ಪುಟ:ವಿದುರನೀತಿ ಮತ್ತು ನಾರದನೀತಿ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಾರದನೀತಿ. f ನಿನ್ನ ಮುಂದೆ ಬಹಳೇ ದೀನತನವನ್ನು ತೋರಿಸಿ ಯಾವತ್ತು ಸಂಗತಿಗಳನ್ನು ನಿನ್ನ ಶತ್ರುಗಳಿಗೆ ತಿಳಿಸತಕ್ಕಂಥವರನ್ನು ನೀನು ತಿಳಿದಿರುವಿಯಷ್ಟೇ? ಯಾವವಿಷಯದಲ್ಲಿ ಬಹಳ ಲಾಭವಿದ್ದು ಸ್ವಹಿತದ ಸಂಶವು ಯಾವದರಲ್ಲಿ ಆಗುವದೋ ಅಂಥ ಲಾಭದ ಉದ್ಯೋಗ ಮಾಡುವ ದಿಲ್ಲವಷ್ಟೇ? ನಿನ ರಾಜ್ಯದ ಸಂರಕ್ಷಣೆ ಯೋಧ್ಯರಿಂದ ಆಗುತ್ತದೆಂಬುದನ್ನು ತಿಳಿದು ನೀನು ನಿನ್ನ ಸೈನ್ಯದ ಸಂಬಳವನ್ನು ಆಗಾಗ್ಗೆ ಕೊಡುತ್ತಿರು. ಹೀಗೆ ಮಾಡುವದರಿಂದ ಸೇವಕರು ಎಕಚಿತ್ತತನದಿಂದ ತಮ್ಮ ಕೆಲಸ ವನ್ನು ಚೆನ್ನಾಗಿ ಮಾಡುವರೆಂಬದನ್ನು ನೀವು ತಿಳಿದಿರುವಿಯಷ್ಟೇ? ಒಬ್ಬ ಮೂರ್ಖನ ಸಮಾಗಮದಿಂದ ಕೀರ್ತಿಯ, ಲಾಭದ, ಸಖದ, ಸಂಪತ್ತಿಯ, ಇವುಗಳ ಸರ್ವಧೈವ ನಾಶಹೊಂದಿ, ದುರ್ಯೋ ಕಿಕ ಮಾತ್ರ ಬರುವದೆಂದು ನೀನು ತಿಳಿದಿರುವಿಯಷ್ಟೇ ? ನೀನು ಮತ್ತು ನಿನ್ನ ಪ್ರಧಾನನು ಗುಪ್ತಾ ಲೋಚನಮಾಡು ವದು ಪಟ್ಟರ್ಣವಾಗಿ ಹೊರಗೆ ಪ್ರಸಿದ್ದವಾಗುವದಿಲ್ಲವಷ್ಟೇ ? ಎಲೈ ಅರಸನೇ ! ಈ ತರದ ಉತ್ತಮ ಗುಣಗಳು ನಿನ್ನಲ್ಲಿ ನಿಶ್ಚಯವಾಗಿ ನೆಲೆಗೊಂಡಿರುಬೇಕೆಂದು ತಿಳಿದು ನಿನ್ನನ್ನು ಕುರಿತು ಈ ಪ್ರಶ್ನೆಗಳನ್ನು ಮಾಡಿದನು. ಆದರೆ ಎಲೈ ಧರ್ಮನೆ ! ಸಾವಧಾನ ಚಿತ್ತನಾಗಿ ವಿಚಾರಪೂರ್ವಕವಾಗಿ ನಡೆದುಕೊಳ್ಳು ಅಂದರೆ ಅದರಿಂದ