮನಸ್ಸು ಬರು ವುದಿಲ್ಲ ; ಆದರೂ ಆಶ್ರಮಧರ್ಮಕ್ಕೆ ತಡೆವಾಡತಕ್ಕದ್ದು ಸರಿಯಲ್ಲವಾ ದ್ದರಿಂದ ಹೋಗಿಬರಬಹುದು. ರಾಜ-ಅರಳ ಪೂಜ್ಯರಾದ ಚ್ಯವನಮಹರ್ಷಿಗಳಿಗೆ ನನ್ನ ನಮಸ್ಕಾ ರವನ್ನು ತಿಳಿಸಬೇಕು. ತಾ.~ ಒಳ್ಳೇದು ತಿಳಿಸುವೆನು. ಆಯು-(ಸತ್ಯವತಿಯನ್ನು ನೋಡಿ) * ಅಮ್ಮಾ ನೀನು ನಿಜವಾಗಿ ಆ ನಕ್ಕೆ ಹೋಗುವೆಯಾ ? ಹಾಗಾದರೆ ನನ್ನನ್ನೂ ಕರೆದುಕೊಂಡು ಹೋಗು. ರ --- --- - = - - -

  • ರಾಗ-ಕಲಹರಪ್ರಿಯ -ತಾಳ-ಮಿಶ್ರಛಾಪು |

(ಪೋಗದಿರೆನ್ನಯ ಕಾ೦ತ ಎಂಬಂತೆ) ಈಗಳೆ ಪೋಪೆಯ ತಾಯೆ | ಆ ಗುರುಸನ್ನಿಧಿಗೆ ಮಹನೀಯೆ || ನಾಗರರೆನಿ ಸಿರ್ಪ ಈ ಜನಸಮೂಹದ ನನ್ನ ನು ಬಿಟ್ಟು || ೧ ||