ಪುಟ:ವಿದುರನೀತಿ ಮತ್ತು ನಾರದನೀತಿ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿದುರನೀತಿ. ೫೯ ಯಥಾಯೋಗ್ಯವಾಗಿ ಕಾಲಾತಿಕ್ರಮವಿಲ್ಲದ ಹಾಗೆ ಧರ್ಮಾರ್ಥ ಕ್ ಮಗಳನ್ನು ಯಾವ ಪುರುಷನು ಸೇವಿಸುವನೋ ಆ ಪುರುಷನು ಧರ್ಮಾ ರ್ಥಕಾಮಜನ್ಯ ಸುಖಗಳನ್ನು ಇಹಪರ ಲೋಕಗಳಲ್ಲಿ ಹೊಂದುವನು. ತನಗೆ ಉಳ್ಳ ಕೊಧ ಹರುಷಗಳ ಅಧಿಪತ್ಯವನ್ನು ಯಾವ ಪುರುಷನು ನಿಗ್ರಹಿಸುವನೋ ಯಾವನು ಆಪತ್ಕಾಲದಲ್ಲಿ ಮೋಹ ಪಡುವನೋ ಆ ಪುರುಷರು ಸಂಸತ್ತಿಗೆಸಾನ ಭೂತರು. ಪುರುಷರ ಬಲವು ೫ ವಿಧಗಳಾಗಿವೆ. ಹಾಗಂದರ-ಬಹುಬಲ ವೆಂಬುವದೂ ಕನಿಷ್ಟಬಲವು, ಮಂತ್ರಿ ಲಾಭವು, ಎರಡನೇದು, ಧನ ಲಾಭವೂ ಮೂರನೇದು, ಸತ್ಕುಲಪ್ರಸೂತತ್ವವೆಂಬುವದೂ ನಾಲ್ಕನೇ ದು, ಪ್ರಾಬಲವೆಂಬುವದ ಐದನೇದು, ಈ ಐದೂ ಕ್ರಮವಾಗಿ ಒಂದಕ್ಕಿಂತಾ ಒಂದು ಶ್ರೇಷ್ಟವಾದದ್ದು, ಪುರುಷನವಿಷಯಕವಾಗಿ ಮಹತ್ತರವಾದ ಅಪಕಾರವನ್ನು ಮಾ ಡುವದಕ್ಕೋಸ್ಕರ ಯಾವ ಪುರುಷನು ಉದ್ಯುಕ್ತನಾಗುವನೋ ಆ ಪುರುಷನು ತನ್ನಿಂದ ಅಪಕಾರವನ್ನು ಹೊಂದಿದವನಗಿಂತಲು ತಾನು ಬಹುದೂರದಲ್ಲಿರುವವನಾದ ಕಾರಣ ಅವನ ಭಯವು ತನಗಿಲ್ಲವೆಂದು ಜಾಗರೂಕನಾಗದೆ ಇರಬಾರದು. ತನ್ನ ಸ್ವಕೀಯವಾದ ಸಮಸ್ತ ಅರಸುಗಳು ಶತ್ರುಗಳನ್ನು ಸೇ ವಿಸುತ್ತಿರಲಾಗಿ ಪಾನಾದ ಯಾವ ಪುರುಷನು “ಕೀಯವಾದ ಅಧ್ಯಯನದಲ್ಲೂ ಭೋಗಗಳಲ್ಲೂ ಬದುಕುವದರಲ್ಲೂ ವಿಶ್ವಾಸವ ನ್ನು ಮಾಡುವದಕ್ಕೋಸ್ಕರ ಸಮರ್ಥನಾಗುತ್ತಿದ್ದಾನೆ. * ಪ್ರಜ್ಞಾಶರದಿಂದ ಹೊಡೆಯಿಲ್ಲಂಥ ಜಂತುವಿನನ್ನು ಬದುಕಿ ಸುವದಕ್ಕೆ ಚಿಕಿತ್ಸಕರು ಎಲ್ಲಾ ಔಷಧಗಳೂ ಹೋಮಗಳೂ, ಮಂತ್ರ ಗಳೂ ಬಸ್ಸುಗಳೂ ಅಥರ್ವಣಮಂತ್ರಗಳೂ ರೋಗನಾಶಕಗಳಾದ ಮೂಲಿಕೆಗಳೂ, ಇವು ಯಾವೂ ಸಮರ್ಥವಾಗುವದಿಲ್ಲ.