ಪುಟ:ವಿದುರನೀತಿ ಮತ್ತು ನಾರದನೀತಿ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೪ ವಿದುರನೀತಿ. ಸತ್ಯವಾಕ್ಯರೂಪವಾದ ವೇದಾಂಗ ವಿದ್ಯದಿಂದಲೂ ಸತ್ತು ಗು ಷರಿಗೆ ಯೋಗ್ಯವಾದ ಸುಗುಣಗಳಿಂದಲೂ ವಿಹಿತದಿಂದ ಸಂಪಾದಿಸಿ ದ ದ್ರವ್ಯದಿಂದಲೂ ಆ ಮೊದಲು ಹೇಳಿದ ಏಳು ಗುಣಗಳಿಂದಲೂ ಯುಕ್ತವಾದವುಗಳು ಸತ್ತುಲಗಳು, ಸಮ್ಮತ್ತಿಯಿಂದ ರಹಿತವಾಗಿ ದ್ರವ್ಯದಿಂದ ಸಂಪೂರ್ಣವಾದ ಕುಲ ಗಳು ಸತ್ಕುಲಗಳಲ್ಲ. ಪದ್ಮತಿಯಿಂದ ಸಹಿತವಾಗಿ ಸಲ್ಲುಧನವುಳ್ಳ ಕು ಲಗಳೇ ಸತ್ಕುಲಗಳೆಂದೆನಿಸಿಕೊಂಡ ಮಹತ್ತರವಾದ ಯಶಸ್ಸನ್ನು ಸಂ ಪಾದಿಸುತ್ತಾ ಇವೆ. ಸಮ್ಮತಿಯನ್ನು ಯತ್ನದಿಂದ ರಕ್ಷಿಸಿದ ಹಾಗಾದರೆ ಹೋದಂಥಾ ದ್ರವ್ಯಗಳನ್ನು ಪುರುಷನು ಹೊಂದುತ್ತಾ ಇದ್ದಾನೆ, ವಿದ್ಯಗಳಿಂದಲೂ ಪಶುಗಳಿಂದಲೂ ಅಶ್ಚಗಳಿಂದಲೂ ಸಮೃದ್ಧಿ ಯಾದ ಕೃಷಿಯಿಂದಲೂ ದ್ರವ್ಯದಿಂದಲೂ ರಹಿತವಾದ ಕುಲದವ ರೂ ರಹಿತವಾದದ್ದಲ್ಲ ಹಾಗಂದರೆ ಸದ್ಯಾಪಾರದಿಂದ ರಹಿತವಾದದ್ದ ಲ್ಲವಾದ್ದರಿಂದ ಮೊದಲು ಹೇಳಿದವಗಳಾದ ಸಮೃದ್ಧಿಗಳಿಂದ ನಮ್ಮ ದ್ಧಿಯಾದವುಗಳು. ಯಾವ ಕುಲಗಳು ಸತ್ಯಯಗಳಿಂದ ರಹಿತವಾದವಗಳೂ ಆ ಕುಲಗಳು ಅಭಿವೃದ್ಧಿಯಾಗವು. ನಮ್ಮ ಕುಲದಲ್ಲಿ ವೈರವನ್ನು ಮಾಡುತ್ತಾ ಪರಸ್ಥಾಪಹಾರವನ್ನು ಮಿತ್ರದೇಹವನ್ನು ವಂಚನೆಯನ್ನು ಮಾಡುತ್ತ ಸುಳ್ಳು ಹೇಳುವವನಾಗಿ ವಿತ್ರ ದೇವ ಅಥಿತಿ ಸತ್ಕಾರ ಮಾಡುವದಕ್ಕಿಂತ ಆದಿಯಲ್ಲಿ ತಾನೇ ಭೋ ಜನಮಾಡುವಂಥ ಅರಸನಾದರೂ ಮಂತ್ರಿಯಾದರೂ ಉಂಟಾಗಬೇಡ, ನಮ್ಮ ಬ್ರಾಮ್ಮಣರನ್ನು ಯಾರು ಹೊಡಿ ಯುವರೋ ಯಾರು ದ್ವೇಷಿಸುವರೋ ನಮ್ಮ ಕೃಷಿಯನ್ನು ಯಾವನು ಛೇದಿಸುವನೋ ಅವನ ಸಭೆಯನ್ನು ಕುರಿತು ಹೋಗತಕ್ಕದ್ದಲ್ಲ.