ಪುಟ:ವಿದುರನೀತಿ ಮತ್ತು ನಾರದನೀತಿ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾರದನೀತಿ, ೧೩ ಎನೈ ಅರಸನೇ, ಅಗ್ನಿಯ, ಕಳ್ಳನ, ಸರ್ವವೂ, ಹುಲಿ ಮೊ ದಲಾದವುಗಳಿಂದ ನಿಮ್ಮ ರಾಷ್ಟ್ರವನ್ನು ಸಂರಕ್ಷಣೆಯಷ್ಟೆ ? ನಿನ್ಮ ಸಭೆಯಲ್ಲಿ ಅತಿ ಸನ್ನಿಹಿತ ದೊಡ್ಡ ದೊಡ್ಡ ವಿದ್ವಜನ ಪರಮ ಜ್ಞಾನಿಗಳನ್ನು ಆಚರಸಂಪನ್ಮ ಮತ್ತು ಶಿಷ್ಟ ಸಮ್ಮತರಾಗಿ ಕಂಡು ತಿರುವಷ್ಟೆ ? ದುರ್ದನ ಶಿಭ್ರಕೋತ ( ಸತ್ಯಾಲ ಶಿಟ್ಟುಬರುವಂಥವ ) ಕತೆ ರ ಭಾಷಣ ಅಡುವವನೂ, ಪರಮ ಸಂತಾನಿಯ, ಶೂನ್ಯವಾದಿ ( ನಿಷ್ಕರಣ ವಾದಮಾಡುವವ ) ಮಹಾ ಪಾದ್ರಿ, ಇಂಥ ಮನುಷ್ಯರಿಗೆ ಸಭೆಯಲ್ಲಿ ಬರುವ ಪ್ರತಿಬಂಧವಿರುವದಷ್ಟೆ ? ಸಾದು ಸಂತರ ಅಪವಾನಮಾಡುವವನ, ದೇವಗಿರಿಗೆ ದುಷ್ಟ ಅಪಶಬ್ದಗಳನ್ನಾಡುವವನೂ, ಇಂಥ ಅಪರಾಧಿಯನ್ನು ತತಾ ಜಿಂಹಾ ಭೇದನ ಮಾಡುತ್ತಿ ಯಷ್ಟೆ ? ನೀನು ರಾತ್ರಿಯ ಕಡೆಯ ಭಾಗದಲ್ಲಿ ಅಂದರೆ ಬೆಳಗುಮುಂಜಾನೆ ಎದ್ದು ಸರಾಸಾರ ವಿಚಾರ, ನೀತಿ, ಮೋಕ್ಷ್ಯವರ್ಗ, ಭಯನಿವೃತ್ತಿ ಇವುಗಳ ವಿಷಯದಲ್ಲಿ ನಿರಂತರ ವಿಚಾರಮಾಡುತ್ತಿರುವಿಯಷ್ಟೇ ? ನರಕ, ಮೋಕ್ಷ, ಪಾಪ, ಇವುಗಳ ಪೂರ್ಣ ಜ್ಞಾನವು ದಿನನಿಂದೆ ಯುಂಟಾಗದಂತೆ ಇರುವದಷ್ಟೆ ? ಭೂಕೊಟೆ ಕೊತ್ತಲ, ಗಡಗಳಲ್ಲಿ ಪ್ರತಿವರ್ಷವು ಧಾನ್ಯಗಳನ್ನು ತಗೆದು ಹೊಸ ಹೊಸ ಧಾನ್ಯ ಔಷಧ ನೀರು ಮುಂತಾದವುಗಳನ್ನು ಉತ್ತಮತರದಿಂದ ಸಂಗ್ರಹಿಸುವಿಯಷ್ಟೆ ? ಮಠ, ದೇವಾಲಯ, ಭಾವಿ, ಕೆರೆ, ಧರ್ಮಶಾಲೆ ಇವುಗಳ ಜೀ ರ್ಣೋದ್ದಾರ ಮಾಡುವದು, ನದಾದೀಪ, ಪೂಜಾ, ಮತ್ತು ನೈವಿದ್ಯಗಳು ಚನ್ನಾಗಿ ನಡಿದಿರುವವಷ್ಟೆ ?