ಪುಟ:ವಿದುರನೀತಿ ಮತ್ತು ನಾರದನೀತಿ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ಗಳುಳ್ಳ ಪಶುವಿಷಯಕವಾಗಿ ಸುಳ್ಳನ್ನು ಹೇಳಿದರೆ ತನ್ನ ತಂದೆಯೊ ದಲುಗೊಂಡು ತನ್ನ ವಂಶಸ್ಥರಾದ ಪೂರ್ವೀಕರಾದ ಐದುಜನ ಸು ರುಷರನ್ನು ಸಂಹಾರಮಾಡಿದ್ದರಿಂದ ಉಂಟಾಗುವ ನರಕಯಾತನೆಯ ನ್ನು ಹೊಂದುವನು. ಗೋವಿಷಯಕವಾಗಿ ಸುಳ್ಳನ್ನು ಹೇಳಿದರೂ ಹತ್ತು ಗೋಹತ್ಯಜನ್ಮ ನರಕಯಾತನೆಯನ್ನು ಹೊಂದುವನು. ಕುದುರೆಯ ಏಷಯಕ ವಾಗಿ ಸುಳ್ಳು ಹೇಳುವವನು ನೂರು ಅಸ್ಟಗಳಹತ್ಯಜನ್ಯ ನರಕಯಾತನೆಯನ್ನು ಹೊಂದುವನು. ಪುರುಷವಿಯಕವಾಗಿ ಸುಳ್ಳು ಹೇಳುವವನು ಸಹಶ್ರ ಪುರುಷ ಹತ್ಯ ಜನ್ಯ ನರಕಯಾತನೆಯನ್ನು ಹೊಂದುವನು. ಸುವರ್ಣವಿಷಯಕವಾಗಿ ಸುಳ್ಳು ಹೇಳುವವನು ಹುಟ್ಟಿದವರನ್ನೂ ಹುಟ್ಟುವವರನ ಸಂಹಾರಮಾಡುವದರಿಂದ ಉಂಟಾಗುವ ನರಕ ಯಾತನೆಯನ್ನು ಹೊಂದುವನು. ಭೂಮಿಯ ವಿಷಯಕವಾಗಿ ಸುಳ್ಳು ಹೇಳುವವನು ಪೂರ್ವ ಜನ್ಮದಿಯ, ಈ ಜನ್ಮದಲ್ಲಿ ಮಾಡಿದ ಸುಕೃತಮೊದಲು ಗೊಂಡು ಸಮಸ್ತವನ್ನೂ ನಾಶಮಾಡಿಕಳಕೊಂಡು ಯಾವ ನರಕವನ್ನು ಹೊಂದುವನೋ ಅಂಥ ನರಕಯಾತನೆಯನ್ನು ಹೊಂದುವನು. ಆದ ಕಾರಣ ಭೂವಿಷಯಕವಾಗಿ ಸುಳ್ಳನ್ನು ಹೇಳಬೇಡವೆಂದು ಪ್ರಹ್ಲಾದನ ನ್ನು ಕುರಿತು ಸುಧನ್ನನು ಹೇಳಿದ್ದಾನೆ. ಆದ್ದರಿಂದ ಎಲೈ ಧೃತರಾಷ್ಟ್ರ ನೇ ಭೂ ವಿಷಯವಾಗಿ ಸು ಳ್ಳನ್ನು ಹೇಳುವದಕ್ಕೆ ನೀನು ಯೋಗ್ಯನಲ್ಲ. ಯಾಕೆಂದರೆ ಪುತ್ರನ ನಿಮಿತ್ತವಾಗಿ ಅಪದ್ಧವನ್ನು ಹೇಳುತ್ತಾ ಮಲತ್ರಿ ಪುತ್ರರ ಸಂಗಡ ಕೂಡಾ ನಾಶವನ್ನು ಹೊಂದದಿರು,

)