ಪುಟ:ವಿದುರನೀತಿ ಮತ್ತು ನಾರದನೀತಿ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ಸಂಕಲ್ಪಾತ್ಮಕವಾದ ಮನಸ್ಸಿನ ಬುದ್ಧಿಗೆ ಮೂಲವಾದಂಥಾ ಕಾಮುಕ ಇಂದ್ರಿಯಗಳ ನಿಗ್ರಹದಿಂದಲೂ ಬುದ್ಧಿಯಿಂದಲೂ ಪರಮಾ ತ್ಮನನ್ನು ತಿಳಿಯಬೇಕು. ತನ್ನ ಉದ್ಯಾರಮಾಡುವದಕ್ಕೂ ಬದ್ದನನ್ನು ಮಾಡುವದಕ್ಕೂ ಬುದ್ದಿಯ ಬಂಧುವೂ ಶತ್ರುವು, ಯಾವ ಪುರುಷನು ದ್ರವ್ಯಗಳಿಗೆ ಅಧಿಪತಿಯಾದವನಾದರೂ ಇಂದ್ರಿಯ ಸ್ವಾಧೀನವಿಲ್ಲದವನೋ ಆ ಪುರುಷನು ಇಂದ್ರಿಯ ಸ್ಟಾ ಧೀನವಿಲ್ಲದವನಾದದ್ದೆಶೆಯಿಂದ ಐಶ್ಚರ್ಯದಿಂದ ಭ್ರಷ್ಟನಾಗುವನು, ಯಾವಬುದ್ಧಿಯಿಂದ ಯಾವನವಿಷಯವಾಗಿ ಆತ್ಮ ತಿಳಿಯಲ್ಪಡುವ ದೋ ಅವನಿಗೆ ಆ ಬುದ್ದಿಯ ಬಂಧುವು. ಯಾವ ಬುದ್ಧಿಯಿಂದ ಆತ್ಮತಿಳಿಯಲ್ಪಡುವದಿಲ್ಲವೊ ಅ ಬುದ್ದಿಯ ಅವನಿಗೆ ಶತ್ತುವು. ಸೂಕ್ಷ್ಮ ಛದ್ರಗಳುಳ್ಳ ಬಲೆಯಿಂದ ಮುಚ್ಚಲ್ಪಟ್ಟ ಮಹತ್ತರ ಗಳಾದ ಎರಡು ಮೀನಗಳು ಪರಸ್ಪರ ದೋಷವುಳ್ಳವಗಳಾದರೂ ಬ ಲೆಯನ್ನು ಛೇದಿಸುವ ನಿಮಿತ್ತ ಮಿತ್ರತ್ವವನ್ನು ಹೊಂದಿ ಬಲೆಯನ್ನು ಛೇದಿಸಿದ ಹಾಗೆ ಕಾಮಕ್ರೋಧಗಳೆರಡೂ ಪ್ರಜ್ಞಾಂತರ್ಗತಗಳಾಗಿ ಪ್ರಜ್ಞಾಛೇದನವನ್ನು ಮಾಡುವದು. ಆದಕಾರಣ ಕಾಮಕ್ರೋಧರಹಿತ ವಾದ ಬುದ್ದಿಯೇ ತನಗೆ ಮುಖ್ಯ ಬಂಧುವಾಗುತ್ತದೆ. ಈ ಕಾಲದಲ್ಲಿ ಧಮಾರ್ಥಗಳನ್ನು ತಿಳಿದು ಅರಿಷಡ್ವರ್ಗ ಬಯ ವೆಂಬುವ ಸಾಮಗ್ರಿವುಳ್ಳವನು ಮೋಕ್ಷವನ್ನು ಹೊಂದುತ್ತಿ ದ್ದಾನೆ. ಮನೋವಿಕಾರಭೂತಗಳಾದ ತನ್ನಲ್ಲಿರುವ ಶೋತಾ ದಿಸಂ ಬೈಂದ್ರಿಯಗಳನ್ನು ಜಯಿಸದೇ ಶತ್ರುಗಳನ್ನು ಯಾವನು ಜಯಿಸು ವದಕ್ಕೆ ಇಟ್ಟೆವುಳ್ಳವನೂ ಅವನನ್ನು ಶತ್ರುಗಳು ತಿರಸ್ಕಾರಮಾಡುವರು. - ಇಂದ್ರಿಯ ನಿಗ್ರಹವಿದವರಾಗಿ ಸೀತಾ ಸಹರಣರೂಪ ದುಷ್ಕ ರ್ಮಗಳಿಂದ ಕೊಲ್ಲಲ್ಪಟ್ಟ ರಾಜ್ಯ ಭ್ರಷ್ಟರಾದ ದುಷ್ಯಮನಸ್ಸುಗಳುಳ್ಳ ರಾವಣಾಸುರ ಮೊದಲಾದ ಅರಸುಗಳು ನೋಡಲ್ಪಡುತ್ತಿದ್ದಾರಲ್ಲಾ,