ಪುಟ:ವಿದುರನೀತಿ ಮತ್ತು ನಾರದನೀತಿ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತ ಡನೆ ಆ ಕೃತ್ಯರಗಳ ಜೀವನವನ್ನು ಅಭ್ಯಂತರಸಿ ಧನವನ್ನು ಸಂಪಾದಿಸ ಇಚ್ಛಿಸಬಾರದು. ಯಾಕೆಂದರೆ ಈ ಧೋರೆಯಿಂದ ವಂಚಿನ ಲ್ಪಟ್ಟ ಆ ನೃತ್ಯರು ಅರಸಿನಲ್ಲಿ ವಿರೋಧಿಗಳಾಗಿ ಅರಸಿನದೆಶೆಯಿಂ ದ ಹೀನ ಭೋಗವುಂಟಾದವರಾಗಿ ಆ ಕೃತ್ಯರೂ ಮಂತ್ರಿಗಳೂ ಅರ ಸನನ್ನು ತ್ಯಾಗಮಾಡುವರು. ಅರಸನು ತಾನು ಮಾಡುವಂಥ ಕಾರ್ಯಗಳ ಲೆಖ್ಯವನ್ನು ಮಾಡಿ ತನಗೆ ಸಂಭವಿಸುವಂಥ ಆದಾಯವ್ರಯಗಳನ್ನು ತನ್ನ ಕುಲೋಚಿತವಾದ ಜೀವನಗಳನ್ನೂ ನೋಡಿ ತನಗೆ ಯೋಗ್ಯರಾದ ಸಹಾಯಧನರನ್ನು ಸಂಗ್ರಹಿಸತಕ್ಕದ್ದು. ಅ ಸಹಾಯದನರಗಳಿಂದ ಮಾಡದ ಕಾರ್ಯಗಳನ್ನು ಮಾಡುವದಕ್ಕೆ ಸಮರ್ಥರಾಗುವರು. ಅರಸನ ಅಭಿಪ್ರಾಯ ತಿಳಿದು ಸಮಸ್ತ ಕಾರ್ಯಗಳನ್ನು ತೋಂ ದರೆ ಬೀಳದ ಹಾಗೆ ಮಾಡುತ್ತಾ ತನಗೆ ಹಿತವನ್ನು ಹೇಳುತ್ತಾ ತನ್ನಲ್ಲಿ ಅನುರಾಗವುಂಟಾದವನಾಗಿ ತನ್ನ ಶಕ್ತಿಯನ್ನು ತಿಳದಂಥ ಪೂ ಆ್ಯನು ತನ್ನ ದೇಹಕ್ಕೆ ಸಮಾನನಾಗಿ ದಯಮಾಡತಕ್ಕಂಥವನು. ತೃರೆಬೀಳದವನು ಅಪ್ರತ್ಯಕ್ಷವಾಗಿ ಶಕುನ ಹೇಳುವವನನ್ನು ವೃಢಾ ಲೋಚನೆ ಮಾಡುವ ಮಂತ್ರಿಯನ್ನು ಪ್ರಸಾದ ಸೃಜನಗಳಿಲ್ಲದವನ ನ್ನು ಗರ್ವಿಷ್ಟನನ್ನೂ, ನಿರಂತರವೂ ರೋಗಿಷ್ಟನಾದವನನ್ನೂ, ಪ್ರತ್ಯ ತರವನ್ನು ಯುಕ್ತವಾಗಿ ಹೇಳದವನನ್ನೂ ಈ ಏಳು ವಿಧದಸೇವಕರ ನ್ನು ತ್ಯಾಗಮಾಡಬೇಕು. ತನ್ನಿಂದ ಆಹ್ವಾನಿಸಲ್ಪಟ್ಟವನಾಗಿ ಆ ಆಜ್ಞೆಯನ್ನು ಅದರಿಂದವನು ಆಜ್ಞಾಪಿಸಲ್ಪಟ್ಟವನಾಗಿ ಕಾರ್ಯ ವಿಘಟನಾರ್ಥವಾಗಿ ಪ್ರತ್ಯುತ್ತರವನ್ನು ಹೇಳುವವನೂ ತಾನೇ ಪ್ರಜ್ಞಾಶಾಲಿಯಂದು ಅಹಂಕಾರವುಳ್ಳವನೂ, ತಿರಸ್ಕಾರಮಾಡುವವನೂ, ಇಂಥ ಭೈತ್ಯರನ್ನು ತ್ಯಾಗಮಾಡಬೇಕು.