ಪುಟ:ವಿದುರನೀತಿ ಮತ್ತು ನಾರದನೀತಿ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ, ೫೩ ಶುಭಸಂಪಾದಕಗಳಾದ ಪ್ರಯೋಕ್ತಿಗಳನ್ನು ಹೇಳುವನೋ ಆ ಸುರು ಷನಿಂದ ಆ ಅಧಿಪತಿಸಹಾಯವಂತನು, ಒಂದು ಕುಲ ಸಂರಕ್ಷಣಾರ್ಥವಾಗಿ ಒಬ್ಬ ತ್ಯಾಗಮಾಡು ವದೂ, ಒಂದು nನ ಸಂರಕ್ಷಣಾರ್ಥವಾಗಿ ಒಂದು ಕುಲವನ್ನು ತ್ಯಾಗಮಾಡುವದೂ, ಒಂದು ದೇಶಸಂರಕ್ಷಣಾರ್ಥವಾಗಿ ಒಂದು ಗಾಮವನ್ನು ತ್ಯಾಗಮಾಡಬಹುದು. ಆತ್ಮ ಸಂರಕ್ಷಣಾರ್ಥವಾಗಿ ಈ ಸಮಸ್ತ ಭೂಮಿಯನ್ನೂ ತ್ಯಾಗಮಾಡಬಹುದು, ಆಪತ್ತು ಪರಿಹಾರಾರ್ಥವಾಗಿ ಧನವನ್ನು ರಕ್ಷಿಸಬೇಕು. ಧನ ದಿಂದ ಹೆಂಡತಿಯನ್ನು ರಕ್ಷಿಸಬೇಕು, ಹೆಂಡತಿಯಿಂದಲೂ ಧನದಿಂ ದಲೂ ತನ್ನ ಶರೀರವನ್ನು ಸಂರಕ್ಷಣೆಮಾಡಬೇಕು. ಈ ದ್ಯೋತವು ಪೂರ್ವಿಕರಿಂದ ವೈರಸಂಪಾದಕವಾದಂಥಾದ್ದಾ ಗಿ ನೋಡಲ್ಪಟ್ಟಿದೆ .ಆದಕಾರಣ ಬುದ್ಧಿಶಾಲಿಯಾದಂಥವನು ಪರಿಹಾಭಾ ರ್ಥವಾದರೂ ದೂತವನ್ನು ಸೇವಿಸಬಾರದು. ಎತೈ! ಧೃತರಾಷ್ಟ್ರ ನೇ, ಈ ಪ್ರತೀಪ ವಂಶದಲ್ಲಿ ರೂಢಿಯಾದ ದೂತವು ಯೋಗ್ಯವಾದದ್ದಲ್ಲವೆಂದು ಈ ದೂತಾಧಿಕಾರದಲ್ಲಿ ಯೇ ನನ್ನಿಂದ ಹೇಳಲ್ಪಟ್ಟಂಥಾದ್ದಾದರೂ ಪಥ್ಯವಾದ ವಸ್ತುವು ರೋಗಿಗೆ ಹಿತವಾಗದ ಹಾಗೆಯೆ ನಿನಗೆ ರುಚಿಸದೆ ಹೋಯಿತು. ವಿಚಿತ್ರವಾದ ಸಂಘಗಳುಳ್ಳ ನೌಲುಗಳಂಥ ಪಾಂಡವರನ್ನು ಕಾಗೆಗಳಂಥ ನಿನ್ನ ಮಕ್ಕಳಿಂದ ಬಯಸುವದಕ್ಕೆ ಇಚ್ಛಿಸುತ್ತ ಇದ್ದೀ ಸಿಂಹಗಳಂಥ ಪಾಂಡವರನ್ನು ತ್ಯಾಗಮಾಡಿ ನರಿಗಳನ್ನು ಸಂರಕ್ಷ್ಯ ಣೆಮಾಡುತ್ತ ಕಾಲ ಪ್ರಾಪ್ತಿಯಾದಾಗ ರೋದನವನ್ನು ಮಾಡುವಿ. ಎಳ್ಳೆ! ಅರಸನೇ, ಯಾವ ಪುರುಷನು ತನ್ನಲ್ಲಿ ಭಕ್ತನಾಗಿ ಹಿತಚಿಂತಕನಾದ ಭತ್ಯನವಿಷಯವಾಗಿ ಯಾವನು ಕೋಪವನ್ನು ಮಾ